Home Entertainment Sa Re Ga Ma Season 19 Winner: ಸರಿಗಮಪ ವಿನ್ನರ್ ಪಟ್ಟ ಗೆದ್ದ ಹಳ್ಳಿ...

Sa Re Ga Ma Season 19 Winner: ಸರಿಗಮಪ ವಿನ್ನರ್ ಪಟ್ಟ ಗೆದ್ದ ಹಳ್ಳಿ ಪ್ರತಿಭೆ ; ವಿನ್ನರ್ ಪ್ರಗತಿಗೆ ಸಿಕ್ಕ ಬಹುಮಾನವೆಷ್ಟು? ರನ್ನರ್ ಅಪ್ ಗೆ ಸಿಕ್ಕ ಮೊತ್ತವೆಷ್ಟು?

Sa Re Ga Ma Season 19 Winner

Hindu neighbor gifts plot of land

Hindu neighbour gifts land to Muslim journalist

Sa Re Ga Ma-Winner: ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುವ ಜನಪ್ರಿಯ ಶೋ ಸರಿಗಮಪ (Sa Re Ga Ma pa) ಜನತೆಯ ಮನ ಸೆಳೆದಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಶೋ ನಲ್ಲಿ ಭಾಗವಹಿಸಿದ್ದು, ತಮ್ಮ ಮಧುರ ಕಂಠದಿಂದ ಜನರ ಗಮನಸೆಳೆದಿದ್ದಾರೆ‌. ಇದೀಗ ಸರಿಗಮಪ ಸೀಸನ್ 19 (Sa Re Ga Ma Pa Season 19)ಆರಂಭವಾಗಿ ಮುಕ್ತಾಯವೂ ಆಗಿದೆ. ಸರಿಗಮಪ ಸೀಸನ್ 19 ವಿನ್ನರ್ (Sa Re Ga Ma-winner) ಪಟ್ಟ ಪ್ರಗತಿ ಬಡಿಗೇರ್ ಮುಡಿಗೇರಿದೆ.

ಕೊಪ್ಪಳದಲ್ಲಿ (koppala) ಸರಿಗಮಪ ಸೀಸನ್ 19 ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆದಿದ್ದು, ಕೊಪ್ಪಳದ ಜನತೆ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಮಕ್ಕಳ ಸಂಗೀತಕ್ಕೆ ತಲೆದೂಗಿದ್ದಾರೆ.

ಸರಿಗಮಪ ಸೀಸನ್ 19 ವಿನ್ನರ್ ಪಟ್ಟ ಪ್ರಗತಿ ಬಡಿಗೇರ್ (Pragthi badiger) ಅಲಂಕರಿಸಿದ್ದು, ರನ್ನರ್ ಅಪ್ ಆಗಿ ಶಿವಾನಿ (Shivani) ಹೊರಹೊಮ್ಮಿದ್ದಾರೆ. 2nd ರನ್ನರ್ ಅಪ್ ತನುಶ್ರೀ (thanushree) ಅವರು ಆಗಿದ್ದಾರೆ.

ವಿನ್ನರ್ ಪ್ರಗತಿ ಬಡಿಗೇರ್ ಕುಶಾಲನಗರದ ಬಡ ಕುಟುಂಬದಿಂದ ಬಂದಿರುವ ಹುಡುಗಿ. ಪ್ರಗತಿ ಬಡಿಗೇರ್ ಗೆ ನೆಲಮಂಗಲ ಬಳಿ 30-40 ಸೈಟ್ ಸಿಕ್ಕಿದೆ. ಅದರ ಮೌಲ್ಯ 20 ಲಕ್ಷ. ಅಲ್ಲದೇ 4 ಲಕ್ಷ ಕ್ಯಾಶ್ ಪ್ರೈಸ್ ಕೂಡ ವಿನ್ನರ್ ಸ್ಥಾನಕ್ಕೆ ದೊರೆತಿದೆ.

ರನ್ನರ್ ಅಪ್ ಶಿವಾನಿಗೆ 20 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದ್ದು, ಶಿವಾನಿ ರಾಕ್ ಸ್ಟಾರ್ ಎಂದೇ ಗುರುತಿಸಿಕೊಂಡರು. 2nd ರನ್ನರ್ ಅಪ್ ತುನಶ್ರೀಗೆ 5 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ. ತನುಶ್ರೀ ಮಂಗಳೂರಿನ ಹುಡುಗಿ.

ಪೈನಲ್ ಗೆ ಪ್ರಗತಿ ಬಿ ಬಡಿಗೇರ್, ತನುಶ್ರೀ, ಕುಶಿಕ್, ಶಿವಾನಿ, ರೇವಣಸಿದ್ಧ, ಗುರುಪ್ರಸಾದ್ ಬಂದಿದ್ದರು. ಎಲ್ಲರ ಜೊತೆ ಪೈಪೋಟಿ ನಡೆಸಿ, ಪ್ರಗತಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಆಂಕರ್ ಅನುಶ್ರೀ (Anushree) ಮೊದಲು 2nd ರನ್ನರ್ ಅಪ್ ಹೆಸರು ಘೋಷಿಸಿ ನಂತರ ರನ್ನರ್ ಆಪ್, ಕೊನೆಗೆ ವಿನ್ನರ್ ಹೆಸರು ತಿಳಿಸಿದರು. ವೇದಿಕೆಗೆ ಹಂಸಲೇಖ (Hamsalekha) ಅವರು, ವಿಜಯ ಪ್ರಕಾಶ್ (Vijay Prakash) ಸೇರಿದಂತೆ ಹಲವರು ವಿನ್ನರ್, ರನ್ನರ್ ಗಳನ್ನು ತಮ್ಮ ನುಡಿಗಳಿಂದ ಭವಿಷ್ಯತ್ತಿಗೆ ಹಾರೈಸಿದರು.