Home Health Fried Green Peas: ಕರಿದ ಹಸಿರು ಬಟಾಣಿಯಲ್ಲಿ ಕೃತಕ ಬಣ್ಣ? ಬೀಳಲಿದೆಯೇ ಬ್ಯಾನ್‌ ತೂಗುಕತ್ತಿ? 

Fried Green Peas: ಕರಿದ ಹಸಿರು ಬಟಾಣಿಯಲ್ಲಿ ಕೃತಕ ಬಣ್ಣ? ಬೀಳಲಿದೆಯೇ ಬ್ಯಾನ್‌ ತೂಗುಕತ್ತಿ? 

Hindu neighbor gifts plot of land

Hindu neighbour gifts land to Muslim journalist

Fried Green Peas: ಕೃತಕ ಬಣ್ಣ ಬಳಕೆ ನಿಷೇಧಿಸಲು ಈಗಾಗಲೇ ಗೋಬಿ ಮಂಚೂರಿ, ಬಾಂಬೆ ಮಿಠಾಯಿ ಬ್ಯಾನ್‌ ಈಗಾಗಲೇ ರಾಜ್ಯದಲ್ಲಿ ಮಾಡಲಾಗಿದೆ. ಈ ಮೂಲಕ ಈಗಾಗಲೇ ಕೃತಕ ಬಣ್ಣ ಹಾಕಿ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದೆ. ಇದೀಗ ಈ ನಿಟ್ಟಿನಲ್ಲಿಯೇ ಮುಂದಿನ ಹೆಜ್ಜೆ ಕರಿದ ಹಸಿರು ಬಟಾಣಿಗಳ ಮೇಲೆ ರಾಜ್ಯ ಸರಕಾರದ ಕಣ್ಣು ಬಿದ್ದಿದೆ. ಕರಿದ ಹಸಿರು ಬಟಾಣಿಗಳು ಸ್ಯಾಂಪಲ್‌ಗಳನ್ನು ಸಂಗ್ರಹ ಮಾಡಿ ಲ್ಯಾಬ್‌ಗೆ ಕಳುಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಲ್ಯಾಬ್‌ ವರದಿ ಬಂದ ನಂತರ ಕಲರ್‌ ಅಳವಡಿಕೆ ನಿಷೇಧ ಮಾಡುವ ಸಾಧ್ಯತೆ ಹೆಚ್ಚಿದೆ. ಕಲರ್‌ ಬಳಕೆ ಮಾಡುವುದರ ಕುರಿತ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ರಾಜ್ಯಾದ್ಯಂತ ಹಸಿರು ಬಟಾಣಿ ಮಾರಾಟ ಮಾಡುವುದರ ಮಾದರಿಗಳನ್ನು ಸಂಗ್ರಹ ಮಾಡಿ ಅವುಗಳನ್ನು ವಿಶ್ಲೇಷಣೆ ಮಾಡಲು ಸರಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲು ಸೂಚನೆ ನೀಡಲಾಗಿದೆ.

70 ಹಸಿರು ಬಟಾಣಿಗಳನ್ನು ರಾಜ್ಯಾದ್ಯಂತ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 15 ದಿನಗಳೊಳಗೆ ವರದಿ ಬಂದ ನಂತರ ಕಾನೂನು ಕ್ರಮ ಜರುಗಿಸಲಾಗುತ್ತದೆ.