Home Entertainment BBK-12: ಗಿಲ್ಲಿ ಬಿಗ್ ಬಾಸ್ ವಿನ್ ಆಗದಿದ್ರೆ ಸುದೀಪ್ ಮಂಡ್ಯಕ್ಕೆ ಕಾಲಿಡುವಂತಿಲ್ಲ – ಅಭಿಮಾನಿಗಳಿಂದ ಎಚ್ಚರಿಕೆ

BBK-12: ಗಿಲ್ಲಿ ಬಿಗ್ ಬಾಸ್ ವಿನ್ ಆಗದಿದ್ರೆ ಸುದೀಪ್ ಮಂಡ್ಯಕ್ಕೆ ಕಾಲಿಡುವಂತಿಲ್ಲ – ಅಭಿಮಾನಿಗಳಿಂದ ಎಚ್ಚರಿಕೆ

Hindu neighbor gifts plot of land

Hindu neighbour gifts land to Muslim journalist

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು ನಡೆಯಲಿದ್ದು, ಎಲ್ಲರ ನೆಚ್ಚಿನ ಸ್ಪರ್ಧೆಯಾಗಿರುವ ಗಿಲ್ಲಿ ನಟ ಅವರೇ ವಿನ್ ಆಗುತ್ತಾರೆ ಎಂದು ಅಭಿಮಾನಿಗಳೆಲ್ಲರೂ ಆತರರಾಗಿ ಕಾಯುತ್ತಿದ್ದಾರೆ. ಇಂದು ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ. ಆದರೆ ಇದೀಗ ಒಂದು ವೇಳೆ ಗಿಲ್ಲಿ ಏನಾದರೂ ಬಿಗ್ ಬಾಸ್ ವಿನ್ನ ಆಗದಿದ್ದರೆ ಕಿಚ್ಚ ಸುದೀಪ್ ಅವರು ಮಂಡ್ಯ ಜಿಲ್ಲೆಗೆ ಕಾಲು ಇಡುವಂತಿಲ್ಲ ಎಂಬ ವಿಚಾರವನ್ನು ಮುನ್ನಲೆಗೆ ಬಂದಿದೆ.

ಹೌದು, ಮಂಡ್ಯ ಜಿಲ್ಲೆಯಲ್ಲಿ ಗಿಲ್ಲಿ ನಟನ ಕುರಿತಾಗಿ ಎಷ್ಟು ಅಭಿಮಾನ ಮುಗಿಲು ಮುಟ್ಟಿದೆ ಎಂದರೆ, ಒಂದು ವೇಳೆ ಬಿಗ್ ಬಾಸ್ ಟ್ರೋಫಿಯನ್ನು ಗಿಲ್ಲಿ ನಟ ಗೆಲ್ಲದಿದ್ದರೆ ಕಾರ್ಯಕ್ರಮದ ನಿರೂಪಕ ಹಾಗೂ ನಟ ಕಿಚ್ಚ ಸುದೀಪ್ ಅವರು ಮಂಡ್ಯ ಜಿಲ್ಲೆಗೆ ಕಾಲಿಡುವಂತಿಲ್ಲ ಎಂದು ಸ್ಥಳೀಯ ಯುವಕರು ಎಚ್ಚರಿಕೆ ನೀಡಿದ್ದಾರೆ.

 ಖಾಸಗಿ ಮಾಧ್ಯಮ ಒಂದರಲ್ಲಿ ಮಾತನಾಡುತ್ತ ಯುವಕರು ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿಯನ್ನು ಗೆಲ್ಲಲಿಲ್ಲವೆಂದರೆ ಸುದೀಪ್ ಅವರು ಮಂಡ್ಯ ಜಿಲ್ಲೆಗೆ ಬರುವಂತಿಲ್ಲ. ಇದಂತೂ ಸತ್ಯ, ನನ್ನ ಅಭಿಪ್ರಾಯ ಸುದೀಪ್ ಮಂಡ್ಯಕ್ಕೆ ಕಾಲಿಡುವಂತಿಲ್ಲ’ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಇದು ಗಿಲ್ಲಿ ನಟನ ಮೇಲಿನ ಕುರುಡು ಅಭಿಮಾನ ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.