Home Entertainment Urfi Javed: ಅರೆ ಬೆತ್ತಲೆ ಓಡಾಡೋ ಉರ್ಫಿ ಹಲವು ವರ್ಷಗಳಿಂದ ದೈಹಿಕ ಸಂಪರ್ಕ ನಡೆಸಿಲ್ಲವಂತೆ! ಕಾರಣ...

Urfi Javed: ಅರೆ ಬೆತ್ತಲೆ ಓಡಾಡೋ ಉರ್ಫಿ ಹಲವು ವರ್ಷಗಳಿಂದ ದೈಹಿಕ ಸಂಪರ್ಕ ನಡೆಸಿಲ್ಲವಂತೆ! ಕಾರಣ ಏನ್ ಗೊತ್ತಾ?

Urfi Javed

Hindu neighbor gifts plot of land

Hindu neighbour gifts land to Muslim journalist

Urfi Javed: ಎಲ್ಲೆಂದರಲ್ಲಿ ಅರೆ ಬೆತ್ತಲೆ ಓಡಾಡೋ ಉರ್ಫಿ ಕೆಲವು ವರ್ಷಗಳಿಂದ ದೈಹಿಕ ಸಂಪರ್ಕ ನಡೆಸಿಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾಳೆ. ಈ ಸತ್ಯವನ್ನು ಒಪ್ಪಿಕೊಳ್ಳಲು ಬಹುತೇಕರಿಗೆ ಕಷ್ಟವಾಗಬಹುದು ಯಾಕೆಂದರೆ ಅರೆ ಬೆತ್ತಲೆಯಾಗಿ ಓಡಾಡುವ ಈಕೆಯ ಹಿಂದೆ ಯುವಕರ ದಂಡು ಕ್ಯೂ ಇದೆ ಅನ್ನೋದು ಅಷ್ಟೇ ಸತ್ಯ. ಹೌದು, ಇವಳ ಅವತಾರಕ್ಕೆ  ಪೋಲಿ ಹುಡುಗರು ಧಾರಕಾರವಾಗಿ ಜೊಲ್ಲು ಸುರಿಸಿದ್ದಾರೆ.

ಸಾಮಾನ್ಯವಾಗಿ ಉರ್ಫಿ ಜಾವೇದ್ (Urfi Javed) ಅವರು ಆಗಾಗ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಈಗಾಗಲೇ ನಟಿ ಉರ್ಫಿ ಜಾವೇದ್ ಅವರು ‘ಫಾಲೋ ಕರ್ ಲೋ ಯಾರ್’ ಹೆಸರಿನ ಶೋ ಮಾಡಿದ್ದಾರೆ. ಇದರಲ್ಲಿ ಹಲವು ವಿಚಾರಗಳನ್ನು ಅವರು ರಿವೀಲ್ ಮಾಡಿದ್ದಾರೆ. ಅವರು ಖಾಸಗಿ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಕಳೆದ ಮೂರು ವರ್ಷಗಳಿಂದ ದೈಹಿಕ ಸಂಪರ್ಕ ಮಾಡಿಲ್ಲಂವಂತೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

‘ನಾನು ಕಳೆದ ಮೂರು ವರ್ಷಗಳಿಂದ ಲೈಂಗಿಕ ಸುಖ ಪಡೆದಿಲ್ಲ. ಅಲ್ಲದೆ ಯಾರಿಗೂ ಕಿಸ್ ಕೂಡ ಮಾಡಿಲ್ಲ. ಯಾವುದೇ ಪುರುಷನ ಜೊತೆ ರೊಮ್ಯಾಂಟಿಕ್ ಆಗಿ ಮಾತನಾಡಿಲ್ಲ’ ಎಂದಿದ್ದಾರೆ . ಇದಕ್ಕೆ ಕಾರಣ ಕೂಡಾ ನೀಡಿದ್ದು, ‘ನಾನೇಕೆ ದೈಹಿಕ ಸಂಪರ್ಕ ನಡೆಸಿಲ್ಲ ಎಂಬುದಕ್ಕೂ ಒಂದು ಕಾರಣ ಇದೆ. ನನ್ನ ಬಳಿ ಎಲ್ಲಿಯವರೆಗೆ ಪ್ರೈವೆಟ್ ಜೆಟ್ ಇರುವುದಿಲ್ಲವೋ ಅಲ್ಲಿಯವರೆಗೆ ನಾನು ಟೆಂಪ್ಟ್ ಆಗುವುದಿಲ್ಲ ಎಂದು ನಾನು ಮೂರು ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದೆ’ ಎಂದಿದ್ದಾರೆ ಅವರು.

‘ನಾನು ಸ್ವಾಭಿಮಾನಿ. ನಾನು ನನ್ನ ಜೀವನದಲ್ಲಿ ಎಲ್ಲವನ್ನು ನಾನೇ ಮಾಡಿಕೊಂಡಿದ್ದೇನೆ. ನನ್ನ ಪಾರ್ಟ್ನರ್ ಜೊತೆ ದುರ್ಬಲಳಾಗಿ ಕಾಣಿಸಿಕೊಳ್ಳಲು ಇಷ್ಟಪಡಲ್ಲ’ ಎಂದಿದ್ದಾರೆ ಉರ್ಫಿ. ಈ ಮೂಲಕ ತಾವು ಎಷ್ಟು ಸ್ವಾಭಿಮಾನಿ ಎಂಬುದನ್ನು ಅವರು ತೋರಿಸಿಕೊಂಡಿದ್ದಾರೆ.

ಮಾಹಿತಿ ಪ್ರಕಾರ ಈ ಮೊದಲು ಉರ್ಫಿ ಜಾವೇದ್ ಅವರು ಪರಾಸ್ ಕಲ್ನಾವತ್ ಜೊತೆ ಸಂಬಂಧ ಹೊಂದಿದ್ದರು. 2017ರಿಂದ 2022ರವರೆಗೆ ಜೊತೆಗಿದ್ದ ಇವರ ಬ್ರೇಕಪ್ ಆಯಿತು. ನಂತರ ಬಿಗ್ ಬಾಸ್​ ಒಟಿಟಿಗೆ ಕಾಲಿಟ್ಟ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಅಲ್ಲಿಂದ ಅವರು ಚಿತ್ರ ವಿಚಿತ್ರ ಬಟ್ಟೆ ಹಾಕೋಕೆ ಆರಂಭಿಸಿದರು. ಒಟ್ಟಿನಲ್ಲಿ ಉರ್ಫಿಯನ್ನು ತೆಗಳಿದ್ದ ಹಲವು ನಟ ನಟಿಯರು ಇದೀಗ ಫಾಲೋ ಮಾಡಲು ಆರಂಭಿಸಿದ್ದಾರೆ ಅಲ್ಲದೆ ಫ್ಯಾಶನ್ ಜಗತ್ತನ್ನು ಉರ್ಫಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ನಟಿ ಮತ್ತೊಬ್ಬರಿಲ್ಲ.