Home Breaking Entertainment News Kannada Rishab Shetty : ಡಿವೈನ್ ಸ್ಟಾರ್ ಗೆ ಒಲಿದ ದಾದ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ...

Rishab Shetty : ಡಿವೈನ್ ಸ್ಟಾರ್ ಗೆ ಒಲಿದ ದಾದ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ!

Hindu neighbor gifts plot of land

Hindu neighbour gifts land to Muslim journalist

ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಗೊತ್ತಿರುವ ವಿಚಾರವೇ!! ಕಾಂತಾರ ಸಿನಿಮಾದ ಮೂಲಕ ನಟ ನಿರ್ದೇಶಕ ರಿಷಬ್ ಶೆಟ್ಟಿ ರಾತ್ರೋ ರಾತ್ರಿ ನೇಮ್ ಫೇಮ್ ಗಳಿಸಿ ಡಿವೈನ್ ಸ್ಟಾರ್ ಎಂಬ ಪಟ್ಟವನ್ನು ಕೂಡ ಮುಡಿಗೇರಿಸಿಕೊಂಡಿದ್ದರು. ಇದೀಗ, ಕಾಂತಾರ ಸಿನಿಮಾದ ನಟನೆಗೆ ಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ಮತ್ತೊಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.

 

ಸಿನಿ ಲೋಕದ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್‌, ಅತ್ಯುನ್ನತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎಂದೇ ಖ್ಯಾತಿ ಪಡೆದಿದೆ. ಭಾರತ ಚಿತ್ರರಂಗದ ಉತ್ತಮ ಕಥೆ, ಉತ್ತಮ ನಟನೆಯ ಜೊತೆಗೆ ತಂತ್ರಜ್ಞರ ಶ್ರಮವನ್ನು ಪರಿಗಣಿಸಿ, ಸಿನಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಗೈದ ವರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಕೆಲಸವನ್ನು ಮೆಚ್ಚಿ ಶ್ಲಾಘಿಸುವ ಸಲುವಾಗಿ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸುತ್ತಿದೆ.

 

ಇದೇ ತಿಂಗಳ ಫೆಬ್ರವರಿ 20ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್‌ನಲ್ಲಿ ಈ ಸಲದ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮ ಜರುಗಲಿದೆ. ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅದ್ಭುತ ನಟನೆಗೆ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್’ ಎಂಬ ಪ್ರಶಸ್ತಿ ಈ ಕಾರ್ಯಕ್ರಮದ ಮೂಲಕ ಲಭ್ಯವಾಗಲಿದೆ.ಈ ಮೂಲಕ ರಿಷಬ್ ಶೆಟ್ಟಿ ಅತಿಹೆಚ್ಚು ಭರವಸೆ ಮೂಡಿಸಿದ ನಟ ಎಂಬ ಪ್ರಶಸ್ತಿಗೆ ಭಾಜನರಾಗಲಿದ್ದು, ರಿಷಬ್ ಶೆಟ್ಟಿ ಅವರ ಬಣ್ಣದ ಲೋಕದ ಅವಿರತ ಪ್ರಯತ್ನ ಶ್ರಮಕ್ಕೆ ಯೋಗ್ಯ ಪುರಸ್ಕಾರ ದೊರೆತಂತಾಗಲಿದೆ. ಇದೆಲ್ಲದರ ನಡುವೆ ಇನ್ನುಳಿದ ಪ್ರಶಸ್ತಿಗಳು ಯಾರ ಮುಡಿಗೇರಲಿದೆ ಎಂಬ ಕೌತುಕ ಜನರಲ್ಲಿ ಮನೆ ಮಾಡಿದೆ.