Home Fashion Nail Polish : ಕೈ ಬೆರಳುಗಳಿಗೆ ಹಚ್ಚಿದ ಬಣ್ಣ ರಿಮೂವರ್ ಇಲ್ಲದೆ ತೆಗೆಯೋದು ಹೇಗೆ ?

Nail Polish : ಕೈ ಬೆರಳುಗಳಿಗೆ ಹಚ್ಚಿದ ಬಣ್ಣ ರಿಮೂವರ್ ಇಲ್ಲದೆ ತೆಗೆಯೋದು ಹೇಗೆ ?

Hindu neighbor gifts plot of land

Hindu neighbour gifts land to Muslim journalist

ನೇಲ್ ಪಾಲಿಶ್ ಕೈಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಎರಡು ಮಾತಿಲ್ಲ. ಮಾರುಕಟ್ಟೆ ಯಲ್ಲಿ ಬಗೆ ಬಗೆಯ ನೇಲ್ ಪಾಲಿಶ್ ಗಳು ದೊರಕುತ್ತದೆ. ಒಂದೊಂದು ಉಗುರಿಗೆ ಒಂದೊಂದು ಬಣ್ಣ ಹಚ್ಚಿಕೊಳ್ಳುವವರಿದ್ದಾರೆ. ನೇಲ್ ಪಾಲಿಶ್ ಹಚ್ಚಿದ್ರೆ ಸಾಲುವುದಿಲ್ಲ ಆಗಾಗ ಅದರ ಆರೈಕೆ ಕೂಡಾ ಮಾಡುವುದು ಮುಖ್ಯ. ಅಂದ್ರೆ ನೇಲ್ ಪಾಲಿಶ್ ಹಚ್ಚಿದ ಕೆಲ ದಿನಗಳಲ್ಲಿಯೇ ಅಲ್ಲಲ್ಲಿ ಬಣ್ಣ ಹೋಗುತ್ತದೆ. ಆಗ ಹಳೆ ನೇಲ್ ಪಾಲಿಶ್ ತೆಗೆದು ಹೊಸ ನೇಲ್ ಪಾಲಿಶ್ ಹಾಕಬೇಕು. ಹಿಂದಿನ ಕಾಲದಲ್ಲಿ ಜನರು ನೇಲ್ ಪಾಲಿಶ್ ತೆಗೆಯಲು ಬ್ಲೇಡನ್ನು ಬಳಸುತ್ತಿದ್ದರು. ಬ್ಲೇಡ್ ನಿಂದ ಬಣ್ಣ ತೆಗೆಯುತ್ತಿರುವ ಸಮಯದಲ್ಲಿ ಉಗುರು ಕೂಡ ಬರ್ತಿತ್ತು. ನೇಲ್ ಪಾಲಿಶ್ ಜೊತೆ ಅದನ್ನು ತೆಗೆಯಲು ಅನೇಕ ಕಂಪನಿಗಳ ನೇಲ್ ರಿಮೂವರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ನೇಲ್ ರಿಮೂವರ್ ನಮ್ಮ ಕೈಗೆ ಸಿಗುವುದಿಲ್ಲ. ಆಗ ಹಳೆ ವಿಧಾನದಂತೆ ಉಗುರು ಕೆರೆಯಲು ಶುರು ಮಾಡಬೇಕಾಗುತ್ತದೆ. ಹಾಗೆ ಮಾಡಿದ್ರೆ ಉಗುರು ಹಾಳಾಗುತ್ತದೆ. ಒಂದು ವೇಳೆ ನೇಲ್ ರಿಮೂವರ್ ಖಾಲಿಯಾಗಿದೆ ಇಲ್ಲವೆ
ಕೈಗೆ ಸಿಗ್ತಿಲ್ಲವೆಂದಾದ್ರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ನೀವು ಸುಲಭವಾಗಿ ಪಾಲಿಶ್ ತೆಗೆಯಬಹುದು. ನೇಲ್ ಪಾಲಿಶ್ ತೆಗೆಯಲು ಮನೆಯ ಯಾವು ವಸ್ತುಗಳನ್ನು ಬಳಸಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ನೇಲ್ ಪಾಲಿಶ್ ರಿಮೂವರ್ ಆಗಿ ಟೂತ್ ಪೇಸ್ಟ್ : ಹಲ್ಲುಜ್ಜಲು ಮಾತ್ರವಲ್ಲದೇ ನೇಲ್ ಪಾಲಿಶ್ ತೆಗೆಯಲು ಕೂಡಾ ಇದನ್ನು ಬಳಸಬಹುದು. ನೀವು ಮನೆಯಲ್ಲಿ ಬಳಸುವ ಟೂತೇಸ್ಟ್ ನಲ್ಲಿಯೇ ನೀವು ಬಣ್ಣ ತೆಗೆಯಬಹುದು. ಇದು ಉಗುರುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಉಗುರುಗಳನ್ನು ಸ್ವಚ್ಛಗೊಳಿಸಲು ಟೂತ್ ಪೇಸ್ಟ್ ಮತ್ತು ಹಳೆಯ ಟೂತ್ ಬ್ರಷ್ ತೆಗೆದುಕೊಂಡು ಉಗುರುಗಳ ಮೇಲೆ ಹಚ್ಚಿ. ಬ್ರಷ್ ಅನ್ನು ಒದ್ದೆ ಮಾಡಿ ಉಗುರುಗಳ ಮೇಲೆ ಉಜ್ಜಿ. ಉಗುರಿನ ಮೇಲೆ ಮಾತ್ರ ಬ್ರಷ್ ಹಾಕಿ. ಚರ್ಮಕ್ಕೆ ಬ್ರಷ್ ತಾಗದಂತೆ ನೋಡಿಕೊಳ್ಳಿ. ಯಾಕೆಂದ್ರೆ ಬ್ರಷ್ ನಿಂದ ಉಜ್ಜಿದ್ರೆ ಚರ್ಮಕ್ಕೆ ಹಾನಿಯಾಗಬಹುದು.

ನಿಂಬೆ ರಸ ಮತ್ತು ವಿನೆಗರ್ : ನೇಲ್ ಪಾಲಿಶ್ ರಿಮೂವರ್ ಆಗಿ ನೀವು ಇದನ್ನು ಬಳಸುತ್ತಿದ್ದರೆ ಮೊದಲು ಒಂದು ಬೌಲ್ ಗೆ ಉಗುರು ಬೆಚ್ಚಗಿನ ನೀರನ್ನು ಹಾಕಿಕೊಳ್ಳಿ. 10 ರಿಂದ 15 ನಿಮಿಷಗಳ ಕಾಲ ಈ ನೀರಿನಲ್ಲಿ ಬೆರಳುಗಳನ್ನು ಅದ್ದಿ. ಇದರ ನಂತರ, ಒಂದು ಬಟ್ಟಲಿನಲ್ಲಿ ಎರಡು ಚಮಚ ನಿಂಬೆ ರಸ ಮತ್ತು ವಿನೆಗರ್ ಮಿಶ್ರಣ ಹಾಕಿ. ಇದರ ನಂತರ ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಉಗುರಿನ ಮೇಲೆ ಹಚ್ಚಿ. ನಂತ್ರ ನಿಧಾನವಾಗಿ ಉಜ್ಜಿ. ನಿಮ್ಮ ಉಗುರಿನ ಬಣ್ಣ ಸುಲಭವಾಗಿ ಹೋಗುತ್ತದೆ.

ಹೇರ್ ಸ್ಪ್ರೇ : ಇದು ಕೂಡ ನಿಮಗೆ ನೇಲ್ ಪಾಲಿಶ್ ರಿಮೂವರ್ ಆಗಿ ಬಳಕೆಗೆ ಬರುತ್ತದೆ. ಹೇರ್ ಸ್ಪ್ರೇನಲ್ಲಿ ರಬ್ಬಿಂಗ್ ಆಲ್ಕೋಹಾಲ್ ಇದೆ. ಇದು ನೇಲ್ ಪಾಲಿಶ್ ತೆಗೆದುಹಾಕಲು ಸಹಾಯ ಮಾಡುತ್ತದೆ. ನೇಲ್ ಪಾಲಿಶ್ ತೆಗೆಯಲು ಮೊದಲು ಉಗುರಿನ ಮೇಲೆ ಹೇರ್ ಸ್ಪ್ರೇ ಸಿಂಪಡಿಸಿ. ನಂತರ ಅದನ್ನು ಹತ್ತಿಯ ಸಹಾಯದಿಂದ ಲಘುವಾಗಿ ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ನಿಮ್ಮ ಉಗುರುಗಳು ತೊಳೆಯಿರಿ. ಉಗುರಿನ ಮೇಲಿರುವ ನೇಲ್ ಪಾಲಿಶ್ ಹೋಗಿರುತ್ತದೆ.

ಸ್ಯಾನಿಟೈಸರ್ : ನೇಲ್ ಪಾಲಿಶ್ ಬಣ್ಣ ಹೋಗಲು ಹ್ಯಾಂಡ್ ಸ್ಯಾನಿಟೈಸರ್ ಕೂಡಾ ಬಳಸಬಹುದು. ಸ್ಯಾನಿಟೈಸರ್‌ನಲ್ಲಿ ರಬ್ಬಿಂಗ್ ಆಲ್ಕೋಹಾಲ್ ಇದೆ. ಇದು ಉಗುರುಗಳನ್ನು ಸ್ವಚ್ಛಗೊಳಿಸಲು ತುಂಬಾ ಸಹಾಯಕವಾಗಿದೆ. ಸ್ಯಾನಿಟೈಸರ್ ನಿಂದ ನೇಲ್ ಪಾಲಿಶ್ ತೆಗೆಯಲು ಮೊದಲು ಹತ್ತಿಯನ್ನು ತೆಗೆದುಕೊಳ್ಳಿ. ಅದರ ಮೇಲೆ ಸ್ಯಾನಿಟೈಸರ್ ಹಚ್ಚಿ ನಂತರ ಉಗುರಿಗೆ ಹಚ್ಚಿ ಉಜ್ಜಿ. ಇದನ್ನು 3 ರಿಂದ 4 ಬಾರಿ ಮಾಡಿ.