Home Entertainment Payal Ghosh: ಕಳೆದ 9 ವರ್ಷಗಳಿಂದ ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ, ಇದಕ್ಕೆ ಕಾರಣ ಇರ್ಫಾನ್...

Payal Ghosh: ಕಳೆದ 9 ವರ್ಷಗಳಿಂದ ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ, ಇದಕ್ಕೆ ಕಾರಣ ಇರ್ಫಾನ್ ಪಠಾಣ್ ಎಂದ ಖ್ಯಾತ ನಟಿ – ಯಾಕಂತೆ?!

Payal Ghosh

Hindu neighbor gifts plot of land

Hindu neighbour gifts land to Muslim journalist

Payal Ghosh: ತೆಲುಗಿನಲ್ಲಿ ಒಂದೆರಡು ಸಿನಿಮಾ ಮಾಡಿ ಬಳಿ ಬಾಲಿವುಡ್ ಗೆ ಜಿಗಿದು, ಅಲ್ಲೂ ಒಂದ್ಮೂರು ಸಿನಿಮಾವನ್ನೂ ಮಾಡಿರುವ ಕೋಲ್ಕತ್ತಾ ಮೂಲದ ಈ ಪಾಯಲ್ ಘೋಷ್‌ಗೆ(Payal Ghosh) ಅದೇನೋ ಪ್ರಚಾರ ಅಂದ್ರೆ ಭಾರೀ ಹುಚ್ಟು. ಕುಂತರೂ ನಿಂತರೂ ಸದಾ ಸುದ್ದಿಯಲ್ಲಿರಬೇಕು ಎಂಬ ಹಂಬಲ. ಅಂತೆಯೇ ಇದೀಗ ಈ ಪ್ರಚಾರದ ನಟಿ ತನ್ನ ಲೈಂಗಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು ತಾನು 9 ವರ್ಷಗಳಿಂದ ಯಾರೊಂದಿಗೂ ಸಂಭೋಗ ನಡೆಸಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಕಾರಣ ಏನೆಂದೂ ತಿಳಿಸಿದ್ದಾರೆ.

Delhi Airport Roof Collapse: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ಛಾವಣಿ ಕುಸಿತ; ಓರ್ವ ಸಾವು, ಹಲವರಿಗೆ ಗಾಯ

ಹೌದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿರು ನಟಿ ನಾನು ಸೆಕ್ಸ್‌ ಮಾಡದೇ 9 ವರ್ಷವಾಯಿತು ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕೆ ಕಾರಣ ತಿಳಿಸಿದ ನಟಿ ಇರ್ಫಾನ್ ಪಠಾಣ್(Irfan Pathan) ಇದಕ್ಕೆ ಕಾರಣ, ಆತನ ಜೊತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ ಎಂದು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ.

ಪಾಯಲ್ ಹಾಕಿದ ಪೋಸ್ಟ್ ಅಲ್ಲಿ ಏನಿದೆ?
ನಟಿ ಪಾಯಲ್ ಅವರ ‘ಇದು ಸುಳ್ಳು ಅಂತ ಅನಿಸಬಹುದು. ಆದರೆ ಇದುವೇ ನಿಜ, ದೊಡ್ಡ ದೊಡ್ಡವರೆಲ್ಲ ನನ್ನ ಜೊತೆ ಮಲಗಲು ಸಾಯುತ್ತಾರೆ. ಆದರೆ ನಾನು ಮಾತ್ರ ಯಾರ ಜೊತೆಯೂ ಸೆಕ್ಸ್ ಮಾಡಿಲ್ಲ, ಯಾಕೆಂದರೆ ಸೆಕ್ಸ್ ಕುರಿತು ನನ್ನಲ್ಲಿ ಪೂಜ್ಯಭಾವ ಇದೆ ಎಂದಿದ್ದಾರೆ.

ಇದಿಷ್ಟೇ ಅಲ್ಲದೇ ಇರ್ಫಾನ್ ಪಠಾಣ್ ಮನೆಯಲ್ಲಿ ನಾನು ಅವನ ಕುಟುಂಬದ ಜೊತೆ 2016ರಲ್ಲಿ ಸಂಭ್ರಮಾಚಾರಣೆಯನ್ನು ಮಾಡಿ ಮನೆಗೆ ಮರಳಿದೆ. ಆಗ ಫೋನ್ ಮಾಡಿದ ಇರ್ಫಾನ್ ಪಠಾಣ್ ನನ್ನ ಮನೆಯವರು ನಿನ್ನನ್ನು ಒಪ್ಪಲು ತಯಾರಿಲ್ಲ ಎಂದು ಹೇಳಿ ನನ್ನಿಂದ ಅಂತರ ಕಾಪಾಡಿಕೊಳ್ಳಲು ಶುರು ಮಾಡಿದರು. ಕೆಲ ದಿನದ ನಂತರ ಅವರ ಸಹೋದರಿ ಕರೆ ಮಾಡಿ ನನ್ನ ಅಣ್ಣ ಮದುವೆಯಾಗುತ್ತಿದ್ದಾನೆ ಎಂದು ಹೇಳಿದರು ಎಂದಿದ್ದಾರೆ. ನನ್ನ ದುಖ ಯಾರಿಗೂ ಅರ್ಥವಾಗಲು ಸಾಧ್ಯ ಇಲ್ಲ ಎಂದು ಬರೆದಿದ್ದಾರೆ.

ಅಲ್ಲದೆ ಮುಂದುವರೆದು ಇರ್ಫಾನ್ ಪಠಾಣ್‌ಕ್ಕಿಂತ ನನ್ನ ಮುಂದೆ ಅತ್ಯುತ್ತಮವಾದ ಆಯ್ಕೆಗಳಿದ್ದವು ಆದರೆ ಆಯ್ಕೆಗಳಿದ್ದ ಮಾತ್ರಕ್ಕೆ ಪ್ರೀತಿಯಾಗುವುದಿಲ್ಲ. ಪ್ರೀತಿ ಪ್ರೀತಿಯೇ ಎಂದಿರುವ ಪಾಯಲ್ ಘೋಷ್, ಮುಸ್ಲಿಂ ದ್ವೇಷಿಯಾದ ನನ್ನ ತಂದೆಯನ್ನು ಕೂಡ ಇರ್ಫಾನ್ ಪಠಾಣ್ ಗೋಸ್ಕರ ನಾನು ಎದುರು ಹಾಕಿಕೊಂಡಿದ್ದೆ ಎಂದಿದ್ದಾರೆ.

ಸದ್ಯ ವೈರಲ್ ಆದ ಈ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಜೊತೆಗೆ ನಟಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಆಗಿದ್ದು ಆಗಿ ಹೋಗಿದೆ. ಅದನ್ನೆಲ್ಲಾ ಯಾಕೆ ನೆನಪು ಮಾಡಿಕೊಳ್ಳುತ್ತೀರಿ. ಹಿಂದಿನ ಜೀವನದಲ್ಲಿಯೇ ಸಿಕ್ಕಿ ಹಾಕಿಕೊಳ್ಳಬೇಡಿ ಎಂದು ಗಂಭೀರವಾಗಿ ಸಲಹೆಯನ್ನೂ ನೀಡಿದ್ದಾರೆ.ಇನ್ನು ಕೆಲವರು ಅವರು ಮದುವೆಯಾಗಿ ಚೆನ್ನಾಗಿದ್ದಾರೆ, ಅವರ ಸಂಸಾರವನ್ನು ಹಾಳು ಮಾಡುವ ಕೆಲಸ ಯಾಕೆ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

Belthangady: ಶಾಸಕ ಹರೀಶ್‌ ಪೂಂಜ ಸೇರಿ 65 ಮಂದಿಗೆ ನ್ಯಾಯಾಲಯದಿಂದ ಸಮನ್ಸ್‌