Home Entertainment Love Proposal Video : ತರಗತಿಯಲ್ಲಿ ಎಲ್ಲರೆದುರೇ ವಿದ್ಯಾರ್ಥಿಯೋರ್ವನಿಂದ ಪ್ರೇಮ ನಿವೇದನೆ ? ನಂತರ ನಡೆದದ್ದು...

Love Proposal Video : ತರಗತಿಯಲ್ಲಿ ಎಲ್ಲರೆದುರೇ ವಿದ್ಯಾರ್ಥಿಯೋರ್ವನಿಂದ ಪ್ರೇಮ ನಿವೇದನೆ ? ನಂತರ ನಡೆದದ್ದು ತಿಳಿದರೆ ನಕ್ಕು ನಕ್ಕು ಸುಸ್ತಾಗ್ತೀರ!

Proposal Viral Video

Hindu neighbor gifts plot of land

Hindu neighbour gifts land to Muslim journalist

Proposal Viral Video: ಸೋಷಿಯಲ್ ಮೀಡಿಯಾದಲ್ಲಿ (Social Media)ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ವೀಡಿಯೋ(Viral Video) ಎಲ್ಲೆಡೆ ಟ್ರೆಂಡ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡುತ್ತಿದೆ.

ಪೋಷಕರು ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಯ ನೌಕರಿ ಗಿಟ್ಟಿಸಿಕೊಳ್ಳಲಿ ಎಂದು ನೂರಾರು ಕನಸು ಹೊತ್ತು ಮಕ್ಕಳನ್ನು ಮಕ್ಕಳನ್ನು ಶಾಲೆ, ಕಾಲೇಜ್ ಗಳಿಗೆ ಕಳುಹಿಸುತ್ತಾರೆ. ಆದರೆ, ಒಮ್ಮೆ ಕಾಲೇಜು ಮೆಟ್ಟಿಲು ಹತ್ತಿದರೆ ಸಾಕು ವಯೋಸಹಜ ಆಕರ್ಷಣೆಗೆ ಬಲಿಯಾಗಿ, ಹುಚ್ಚು ಕೋಡಿ ಮನಸಿನ ಮಾತಿಗೆ ಮರುಳಾಗಿ ಪ್ರೀತಿ ಪ್ರೇಮ ಎಂದು ಮಕ್ಕಳು ಸಿಕ್ಕಿದಲ್ಲಿ ಅಡ್ಡಾಡಿ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುವುದು ಸಹಜ.

ಅದರಲ್ಲಿಯೂ ಎಷ್ಟೋ ಬಾರಿ ಪ್ರೀತಿಯ ಹುಚ್ಚು ಹೆಚ್ಚಾದರೆ ತಾನು ಪ್ರೀತಿಸಿದವರನ್ನೇ ಮದುವೆಯಾಗಬೇಕು ಎಂದು ಮನೆಯವರ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ತಪ್ಪು ಹಾದಿಯಲ್ಲಿ ಸಾಗುವುದುಂಟು. ಮನೆಯವರಿಂದಲೋ ಇಲ್ಲವೇ ಪ್ರೀತಿಸಿದವರ ಪೋಷಕರನ್ನೂ ಈ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟರೆ ಪರವಾಗಿಲ್ಲ ಇಲ್ಲ ಎಂದಾದರೆ ಮುಂದಾಗುವ ಪರಿಣಾಮ ಏನೆಂದು ನೀವೇ ಊಹಿಸಿಕೊಳ್ಳಿ. ಇತ್ತೀಚೆಗೆ ಡೇಟಿಂಗ್ ಆ್ಯಪ್ ಹೆಸರಲ್ಲಿ ಅದೆಷ್ಟೋ ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿ ಮೃತ್ಯು ಕೂಪಕ್ಕೆ ತಳ್ಳಿದ ಘಟನೆಗಳು ಕೂಡ ನಮ್ಮ ಕಣ್ಣ ಮುಂದೆಯೇ ಇವೆ. ಇದೀಗ, ವೈರಲ್ ಆಗಿರುವ ವೀಡಿಯೋದಲ್ಲಿ ಯುವತಿಗೆ ಯುವಕನೊಬ್ಬ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಅದಕ್ಕೆ ಯುವತಿ ಏನು ಮಾಡಿದಳು ಗೊತ್ತಾ?

ಸದ್ಯ, ಶಾಲಾ ಮಕ್ಕಳ ವಿಡಿಯೋ ವೈರಲ್‌ ಆಗಿ ಸಂಚಲನ ಮೂಡಿಸಿದ್ದು, ಈ ವಿಡಿಯೋದಲ್ಲಿ ಹುಡುಗನೊಬ್ಬ ಹುಡುಗಿಗೆ ಹೂ ಕೊಟ್ಟು ಪ್ರೇಮ ನಿವೇದನೆ (Love Propose) ಮಾಡಿದ್ದು, ಇನ್ನೂ ಯುವತಿಯ ಪ್ರತಿಕ್ರಿಯೆ ಕಂಡು ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ವೈರಲ್ (Viral)ಆಗಿರುವ ವೀಡಿಯೋದಲ್ಲಿ (Proposal Viral Video) ಶಾಲಾ ಬಾಲಕನೊಬ್ಬ (School Boy)ಹುಡುಗಿಗೆ ಪ್ರಪೋಸ್ ಮಾಡಲು ಮೊಣಕಾಲಿನ ಮೇಲೆ ನಿಂತು ಪ್ರಪೋಸ್ ಮಾಡಿದ್ದಾನೆ. ತಕ್ಷಣವೇ ಆ ಯುವತಿ ಹಿಂದೂ ಮುಂದೆ ಆಲೋಚಿಸದೆ ಹುಡುಗನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋದ ಘಟನೆಯೂ ನಿಜವಾಗಿ ನಡೆದಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ, ಈ ಘಟನೆ ನಿಜವಾಗಿದ್ದರೆ ಯುವತಿ ಮಾಡಿದ್ದೇ ಸರಿ ಎಂದು ಕೆಲವರು ಆಕೆಯ ಪರ ಬ್ಯಾಟಿಂಗ್ ಮಾಡಿದ್ದರೆ ಮತ್ತೆ ಕೆಲವರು ಈ ರೀತಿ ಪ್ರೀತಿ ಪ್ರೇಮ ಎಂದು ಮಕ್ಕಳ ದಿಕ್ಕು ತಪ್ಪಿಸುವ ವೀಡಿಯೊಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.