

Stray Dogs: ಬೈಕ್ ಗಳ (bike) ಹಿಂದೆ ಬೀದಿ ನಾಯಿಗಳು (Stray Dogs) ಅಟ್ಟಾಡಿಸಿಕೊಂಡು ಹೋಗೋದು ನೋಡಿರುತ್ತೀರಾ!!. ಈ ನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳೋದಕ್ಕೆ ಬೈಕ್ ಸವಾರರು ಹೈ ಸ್ಪೀಡ್ ಅಲ್ಲಿ ಹೋಗಿ ನಾಯಿಗಳ (Dog) ಕಣ್ಣಿಂದ ಕಣ್ಮರೆಯಾಗುತ್ತಾರೆ. ನಾಯಿಗಳಿಂದ ಪಾರಾಗಲು ಹೀಗೆ ಹೈ ಸ್ಪೀಡ್ ಅಲ್ಲಿ ಬೈಕ್ ಓಡಿಸಿ ಇನ್ನೇನೋ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ. ಇನ್ನು ಅಲ್ಲೇ ಇದ್ದರೆ ನಾಯಿಗಳೇ ಒಂದು ಗತಿ ಕಾಣಿಸಿಬಿಡುತ್ತವೆ. ಹಾಗಿದ್ದರೆ, ಈ ಬೀದಿನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳೋದು ಹೇಗೆ? ಈ ಸಮಸ್ಯೆಗೆ ಪರಿಹಾರವೇ ಇಲ್ವಾ?? ಇಲ್ಲಿದೆ ನೋಡಿ ಐಡಿಯಾ!!.
ಬೈಕ್ ನಲ್ಲಿ ಹೋಗುವಾಗ ನಾಯಿಗಳು ಅಟ್ಟಿಸಿಕೊಂಡು ಬರಬಾರದು ಅಂದ್ರೆ ಈ ಟ್ರಿಕ್ ಫಾಲೋ ಮಾಡಿ. ಬೈಕ್ ಗೆ ಒಂದು ಅಲ್ಟ್ರಾಸಾನಿಕ್ ಡಾಗ್ ರೆಪೆಲ್ಲಂಟ್ (Ultrasonic Dog Repellent) ಅನ್ನು ಅಳವಡಿಸಿ. ನೀವು ಬೈಕ್ ಓಡಿಸುವಾಗ ನಾಯಿಗಳು ದಾಳಿ ಮಾಡಲು ಬೆನ್ನಟ್ಟಿ ಬಂದರೆ, ಆಗ ಈ ಬೈಕ್ ಹಿಂದೆ ಅಳವಡಿಸಿರುವ ಅಲ್ಟ್ರಾಸಾನಿಕ್ ಡಾಗ್ ರೆಪೆಲ್ಲಂಟ್ ಜೋರಾಗಿ ಶಬ್ದ ಮಾಡುತ್ತದೆ. ಆಗ ನಾಯಿಗಳು ಹೆದರಿ ಅಲ್ಲಿಂದ ಕಾಲ್ಕೀಲುತ್ತವೆ.
ಅಲ್ಟ್ರಾಸಾನಿಕ್ ಡಾಗ್ ರೆಪೆಲ್ಲಂಟ್ ನೋಡಲು ವೃತ್ತಾಕಾರದ ಮೋಡೆಮ್ ನಂತೆ ಕಾಣಿಸುತ್ತದೆ. ಇದನ್ನು ಬೈಕಿನ ಹಿಂಭಾಗಕ್ಕೆ ಅಳವಡಿಸಿದರೆ ನಾಯಿ ಬೊಗಳುತ್ತಾ ಬೈಕ್ ಅನ್ನು ಬೆನ್ನಟ್ಟಿ ಬರುವಾಗ
ಈ ಸಿಸ್ಟಮ್ ಮೇಲೆ ನೀಲಿ ಬೆಳಕು ಹೊಳೆದು, ದೀರ್ಘವಾದ ಶಬ್ದ ಅಂದ್ರೆ, ಅಲಾರಂ ಆನ್ ಆಗುತ್ತದೆ. ಈ ಶಬ್ದಕ್ಕೆ ನಾಯಿಗಳು ಸುಮ್ಮನಾಗುತ್ತವೆ. ನಿಮ್ಮ ಬೈಕ್ ಅನ್ನು ಬೆನ್ನಟ್ಟಿ ಬರುವುದಿಲ್ಲ.
ಈ ಸಾಧನವನ್ನು ವ್ಯಕ್ತಿಯೊಬ್ಬ ತನ್ನ ಬೈಕ್ ನಲ್ಲಿ ಅಳವಡಿಸಿ, ಸಿಸ್ಟಮ್ ಹೇಗೆ ವರ್ಕ್ ಆಗುತ್ತದೆ ಎಂಬುದನ್ನು ವಿಡಿಯೋ ಹಂಚಿಕೊಳ್ಳುವ ಮೂಲಕ ತೋರಿಸಿದ್ದಾನೆ. ಸದ್ಯ ಆತನ ಚತುರತೆಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈತನ ಐಡಿಯಾಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.













