Home Food Gobi manchuri ban: ರಾಜ್ಯದಲ್ಲಿ ಗೋಬಿ ಮಂಚೂರಿ ಬ್ಯಾನ್ ?!

Gobi manchuri ban: ರಾಜ್ಯದಲ್ಲಿ ಗೋಬಿ ಮಂಚೂರಿ ಬ್ಯಾನ್ ?!

Hindu neighbor gifts plot of land

Hindu neighbour gifts land to Muslim journalist

Gobi manchuri ban: ರಾಜ್ಯದ ಗೋಬಿಮಂಚೂರಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಕೆಲ ಸಮಯದ ಹಿಂದೆ ಗೋವಾ, ತಮಿಳುನಾಡಿನಲ್ಲಿ ಕಾಟನ್ ಕ್ಯಾಂಡಿ (Cotton Candy) ಹಾಗೂ ಗೋಬಿ ಮಂಚೂರಿಯಲ್ಲಿ (Gobi Manchuri) ಕೆಲವು ಹಾನಿಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಈ ಆಹಾರಗಳನ್ನು ಬ್ಯಾನ್ ಮಾಡಲಾಗಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ಬ್ಯಾನ್ ಆಗುತ್ತೆ ಎಂಬ ವಿಚಾರ ಸದ್ದುಮಾಡುತ್ತಿದೆ.

 

ಹೌದು, ಕಾಟನ್ ಕ್ಯಾಂಡಿ (Cotton Candy) ಹಾಗೂ ಗೋಬಿ ಮಂಚೂರಿಯನ್ನು (Gobi Manchuri) ಬ್ಯಾನ್ ಮಾಡಬೇಕೆಂದು ಈ ಹಿಂದೆಯೇ ಚರ್ಚೆಯ ವಿಷಯವಾಗಿತ್ತು. ತಮಿಳು ನಾಡಿನಲ್ಲಿ ಇದು ಬ್ಯಾನ್ ಆದ ಬಳಿಕ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯ ಕಲರ್ ಜೆಲ್ಲಿಗಳನ್ನು ಸ್ಯಾಂಪಲ್ ಟೆಸ್ಟ್‌ಗೆ ಒಳಪಡಿಸಿಲಾಗಿತ್ತು. ಇದೀಗ ಕಾಟನ್ ಕ್ಯಾಂಡಿ ಜೆಲ್ಲಿ ಹಾಗೂ ಗೋಬಿ ಮಂಚೂರಿಯ ಟೆಸ್ಟಿಂಗ್ ರಿಪೋರ್ಟ್ ಆರೋಗ್ಯ ಇಲಾಖೆ (Health Department) ಕೈ ಸೇರಿದೆ.

 

ಅಂದಹಾಗೆ ರಿಪೋರ್ಟ್ ನಲ್ಲಿ ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದ್ದು, ಗೋಬಿ ಮಂಚೂರಿಯಲ್ಲಿ Sunset Yellow ಮತ್ತು Tartrazine ಅಂಶ ಇರುವುದು ಪತ್ತೆಯಾಗಿದೆ. ರಾಸಾಯನಿಕ ಕಲಬೆರಕೆ ಇರುವುದರಿಂದ ಕಾಟನ್ ಕ್ಯಾಂಡಿ ಬ್ಯಾನ್ ಮಾಡುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಗೋಬಿಯೂ ಬ್ಯಾನ್ ಆಗಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಕುರಿತಂತೆ ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ರಿಪೋರ್ಟ್ ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದು, ಸೋಮವಾರ (ಮಾ.11) ಆರೋಗ್ಯ ಸಚಿವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ.

 

ರೊಡಮೈನ್ ಬಿ ಸೇವನೆಯಿಂದ ಆಗುವ ದುಷ್ಪರಿಣಾಣಮವೇನು?

ರೊಡಮೈನ್ ಬಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿದೆ. ಗೋಬಿಯಲ್ಲಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚಿವೆ. ಕಣ್ಣು ದೃಷ್ಟಿ ಸಮಸ್ಯೆ ಹಾಗೂ ಲಿವರ್ ಸಂಬಂಧಿ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ :ಒಂದೇ ಒಂದು ಸಾರಿ ಬಟರ್ ಚಿಕನ್ ತಿಂದಿದ್ದಷ್ಟೇ ಸತ್ತೇ ಹೋದ