Home Food Dry Fish: ಒಣ ಮೀನು ನಿಮ್ಮ ಆರೋಗ್ಯದಲ್ಲಿ ಮ್ಯಾಜಿಕ್ ಮಾಡೋದು ಖಂಡಿತಾ!

Dry Fish: ಒಣ ಮೀನು ನಿಮ್ಮ ಆರೋಗ್ಯದಲ್ಲಿ ಮ್ಯಾಜಿಕ್ ಮಾಡೋದು ಖಂಡಿತಾ!

Dry Fish Benefits
image source: Go fresh

Hindu neighbor gifts plot of land

Hindu neighbour gifts land to Muslim journalist

Dry Fish Benefits: ಒಣ ಮೀನು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಸಹಕಾರಿಯಾಗಿದೆ. ಈ ಡ್ರೈ ಫಿಶ್​ನಲ್ಲಿ ಸಾಕಷ್ಟು ಪೌಷ್ಟಿಕಾಂಶದ ಅಂಶವನ್ನು ಹೊಂದಿದೆ. ಪ್ರೋಟೀನ್, ಆಂಟಿ-ಆಕ್ಸಿಡೆಂಟ್‌ಗಳು, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಬಿ 12, ಸೆಲೆನಿಯಮ್ ಹೀಗೆ ಅನೇಕ ಖನಿಜಗಳನ್ನು ಹೊಂದಿದೆ. ಮೀನನ್ನು ಒಣಗಿಸುವುದರಿಂದ ಸೂಕ್ಷ್ಮಜೀವಿಗಳು ಹತ್ತಿರವು ಸುಳಿವುದಿಲ್ಲ. ಅಲ್ಲದೇ ಈ ರೀತಿಯ ವಿಧಾನದಿಂದ ಮೀನನ್ನು ದೀರ್ಘಕಾಲ ಸಂರಕ್ಷಿಸಬಹುದು. ಆದರೆ ಒಣ ಮೀನನ್ನು ತಿನ್ನುವ ಅದೆಷ್ಟೂ ಮಂದಿಗೆ ಅದರಲ್ಲಿ ಅಡಗಿರುವ ಪೌಷ್ಟಿಕಾಂಶದ (Dry Fish Benefits) ಬಗ್ಗೆ ತಿಳಿದಿರುವುದಿಲ್ಲ.

ಇದರಲ್ಲಿರುವ ಪ್ರೋಟೀನ್ ಅಂಶವು, ದೇಹದಲ್ಲಿ ಶಕ್ತಿ ಹೆಚ್ಚಳಕ್ಕೆ ಕಾರಣವಾಗಿದೆ. ನಿಶಕ್ತಿ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.

ಸೋಡಿಯಂ ಖನಿಜವು ನರಗಳು ಮತ್ತು ಸ್ನಾಯುಗಳ ಬಲಗೊಳ್ಳಲು ಸಹಕಾರಿಯಾಗಿದೆ. ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಇದರ ಸೇವನೆಯಿಂದ ನಿಯಂತ್ರಣಕ್ಕೆ ತರುತ್ತದೆ.

ಹೇರಳವಾಗಿರುವ ಪೊಟ್ಯಾಸಿಯಮ್ ದೇಹದಲ್ಲಿ ನೀರಿನ ಸಮತೋಲನ ಸರಿಸಮ ಮಾಡಿ ದೇಹದ ಚಲನೆ ಜೊತೆಯಲ್ಲಿ ನಮ್ಮ ನರಮಂಡಲ, ಸ್ನಾಯುಗಳು ಮತ್ತು ಹೃದಯ ಆರೋಗ್ಯವನ್ನು ಕಾಪಾಡುತ್ತದೆ.

ಇದರಲ್ಲಿನ ವಿಟಮಿನ್ ಬಿ 12 ,ಸೆಲೆನಿಯಮ್ ಅಂಶವು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮಾನವ ದೇಹದಲ್ಲಿ ನರಮಂಡಲ, ಜೀರ್ಣಾಂಗ ವ್ಯವಸ್ಥೆಗೂ ಸಹಕಾರಿಯಾಗಿದೆ.

ಇದರಲ್ಲಿರುವ ಸೆಲೆನಿಯಮ್ ದೇಹದಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಅಗತ್ಯವಿದೆ. ಆದರೆ, ಇದು ದೇಹದಲ್ಲಿ ಪ್ರೋಟೀನ್​ಗಳು ಮತ್ತು ಆಂಟಿ-ಆಕ್ಸಿಡೆಂಟ್ ಕಿಣ್ವಗಳ ಉತ್ಪಾದನೆಯಲ್ಲಿ ಭಾಗವಹಿಸುತ್ತದೆ. ಈ ಅಂಶವು ದೇಹದ ಜೀವಕೋಶಗಳ ನಾಶವನ್ನು ಸಹ ತಡೆಯುತ್ತದೆ.

ಇನ್ನು ನಿಯಾಸಿನ್ ದೇಹವು ಆಹಾರದಿಂದ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಈ ವಸ್ತುವು ಮಾನವ ದೇಹದಲ್ಲಿ ನರಮಂಡಲ, ಜೀರ್ಣಾಂಗ ವ್ಯವಸ್ಥೆ ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ರಂಜಕ ಈ ಪೋಷಕಾಂಶವು ನಮ್ಮ ಮೂಳೆಗಳು, ಹಲ್ಲುಗಳು ಮತ್ತು DNA ಮತ್ತು RNA ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮೇಲಿನ ಎಲ್ಲಾ ಪದಾರ್ಥಗಳ ಹೊರತಾಗಿ, ಒಣಗಿದ ಮೀನಿನಲ್ಲಿ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಕಡಿಮೆ. ಆದ್ದರಿಂದ ಇದು ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ. ಇನ್ನು ತೂಕವನ್ನು ನಿಯಂತ್ರಿಸಲು ಡಯಟ್ ಮಾಡುವವರು, ಪ್ರೋಟೀನ್‌ನ ಉತ್ತಮ ಮೂಲವಾಗಿ ಅವರು ತಮ್ಮ ಆಹಾರದಲ್ಲಿ ಒಣಗಿದ ಮೀನುಗಳನ್ನು ಸೇವಿಸಬಹುದು. ಏಕೆಂದರೆ ಇದು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ. 100 ಗ್ರಾಂ ಒಣಗಿದ ಮೀನು ಸುಮಾರು 80 ಪ್ರತಿಶತ ಪ್ರೋಟೀನ್ ಮತ್ತು ಸುಮಾರು 300 ಕ್ಯಾಲೋರಿಗಳನ್ನು ಹೊಂದಿರುತ್ತದೆ.

 

ಇದನ್ನು ಓದಿ: Actress Pooja Bedi: ‘ನನ್ನದೇ ಬಿಕಿನಿ ಹಿಡಿದುಕೊಂಡು ಮನೆಗೆ ನುಗ್ಗಿಬಿಟ್ಟಿದ್ದ’ ; ಹುಚ್ಚು ಅಭಿಮಾನಿಯ ಹುಚ್ಚಾಟ ಬಿಚ್ಚಿಟ್ಟ ನಟಿ ಪೂಜಾ!!