Home Entertainment Viral Video: ಸೀರೆಯುಟ್ಟು ಫುಟ್ಬಾಲ್ ಆಡಿದ ಮಹಿಳೆಯರು ; ಸಖತ್ ವೈರಲ್ ಆಯ್ತು ವಿಡಿಯೋ!!!

Viral Video: ಸೀರೆಯುಟ್ಟು ಫುಟ್ಬಾಲ್ ಆಡಿದ ಮಹಿಳೆಯರು ; ಸಖತ್ ವೈರಲ್ ಆಯ್ತು ವಿಡಿಯೋ!!!

Women In Saree Play Football

Hindu neighbor gifts plot of land

Hindu neighbour gifts land to Muslim journalist

Women In Saree Play Football : ಹಿಂದಿನ ಕಾಲದಲ್ಲಿ ಮಹಿಳೆಯರು (women) ಕೇವಲ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿದ್ದರು. ಹೊರಗಿನ ಪ್ರಪಂಚದ ಅರಿವಿರಲಿಲ್ಲ. ಆದರೆ ಇಂದು ಹಾಗಿಲ್ಲ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಸಾಧನೆ ಮಾಡಿ ಸಾಧಕಿಗಳಾಗುತ್ತಿದ್ದಾರೆ. ಅಂತೆಯೇ ಇದೀಗ ಮಹಿಳೆಯರ ತಂಡವೊಂದು ಸೀರೆಯುಟ್ಟು ಫುಟ್ಬಾಲ್ ಆಡಿರುವ (Women In Saree Play Football) ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ
ಸಿಕ್ಕಾಪಟ್ಟೆ ವೈರಲ್ (viral video) ಆಗಿದೆ.

ಮಧ್ಯ ಪ್ರದೇಶದ ಗ್ವಾಲಿಯರ್ ಎಂಬಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಹಿರಿಯ ಸದಸ್ಯ ಸಂಘ (ಜಾಗತಿಕ ಲಾಭರಹಿತ ಎನ್‌ಜಿಒ) ವತಿಯಿಂದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ಕಾರ್ಯಕ್ರಮಕ್ಕೆ ‘ಗೋಲ್ ಇನ್ ಸೀರೆ’ (goal in saree) ಎಂದು ಹೆಸರಿಡಲಾಗಿತ್ತು. ಅಂದ್ರೆ ಸೀರೆಯುಟ್ಟು ಫುಟ್ಬಾಲ್ (football) ಆಡಬೇಕು ಎಂಬುದಾಗಿದೆ.

ಸದ್ಯ ಈ ಪಂದ್ಯಾವಳಿ ಕಾರ್ಯಕ್ರಮದ ಅದ್ಭುತ ದೃಶ್ಯವನ್ನು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಫುಟ್ಬಾಲ್ ತಂಡದಲ್ಲಿ ಸೀರೆಯುಟ್ಟ 20 ರಿಂದ ವರ್ಷ 50 ರ ವಯಸ್ಸಿನ ಮಹಿಳೆಯರೂ ಇದ್ದರು. ಈ ಮಹಿಳೆಯರ ಎನರ್ಜಿ, ಆಡುವ ಉತ್ಸಾಹ ಯುವ ಪೀಳಿಗೆಗೆ ಸ್ಪೂರ್ತಿಯಾಗಿದೆ.

ಈ ವಿಡಿಯೋವನ್ನು ಬ್ರಜೇಶ್ ರಜಪೂತ್ ಎಂಬುವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯರ ಮೋಜಿನ ಆಟ ನೋಡಿದ ನೆಟ್ಟಿಗರು ವ್ಹಾ!! ಏನ್ ಎನರ್ಜಿ ಎಂದೆನ್ನುತ್ತಾ ಕಾಮೆಂಟ್ ಮಾಡುತ್ತಿದ್ದಾರೆ. ಯೌವನ ದಾಟಿದರು ಫುಟ್ಬಾಲ್ ಆಡುವ ಇವರ ಉತ್ಸಾಹಕ್ಕೆ ಭೇಷ್ ಅಂದರು.