Home Entertainment Rishab Shetty: ‘ಬಾಲಿವುಡ್ ಮಂದಿ ಭಾರತವನ್ನು ಕೆಟ್ಟದಾಗಿ ತೋರಿಸಿ ವಿದೇಶದಲ್ಲಿ ಅವಾರ್ಡ್ ಪಡೆಯುತ್ತಾರೆ’ – ಸಂಚಲನ...

Rishab Shetty: ‘ಬಾಲಿವುಡ್ ಮಂದಿ ಭಾರತವನ್ನು ಕೆಟ್ಟದಾಗಿ ತೋರಿಸಿ ವಿದೇಶದಲ್ಲಿ ಅವಾರ್ಡ್ ಪಡೆಯುತ್ತಾರೆ’ – ಸಂಚಲನ ಸೃಷ್ಟಿಸಿದ ರಿಷಬ್ ಶೆಟ್ಟಿ ಹೇಳಿಕೆ!!

Rishab Shetty

Hindu neighbor gifts plot of land

Hindu neighbour gifts land to Muslim journalist

Rishab Retty: ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ(Rishab Shetty) ಅವರು ಬಾಲಿವುಡ್(Bollywood) ಮಂದಿ ಭಾರತವನ್ನು ಕೆಟ್ಟದಾಗಿ ತೋರಿಸಿ ವಿದೇಶಿಗಳಲ್ಲಿ ಅವಾರ್ಡ್ ಗೆಲ್ತಾರೆ ಎಂದು ಹೇಳಿಕೆ ನೀಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.

ಹೌದು, 2022ರ ಹಿಟ್ ಚಿತ್ರ ಕಾಂತಾರದ ಅಭಿನಯಕ್ಕಾಗಿ ರಿಷಬ್ ಇತ್ತೀಚೆಗಷ್ಟೇ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಈಗ ವಿಡಿಯೋವೊಂದರಲ್ಲಿ ಅವರು ಬಾಲಿವುಡ್‌ ಕುರಿತಂತೆ ಕೆಲ ನೀಡಿರುವ ಹೇಳಿಕೆ ನೆಟ್ಟಿಗರನ್ನು ಕೆರಳಿಸಿದೆ. ಪ್ರಮೋದ್ ಶೆಟ್ಟಿ ಅಭಿನಯದ ಮುಂಬರುವ ಕನ್ನಡ ಚಲನಚಿತ್ರ ‘ಲಾಫಿಂಗ್ ಬುದ್ಧ’ ಪ್ರಚಾರ ಮಾಡುತ್ತಿರುವ ವೇಳೆ MetroSaga ದಲ ಸಂದರ್ಶನದಲ್ಲಿ ಮಾತನಾಡಿದ ರಿಷಬ್ ಬಾಲಿವುಡ್‌ನಲ್ಲಿ ಭಾರತದ ಬಗ್ಗೆ ಕೇವಲವಾಗಿ, ಕೆಟ್ಟದಾಗಿ ತೋರಿಸಿ, ಅದನ್ನು ಕಲಾತ್ಮಕ ಸಿನಿಮಾಗಳು ಅಂತ ಹೇಳಿ, ಹೊರಗಡೆ ಫೆಸ್ಟಿವಲ್‌ಗಳಿಗೆ ಹೋಗಿ ಪ್ರಶಸ್ತಿಗಳನ್ನ ಪಡೆದುಕೊಂಡು ಬಂದಿರುವುದನ್ನು ಗಮನಿಸಿದ್ದೇನೆ’ ಎಂದು ಸಂಚಲನ ಸೃಷ್ಟಿಸಿದ್ದಾರೆ.

ಅಲ್ಲದೆ ನಮ್ಮ ದೇಶ ನಮ್ಮ ಹೆಮ್ಮೆ. ನನ್ನ ರಾಜ್ಯ ನನ್ನ ಹೆಮ್ಮೆ. ನನ್ನ ಭಾಷೆ ನನ್ನ ಹೆಮ್ಮೆ. ಹೀಗಿರುವಾಗ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು? ನಮ್ಮಲ್ಲಿರುವ ಪಾಸಿಟಿವ್ ವಿಚಾರಗಳನ್ನು ಪಾಸಿಟಿವ್ ಆಗಿಯೇ ತೋರಿಸಬಹುದಲ್ಲ” ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಸದ್ಯ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇಡೀ ಸಂದರ್ಶನದಲ್ಲಿ ಇದಿಷ್ಟು ಹೇಳಿಕೆ ಮಾತ್ರ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ, ರಿಷಬ್ ಶೆಟ್ಟಿ ನೀಡಿರುವ ಹೇಳಿಕೆ ಮೇಲೆ ಪರ-ವಿರೋಧ ಚರ್ಚೆ ಆರಂಭವಾಗಿದೆ. ‘ಕಾಂತಾರ’ ಚಿತ್ರದಲ್ಲಿನ ಕೆಲವೊಂದು ಸೀನ್‌ಗಳನ್ನು ಉದಾಹರಿಸಿ, ರಿಷಬ್‌ ಶೆಟ್ಟಿ ಅವರನ್ನು ಟೀಕೆ ಮಾಡಲಾಗುತ್ತಿದೆ. ಇನ್ನು ಕೆಲವರು ರಿಷಬ್ ಪರ ಬ್ಯಾಟ್ ಬೀಸಿದ್ದಾರೆ.