

Chewing Gum: ನಮ್ಮ ಬಾಲ್ಯದಲ್ಲಿ ಕೆಲವೊಂದು ತಿಂಡಿ ತಿನಿಸುಗಳು ಅಚ್ಚುಮೆಚ್ಚಿನದಾಗಿರುತ್ತದೆ. ಜೀರಿಗೆ ಮಿಠಾಯಿ, ಲಾಲಿ ಪಪ್, ಶುಂಠಿ ಮಿಠಾಯಿ ಹೀಗೆ ಹೇಳಲು ಹೋದರೆ ಹತ್ತು ಹಲವಾರು ಇವೆ. ಸದ್ಯ ಚ್ಯೂಯಿಂಗ್ ಗಮ್ ಎಂದರೆ ಇನ್ನು ಹೆಚ್ಚು ಬಾಲ್ಯದ ಕ್ಷಣಗಳನ್ನು ನೆನಪಿಸುತ್ತೆ. ಯಾರಾದರೂ ಹಣ ನೀಡಿದ್ರೆ ಸಾಕು ಅಂಗಡಿ ಹೋಗಿ ಚ್ಯೂಯಿಂಗ್ ಗಮ್ (Chewing Gum) ತೆಗೆದುಕೊಂಡು ಬಾಯಿಯಲ್ಲಿ ಅಗೆಯುತ್ತ ಕುಳಿತುಕೊಳ್ಳುತ್ತಿದ್ವಿ. ಆಮೇಲೆ ಉದ್ದಕೆ ಎಳೆದು ಆಟ (geam)ಆಡೋದು, ಬಾಯಲ್ಲಿ ಗಾಳಿ ಬುಗ್ಗೆ ಮಾಡೋದು, ಚ್ಯೂಯಿಂಗ್ ಗಮ್ ನ್ನು ಕ್ಲೇ ತರ ಉಪಯೋಗಿಸೋದು ಹೀಗೆ ಮಾಡಿ ಕೊನೆಗೆ ಗುಳುಂ ಅಂತ ನುಂಗಿ ಬಿಟ್ಟು ಮನೆಯವರ ಬೈಗುಳ ತಿನ್ನುತ್ತಾ ಇರುವ ನೆನಪು ಇನ್ನು ಶಾಶ್ವತ ಆಗಿದೆ. ಕೇವಲ ಮಕ್ಕಳಷ್ಟೇ (children)ಅಲ್ಲ ದೊಡ್ಡವರಿಗೂ ಚ್ಯೂಯಿಂಗ್ ಗಮ್ ಎಂದರೆ ತುಂಬಾ ಇಷ್ಟ. ಆದರೆ ಚ್ಯೂಯಿಂಗ್ ಗಮ್ ನುಂಗಿದರೆ ಒಂದು ತರ ಭಯ ಕಾಡುತ್ತೆ. ಅಷ್ಟಕ್ಕೂ ಚ್ಯೂಯಿಂಗ್ ಗಮ್ ನುಂಗಿದರೆ ಏನಾಗುತ್ತೆ ಅಂತ ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ಚೂಯಿಂಗ್ ಗಮ್ ನುಂಗಿದ ನಂತರ ಯಾವುದೇ ಆರೋಗ್ಯದ ಪರಿಣಾಮಗಳು ಕಂಡುಬರುವುದಿಲ್ಲ. ಚೂಯಿಂಗ್ ಗಮ್ ಅನ್ನು ಪದೇ ಪದೇ ನುಂಗಿದರೆ, ಅದು ಆರೋಗ್ಯಕ್ಕೆ(health )ಗಂಭೀರ ಹಾನಿಯನ್ನುಂಟುಮಾಡುತ್ತದೆ, ನೀವು ಚ್ಯೂಯಿಂಗ್ಗಮ್ ಅನ್ನು ನಿಯಮಿತವಾಗಿ ನುಂಗಿದರೆ ನೀವು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು.
ಆಧುನಿಕ ಚೂಯಿಂಗ್ ಗಮ್, ಗಮ್ ಬೇಸ್ , ಸಿಹಿಕಾರಕಗಳು, ಮೃದುಗೊಳಿಸುವಿಕೆಗಳು / ಪ್ಲಾಸ್ಟಿಸೈಜರ್‌ಗಳು , ಸುವಾಸನೆಗಳು, ಬಣ್ಣಗಳು ಮತ್ತು ವಿಶಿಷ್ಟವಾಗಿ, ಗಟ್ಟಿಯಾದ ಅಥವಾ ಪುಡಿಮಾಡಿದ ಪಾಲಿಯೋಲ್ ಲೇಪನದಿಂದ ಕೂಡಿದೆ .
ಯಾವಾಗಲೂ ಚ್ಯೂಯಿಂಗ್ ಗಮ್ ಜಗಿಯಬೇಕು, ಅದನ್ನು ನುಂಗಬಾರದು, ಚ್ಯೂಯಿಂಗ್ ಗಮ್ ನುಂಗಿದರೆ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಚ್ಯೂಯಿಂಗ್ ಗಮ್ ಹೊಟ್ಟೆಗೆ ಹೋದರೆ ಅದು ಯಾವುದೇ ಕಾರಣಕ್ಕೆ ಜೀರ್ಣವಾಗುವುದಿಲ್ಲ. ಚ್ಯೂಯಿಂಗ್ ಗಮಲ್ಲಿ ಅಂಟಿನ ವಸ್ತು ಅಧಿಕವಾಗಿರುವುದರಿಂದ ಜೀರ್ಣರಸಗಳಿಂದ ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ ಅದು ಅದೇ ಅವಸ್ಥೆಯಲ್ಲಿ ಸುಮಾರು 40 ಗಂಟೆ ಹೊಟ್ಟೆಯಲ್ಲಿ ಉಳಿಯುತ್ತದೆ. ಬಳಿಕವೇ ಅದು ಮಲದ ರೂಪದಲ್ಲಿ ಹೊಟ್ಟೆಯಿಂದ ಹೊರಗೆ ಬರುತ್ತದೆ.
ಯಾವಾಗಲಾದರು ಒಮ್ಮೆ ಮಕ್ಕಳು ಚ್ಯೂಯಿಂಗ್ ಗಮ್ ನುಂಗಿದರೆ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಮಕ್ಕಳು ಪದೇ ಪದೇ ಚ್ಯೂಯಿಂಗ್ ಗಮ್ ನುಂಗಿದರೆ ಅದು ಮಗುವಿನ ಆರೋಗ್ಯಕ್ಕೆ ಕೆಟ್ಟದಾಗಿ ಪರಿಣಮಿಸುತ್ತದೆ. ನಿಮ್ಮ ಮಗುವಿಗೆ ಮಲಬದ್ದತೆ ಏನಾದರೂ ಇದ್ದರೆ ಈ ಬಬಲ್ ಗಮ್ ಅನಾಹುತಕಾರಿ ಆಗಬಲ್ಲದು. ಇದು ಕರುಳಿನಲ್ಲಿ ಸೇರಿಕೊಂಡು ಕರುಳಿನ ಬ್ಲಾಕೇಜ್ ಸೃಷ್ಟಿಸಬಹುದು. ಈ ರೀತಿ ಕರುಳಿನಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ ದೇಹವು ಅವುಗಳನ್ನು ಕರಗಿಸಲು ಬೇಕಾದ ಜೀರ್ಣಕಾರಿ ಕಿಣ್ವಗಳನ್ನು ಸಹ ಉತ್ಪಾದಿಸುವುದಿಲ್ಲ. ಅದಕ್ಕಾಗಿಯೇ ಅದು ಹೊಟ್ಟೆಯಲ್ಲಿ ಅನೇಕ ಬಾರಿ ಉಳಿಯುತ್ತದೆ.
ಚೂಯಿಂಗ್ ಗಮ್ ಅನ್ನು ಅತಿಯಾಗಿ ಜಗಿಯುವುದರಿಂದ ಹೊಟ್ಟೆಯಲ್ಲಿ ಸಮಸ್ಯೆಗಳು (stomach problem)ಉತ್ಪತ್ತಿಯಾಗುತ್ತವೆ. ಉದಾಹರಣೆಗೆ, ಇದು ಹೊಟ್ಟೆಯ ಕಿರಿಕಿರಿ ಮತ್ತು ಅನಿಲ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ಹೊಟ್ಟೆ ಭಾರ ಎನಿಸಬಹುದು.
ಪ್ರಮುಖವಾಗಿ 1998ರ ಪಿಡಿಯಾಟ್ರಿಕ್ಸ್ ಜರ್ನಲಲ್ಲಿ ಪ್ರಕಾಶಿತವಾಗಿರುವ ವರದಿ ಪ್ರಕಾರ, ಒಂದು ವೇಳೆ ಮಕ್ಕಳು ಬಬಲ್ ಗಮ್ ನುಂಗಿದರೆ ಮಕ್ಕಳಲ್ಲಿ ತೀವ್ರ ತರಹದ ಹೊಟ್ಟೆ ನೋವು ಕಾಣಿಸುತ್ತದೆ. ವಾಂತಿ ಉಂಟಾಗುತ್ತದೆ. ಮಲ ಬದ್ದತೆಯಾಗುತ್ತದೆ.
ಸಕ್ಕರೆಯುಕ್ತ ಚೂಯಿಂಗ್ ಗಮ್ ಅನ್ನು ದಿನಕ್ಕೆ ಹಲವಾರು ಬಾರಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ (blood sugar) ಹೆಚ್ಚುತ್ತದೆ. ಸಕ್ಕರೆ ರಹಿತ ಚೂಯಿಂಗ್ ಗಮ್ ನ ಹೆಚ್ಚಿನ ಬಳಕೆಯು ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಹಲ್ಲುಗಳು ಡ್ಯಾಮೇಜ್ ಆಗೋದನ್ನು ತಪ್ಪಿಸಲು ಇದನ್ನು ತಿನ್ನದೇ ಇರೋದು ಉತ್ತಮ. ಒಟ್ಟಿನಲ್ಲಿ ಚೂಯಿಂಗ್ ಗಮ್ ಅನ್ನು ಮಕ್ಕಳಿಂದ ದೂರ ಇರಿಸುವುದೇ ಉತ್ತಮ.













