Home Entertainment Madonna: ಬರ್ತ್‌ಡೇ ಸಂಭ್ರಮದಲ್ಲಿ ಆಪ್ತ ಗೆಳತಿಯರಿಗೆ ಫ್ರೆಂಚ್ ಕಿಸ್ ನೀಡಿದ ಗಾಯಕಿ ಮಡೋನಾ; ವಿಡಿಯೋ ವೈರಲ್

Madonna: ಬರ್ತ್‌ಡೇ ಸಂಭ್ರಮದಲ್ಲಿ ಆಪ್ತ ಗೆಳತಿಯರಿಗೆ ಫ್ರೆಂಚ್ ಕಿಸ್ ನೀಡಿದ ಗಾಯಕಿ ಮಡೋನಾ; ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಕನ್ನಡದ ಖ್ಯಾತ ನಟಿಯೊಬ್ಬರ ಪಾರ್ಟಿ ವೀಡಿಯೋ ಈ ಹಿಂದೆ ಭಾರೀ ವೈರಲ್ ಆಗಿತ್ತು. ಗೋವಾದಲ್ಲಿ ಗೆಳತಿಯರ ಜೊತೆ ಪಾರ್ಟಿ ಮಾಡುವಾಗ ಗೆಳತಿಯ ಜೊತೆ ಲಿಪ್ ಲಾಕ್ ಮಾಡಿದ ಆ ಸ್ಯಾಂಡಲ್‌ವುಡ್ ನಟಿಯ ವೀಡಿಯೋ ವೈರಲ್ ಆಗಿತ್ತು. ಈಗ ಅದೇ ರೀತಿ ಪಾಪ್ ಗಾಯಕಿ ಮಡೋನ ಅವರು ಕಿಸ್ ಮಾಡಿ ಸುದ್ದಿ ವೈರಲ್ ಆಗಿದೆ. ಜಗತ್ತಿನಾದ್ಯಂತ ಭಾರೀ ಅಭಿಮಾನಿಗಳನ್ನು ಹೊಂದಿರುವ ಗಾಯಕಿ ಮಡೋನ. ಆಗಸ್ಟ್ 16ರಂದು 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಅದ್ದೂರಿಯಾಗಿ ಬರ್ತ್‌ಡೇ ಪಾರ್ಟಿ ಮಾಡಿಕೊಂಡಿದ್ದಾರೆ. ಈ ವೇಳೆ ಕಳೆದ ಖುಷಿಯ ಕ್ಷಣಗಳು ವೀಡಿಯೋದಲ್ಲಿ ಸೆರೆ ಮಾಡಿಟ್ಟುಕೊಂಡು, ಆ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ.

ಮಡೋನಾ ತನ್ನ ಆಪ್ತ ಗೆಳತಿಯರಿಬ್ಬರಿಗೆ ಫ್ರೆಂಚ್ ಕಿಸ್ ನೀಡಿ ಅದ್ದೂರಿಯಾಗಿ ಬರ್ತ್‌ಡೇ ಪಾರ್ಟಿ ಮಾಡಿಕೊಂಡರು. ಈ ಫ್ರೆಂಚ್ ಕಿಸ್ ನೀಡಿರುವ ದೃಶ್ಯ ಎಲ್ಲರ ಕಣ್ಣು ಕುಕ್ಕುತ್ತಿದೆ. 2003ರಲ್ಲಿ ವೇದಿಕೆ ಮೇಲೆ ಪರ್ಫಾರ್ಮೆನ್ಸ್ ನೀಡುವಾಗ ಮತ್ತೋರ್ವ ಗಾಯಕಿಗೆ ಕಿಸ್ ಮಾಡುವ ಮೂಲಕ ಮಡೋನಾ ಸೆನ್ಸೆಷನ್ ಸೃಷ್ಟಿಸಿದ್ದರು. ಈಗ ಅದೇ ರೀತಿ ಮತ್ತೊಮ್ಮೆ ಕಿಸ್ ಮಾಡಿದ್ದಾರೆ.

ಹುಟ್ಟು ಹಬ್ಬದ ಸಡಗರದಲ್ಲಿದ್ದ ಮಡೋನಾ ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೇ ಮಡೋನಾ ಅವರು ವಿವಿಧ ಬಗೆಯ ಆಭರಣ ಧರಿಸಿ ಮಿಂಚಿದ್ದಾರೆ. ಐಷಾರಾಮಿ ಕಾರಿನಲ್ಲಿ ಅವರು ಪಾರ್ಟಿ ಮಾಡಿದ್ದು, ಕಾರಿನೊಳಗೆ ಹೋಗುವುದಕ್ಕೂ ಮುನ್ನ ಖುಷಿಖುಷಿಯಿಂದ ಹಾಡುತ್ತಾ ಕುಣಿದಿದ್ದಾರೆ. ಬಳಿಕ ಸ್ನೇಹಿತರ ಜೊತೆಗೂಡಿ, ಕಾರಿನಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ಚಿಯರ್ಸ್ ಎಂದಿರುವ ಮಡೋನಾ ಅಷ್ಟಕ್ಕೇ ಸುಮ್ಮನಾಗಿಲ್ಲ. ಪಕ್ಕ ಕುಳಿತ ಇಬ್ಬರು ಗೆಳತಿಯರಿಗೆ ಅವರು ಫ್ರೆಂಚ್ ಕಿಸ್ ಮಾಡಿದ್ದಾರೆ.

https://www.instagram.com/reel/ChU61g1IHz7/?utm_source=ig_web_copy_link

ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ಮಡೋನಾ ಅವರೇ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ 30 ಲಕ್ಷಕ್ಕೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ. ಎರಡು ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, 11 ಸಾವಿರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಪಾಪ್ ಸಂಗೀತ ಲೋಕದಲ್ಲಿ ಗಾಯಕಿ ಮಡೋನಾ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವು ದಶಕಗಳಿಂದ ಸಕ್ರಿಯರಾಗಿರುವ ಮಡೋನಾ ‘ಪಾಪ್ ಲೋಕದ ರಾಣಿ’ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.