Home Entertainment Thug Life Movie: ಕಮಲ್‌ ಹಾಸನ್‌ಗೆ ಕನ್ನಡಿಗರ ಕ್ಷಮೆ ಕೇಳಲು ಒಂದು ವಾರ ಕೋರ್ಟ್‌ ಗಡುವು:...

Thug Life Movie: ಕಮಲ್‌ ಹಾಸನ್‌ಗೆ ಕನ್ನಡಿಗರ ಕ್ಷಮೆ ಕೇಳಲು ಒಂದು ವಾರ ಕೋರ್ಟ್‌ ಗಡುವು: ಜೂನ್‌ 10 ಕ್ಕೆ ವಿಚಾರಣೆ ಮುಂದೂಡಿಕೆ

Hindu neighbor gifts plot of land

Hindu neighbour gifts land to Muslim journalist

Thug Life Movie: ಕಮಲ್‌ಹಾಸನ್‌ ನಟನೆಯ ಸಿನಿಮಾಗೆ ಕರ್ನಾಟಕದಲ್ಲಿ ಬಿಡುಗಡೆ ಆಗಲು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ಇಂದು (ಜೂನ್‌ 3) ಹೈಕೋರ್ಟ್‌ ಏಕಸದಸ್ಯ ಪೀಠದಲ್ಲಿ ನಡೆದಿದೆ. ಮಧ್ಯಾಹ್ನ 2.30 ವಕೀಲರಿಗೆ ಗಡುವು ನೀಡಿದ್ದು, ನಿಲುವು ತಿಳಿಸುವಂತೆ ಕೋರ್ಟ್‌ ಸೂಚಿಸಿದೆ.

ಹೈಕೋರ್ಟ್‌ ನಟ ಕಮಲ್‌ ಹಾಸನ್‌ಗೆ ಬಿಗ್‌ ಶಾಕ್‌ ನೀಡಿದೆ. ಈ ಪ್ರಕರಣವನ್ನು ಒಂದು ವಾರದಲ್ಲಿ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ಸೂಚಿಸಿದೆ. ಅಲ್ಲಿ ತನಕ ಸಿನಿಮಾ ರಿಲೀಸ್‌ಗೆ ಅವಕಾಶವಿಲ್ಲ ಎಂದು ಕೋರ್ಟ್‌ ಆದೇಶ ನೀಡಿದೆ. ಈ ಕುರಿತು ರಾಜ್ಯ ಸರಕಾರ ಎಜಿಗೆ ಹೈಕೋರ್ಟ್‌ ಸೂಚನೆ ನೀಡಿ, ಜೂನ್‌ 10 ಕ್ಕೆ ವಿಚಾರಣೆ ನಿಗದಿಪಡಿಸಿದೆ.

ನಿರ್ಮಾಪಕರ ಪರ (ಕಮಲ್‌ ಹಾಸನ್‌) ಧ್ಯಾನ್‌ ಚಿನ್ನಪ್ಪ ಅವರು ನ್ಯಾಯಮೂರ್ತಿಗಳು ಹೇಳಿದ್ದನ್ನು ಕಮಲ್‌ ಹಾಸನ್‌ ಅವರಿಗೆ ಹೇಳಿದ್ದು, ಫಿಲ್ಮ್‌ ಚೇಂಬರ್‌ಗೆ ಬರೆದ ಪತ್ರ ಓದಿ ಎಂದು ನ್ಯಾಯಾಧೀಶರ ಮುಂದೆ ಓದಿದ್ದಾರೆ.

ಒಂದೇ ಒಂದು ಪದ ಸೇರಿಸಬೇಕು ಬೇರೆಲ್ಲ ಸರಿಯಾಗಿದೆ. ಅವರು ಕಮಲ್‌ ಹಾಸನ್‌ ಕ್ಷಮೆ ಕೇಳಿದರೆ ಎಲ್ಲಾ ಸರಿಯಾಗಲಿದೆ ಎಂದು ಪತ್ರ ಓದಿದ್ದ ಚಿನ್ನಪ್ಪ ಅವರಿಗೆ ನಾಗಪ್ರಸನ್ನ ಹೇಳಿದ್ದು, ಇದಕ್ಕೆ ಚಿನ್ನಪ್ಪ ಅವರು ಒಂದು ಪದವನ್ನು ಒತ್ತಾಯದಿಂದ ಸೇರಿಸುವಂತಿರಬಾರದೆಂದಿದ್ದಾರೆ. ಕನ್ನಡಿಗರ ಪರ ಇರುವ ನಿಲುವನ್ನು ಅವರು ಪತ್ರದ ಮೂಲಕ ಹೇಳಿದ್ದು, ಅವರಿಗೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಧ್ಯಾನ್‌ ಚಿನ್ನಪ್ಪ ಹೇಳಿದ್ದಾರೆ.

ಕಮಲ್‌ ಹಾಸನ್‌ ಕ್ಷಮೆ ಕೇಳಲು ಇಗೋ ಅಡ್ಡ ಬರುತ್ತಿರಬಹುದು. ಕಮಲ್‌ ಹಾಸನ್‌ ಆಗಲಿ ಅಥವಾ ಯಾರೇ ಆಗಲಿ ಜನರ ಭಾವನೆಯಲ್ಲಿ ನೋಯಿಸಬಾರದು ಎಂದು ಕೋರ್ಟ್‌ ಹೇಳಿದೆ.
ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಅವರ ಥಗ್‌ಲೈಫ್‌ ಚಿತ್ರವನ್ನು ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ ಎಂದು ನಿರ್ಮಾಪಕರು ಹೇಳಿದ್ದು, ನಿರ್ಮಾಪಕರು ಕರ್ನಾಟಕದಲ್ಲಿ ರಿಲೀಸ್‌ ಮಾಡದೆ ಇರಲು ತೀರ್ಮಾನ ಮಾಡಿದ್ದಾರೆ. ಈಗಲೂ ವಿವೇಚನೆ ಬಳಸಿ ಎಂದು ಕೋರ್ಟ್‌ ನಿರ್ಮಾಪಕರಿಗೆ ಕಿವಿ ಮಾತು ಹೇಳಿ ವಿಚಾರಣೆಯನ್ನು ಮುಂದೂಡಿದೆ.