Home Entertainment ಕಾರಿನಲ್ಲಿ ಬಂದು ಸಸಿಯನ್ನು ಎತ್ತಾಕೊಂಡೋದ ಇಬ್ಬರು ಮಹಿಳೆಯರು| ‘ಸರ್ಕಾರಿ ಸಸ್ಯವೂ ಸುರಕ್ಷಿತವಲ್ಲ’ ಎಂಬ ಶೀರ್ಷಿಕೆಯ ವಿಡಿಯೋ...

ಕಾರಿನಲ್ಲಿ ಬಂದು ಸಸಿಯನ್ನು ಎತ್ತಾಕೊಂಡೋದ ಇಬ್ಬರು ಮಹಿಳೆಯರು| ‘ಸರ್ಕಾರಿ ಸಸ್ಯವೂ ಸುರಕ್ಷಿತವಲ್ಲ’ ಎಂಬ ಶೀರ್ಷಿಕೆಯ ವಿಡಿಯೋ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ನಮ್ಮ ನಡುವೆಯೇ ಎಂತೆಂತ ಪ್ರತಿಭೆಗಳಿವೆ. ಕೆಲವು ಕಣ್ಣಿಗೆ ಕಂಡರೆ ಇನ್ನೂ ಕೆಲವು ಕಣ್ ತಪ್ಪಿಸಿ ಮಾಡೋ ಟ್ಯಾಲೆಂಟ್. ಅಂದಹಾಗೆ ಯಾವ ಪ್ರತಿಭೆ ಬಗ್ಗೆ ಮಾತಾಡುತಿದ್ದೀನಿ ಎಂಬ ಅನುಮಾನವೇ? ಇದು ಅಂತಿತ ಪ್ರತಿಭೆ ಅಲ್ಲ,ಗಿಡ ಕದಿಯೋ ಪ್ರತಿಭೆ!!ಇದು ಯಾವ ರೀತಿಯ ಪ್ರತಿಭೆ ಎಂದು ಹೆಚ್ಚು ಯೋಚಿಸಬೇಡಿ. ಇದೊಂದು ತರದ ಕಳ್ಳತನದ ಮಾಸ್ಟರ್ ಮೈಂಡ್.ನಮ್ಮ ದೇಶದಲ್ಲಿ ಎಂತೆಂಥಾ ಅಸಾಮಾನ್ಯ ಕಳ್ಳರಿದ್ದಾರೆ ಅಂದ್ರೆ, ಅವರು ಸಾರ್ವಜನಿಕ ಸಸ್ಯಗಳನ್ನು ಕೂಡ ಬಿಡುವುದಿಲ್ಲ. ಹೌದು, ಸದ್ಯ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯರಿಬ್ಬರು ಗಿಡ ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

https://youtu.be/e7tgMFW4UgQ

ತಡರಾತ್ರಿಯಲ್ಲಿ ರಸ್ತೆ ಬದಿಯಲ್ಲಿ ಕಾರೊಂದು ನಿಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು. ಕಾರಿನಿಂದ ಹೊರಬಂದ ಇಬ್ಬರು ಮಹಿಳೆಯರು, ದೂರ ಅಡ್ಡಾಡಿದಂತೆ ಬೇರೆ-ಬೇರೆಯಾಗಿ ಪಾದಚಾರಿ ಮಾರ್ಗದಲ್ಲಿ ನಡೆದಿದ್ದಾರೆ. ಒಬ್ಬಾಕೆ ಗುಲಾಬಿ ಬಣ್ಣದ ಬಟ್ಟೆ ತೊಟ್ಟಿದ್ದರೆ, ಮತ್ತೊಬ್ಬಳು ಕಪ್ಪು ಬಣ್ಣದ ಬಟ್ಟೆ ತೊಟ್ಟಿದ್ದಾಳೆ.ಪಾದಚಾರಿ ಮಾರ್ಗದಲ್ಲಿ ಆಚೆ-ಈಚೆ ಅಡ್ಡಾಡಿದ ಮಹಿಳೆಯರು, ಯಾರೂ ಇಲ್ಲದಿರುವುದನ್ನು ಗಮನಿಸಿ ಕೂಡಲೇ, ಸಾರ್ವಜನಿಕವಾಗಿ ನೆಡಲಾಗಿದ್ದ ಸಸಿಯನ್ನು ಕಿತ್ತು ಕಾರಿನತ್ತ ಒಯ್ದಿದ್ದಾರೆ. ಬಳಿಕ ಕಾರು ಚಲಿಸಿದೆ. ಈ ಇಡೀ ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇವರ ಈ ರೀತಿಯ ಭಿಕ್ಷೆಗೆ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್‌ಸ್ಟಾಗ್ರಾಮ್‌ನ ಪುಟವೊಂದರಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ‘ಸರ್ಕಾರಿ ಸಸ್ಯವೂ ಸುರಕ್ಷಿತವಲ್ಲ’ ಎಂದು ಶೀರ್ಷಿಕೆ ನೀಡಲಾಗಿದ್ದು,ಇದೀಗ 62,500ಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.