Home Entertainment Pregnant Actresses: ತಾಯ್ತನದ ಖುಷಿಯಲ್ಲಿರುವ ಕನ್ನಡದ ಜನಪ್ರಿಯ ನಟಿಯರಿವರು!

Pregnant Actresses: ತಾಯ್ತನದ ಖುಷಿಯಲ್ಲಿರುವ ಕನ್ನಡದ ಜನಪ್ರಿಯ ನಟಿಯರಿವರು!

Hindu neighbor gifts plot of land

Hindu neighbour gifts land to Muslim journalist

Pregnant Actresses: ಹೆಣ್ಣಿಗೆ ತಾಯಿತನ ( Happy Mother) ಎನ್ನುವುದು ಒಂದು ಅತ್ಯಂತ ಸುಂದರ ಅನುಭವ. ಅದರಲ್ಲೂ ನಿಮ್ಮ ಕೆಲವು ನೆಚ್ಚಿನ ನಟಿಯರು ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಈ ವರ್ಷ ಕನ್ನಡದ ಕೆಲ ನಟಿಯರ ಪಾಲಿಗೆ ಇದು ಸಂಭ್ರಮದ ವರುಷವಾಗಿದೆ. ಸದ್ಯ ನಟಿಯರು ಬೇಬಿ ಬಂಪ್‌ ಫೋಟೋಗಳನ್ನ ಹಂಚಿಕೊಂಡಿದ್ದು, ಮಗುವಿನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಮ್ಮನಾಗುತ್ತಿರುವ ಖುಷಿಯಲ್ಲಿರುವ ನಟಿಯರ (Pregnant Actresses) ಫೋಟೋ ಗುಚ್ಛ ನೀವು ಕಾಣಬಹುದು.

ಹೌದು, ಕನ್ನಡ ನಟಿ ಮಿಲನಾ ನಾಗರಾಜ್, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ, ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಕವಿತಾ ಗೌಡ ಹಾಗೂ ನೇಹಾ ಗೌಡ, ಹಾಗೂ ಪ್ರಣೀತಾ ಸುಭಾಷ್‌ ಪಾಲಿಗೆ 2024 ಬಹಳ ಸ್ಪೆಷಲ್. ಯಾಕಂದ್ರೆ, ಇವರೆಲ್ಲಾ ಈ ವರ್ಷ ತಾಯ್ತನದ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಇವರೆಲ್ಲರೂ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿಯರು ತಮ್ಮ ಕೆರಿಯರ್ ಜೊತೆಗೆ ಅವರ ವೈವಾಹಿಕ ಜೀವನದ ಹೊಸ ಬದಲಾವಣೆಯ ಸಂಭ್ರಮ ನಿಮಗೂ ಒಂದು ಗುಡ್ ನ್ಯೂಸ್ ಅಂದರೆ ತಪ್ಪಾಗಲಾರದು.

ಮಿಲನಾ ನಾಗರಾಜ್:

ಪ್ರೆಗ್ನೆನ್ಸಿಯ ಪ್ರತಿ ಕ್ಷಣವನ್ನೂ ಅನುಭವಿಸುತ್ತಿರುವ ಮಿಲನಾ ನಾಗರಾಜ್ ಈಗ ತುಂಬು ಗರ್ಭಿಣಿ. 2021ರಲ್ಲಿ ಮಿಲನಾ ನಾಗರಾಜ್ – ಡಾರ್ಲಿಂಗ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ 3 ವರ್ಷಗಳ ಬಳಿಕ ದಂಪತಿ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಪ್ರಣಿತಾ ಸುಭಾಷ್:

ಬಹುಭಾಷಾ ನಟಿ ಪ್ರಣಿತಾ ಸುಭಾಷ್  ಅಭಿಮಾನಿಗಳಿಗೆ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಕಳೆದ ವರ್ಷವಷ್ಟೇ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಮತ್ತೊಮ್ಮೆ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ:

2023ರಲ್ಲಿ ಹರ್ಷಿಕಾ ಪೂಣಚ್ಚ – ಭುವನ್ ಪೊನ್ನಣ್ಣ ಮದುವೆಯಾಗಿ, ಇದೀಗ ದಂಪತಿ ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಬೇಬಿ ಬಂಪ್ ಫೋಟೋ ಶೂಟ್ ನ್ನು ಇವರು ಕೊಡಗಿನ ಸಂಸ್ಕೃತಿ ಗೆ ತಕ್ಕಂತೆ ವಿಭಿನ್ನ ಶೈಲಿಯಲ್ಲಿ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕವಿತಾ ಗೌಡ:

2021ರಲ್ಲಿ ಚಂದನ್ ಗೌಡ – ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸದ್ಯ ಈ ವರ್ಷ ತಾಯಿ ಆಗುತ್ತಿರುವ ಖುಷಿಯಲ್ಲಿರುವ ಕವಿತಾ ಗೌಡ ಪ್ರತಿನಿತ್ಯ ಮಿಸ್ ಮಾಡದೆ ವ್ಯಾಯಾಮ ಮಾಡುತ್ತಾರೆ.ಮದುವೆಯಾದ 3 ವರ್ಷಗಳ ಬಳಿಕ ಚಂದನ್ ಗೌಡ – ಕವಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಗೊಂಬೆ:

‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ನಲ್ಲಿ ನಟಿಸಿರುವ ನಟಿ ನೇಹಾ ಗೌಡ ಇದೀಗ ತುಂಬು ಗರ್ಭಿಣಿ. 2018ರಲ್ಲಿ ನೇಹಾ ಗೌಡ – ಚಂದನ್ ಗೌಡ ಪ್ರೀತಿಸಿ ಮದುವೆಯಾದರು. ಮದುವೆಯಾದ 6 ವರ್ಷಗಳ ಬಳಿಕ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನೇಹಾ – ಚಂದನ್ ದಂಪತಿ. ತುಂಬು ಗರ್ಭಿಣಿ ನೇಹಾ ಗೌಡ ಸ್ಪೆಷಲ್ ಆಗಿ ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡಿದ್ದಾರೆ.