Home Entertainment Actress Chaitra Achar: ಇದೆಲ್ಲ ಓಕೆ ಅನ್ನೋರು ನನ್ನನ್ನ ಅಪ್ರೋಚ್ ಮಾಡ್ಬಹುದು; ನಟಿ ಚೈತ್ರಾ ಆಚಾರ್‌ಗೆ...

Actress Chaitra Achar: ಇದೆಲ್ಲ ಓಕೆ ಅನ್ನೋರು ನನ್ನನ್ನ ಅಪ್ರೋಚ್ ಮಾಡ್ಬಹುದು; ನಟಿ ಚೈತ್ರಾ ಆಚಾರ್‌ಗೆ ಜೋಡಿಯಾಗೋಕೆ ನಿಮ್ಗೂ ಚಾನ್ಸ್ ಇದೆ!

Actress Chaitra Achar

Hindu neighbor gifts plot of land

Hindu neighbour gifts land to Muslim journalist

Actress Chaitra Achar: ಸಪ್ತ ಸಾಗರದಚೆ ಸಿನಿಮಾ ಮೂಲಕ ಫೇಮಸ್ ಆಗಿರೋ ಸ್ಯಾಂಡಲ್ವುಡ್ ಪ್ರತಿಭಾವಂತ ನಟಿ ಚೈತ್ರಾ ಆಚಾರ್ (Actress Chaitra Achar)  ಅವರು ಸಿಂಗಲ್ ಆಗಿರೋದು ಗೊತ್ತೇ ಇದೆ. ಆದ್ರೆ ಇದೀಗ ತಮ್ಮ ಸಂಗಾತಿ ಹೇಗಿರಬೇಕು ಅಂತ ಅವರು ಸಂದರ್ಶನವೊಂದರಲ್ಲಿ ಕ್ಲೂ ನೀಡಿದ್ದು, ಅವರ ಸಂಗಾತಿ ಆಗಲು ನಿಮಗೂ ಒಂದು ಅವಕಾಶ ಇದೆ.

ಹೌದು, ರೆಡಿಯೋ ಜಾಕಿಯಲ್ಲಿ, ಆರ್.ಜೆ ನೇತ್ರಾ (RJ Netra) ಜೊತೆ ಮಾತನಾಡುವಾಗ, ತಮ್ಮ ಹುಡುಗ ಹೇಗಿರಬೇಕು ಎಂಬುದನ್ನು ವಿವರವಾಗಿ ಹೇಳಿದ್ದಾರೆ. ವೃತ್ತಿ ಜೀವನಕ್ಕೆ ಹೆಚ್ಚು ಆದ್ಯತೆ ನೀಡುವ ಚೈತ್ರ ಆಚಾರ್, ತಮ್ಮನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ನನ್ನ ಕೆಲಸವನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು ಎಂದಿದ್ದಾರೆ.

” ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸದೆ ಇರುವವರಿಗೆ ಸಿನಿಮಾ ಶೂಟಿಂಗ್ ಹೇಗೆ ನಡೆಯುತ್ತೆ ಅನ್ನೋದು ತಿಳಿದಿರೋದಿಲ್ಲ. ನನಗೆ  ಗಂಡ ಇದಾನೆ ಅಂದ್ಕೊಳ್ಳಿ. ಸಪ್ತಸಾಗರದಾಚೆ ಸಿನಿಮಾ ಸಿಗುತ್ತೆ. ನಾನು ಅದ್ರಲ್ಲಿ ರಕ್ಷಿತ್ ಜೊತೆ ಇಂಟಿಮೇಟ್ ದೃಶ್ಯ ಮಾಡ್ಬೇಕು. ಪಾತ್ರಕ್ಕೆ ತಕ್ಕಂತೆ ನಾನು ಆಕ್ಟಿಂಗ್ ಮಾಡ್ಬೇಕು. ಅಲ್ಲಿ ತುಂಬಾ ಕ್ಯಾಮೆರಾ ಇರುತ್ತೆ. ಒಂದು ದೃಶ್ಯ ಹೇಗೆ ಬರಬೇಕು ಅಂತ ಗೈಡ್ ಮಾಡ್ತಿರುತ್ತಾರೆ. ನಮಗೂ ದೃಶ್ಯ, ಡೈಲಾಗ್ ಮೇಲೆ ಗಮನ ಇರುತ್ತೆ. ಈ ಎಲ್ಲ ಸೀನ್ ಮುಗಿಸಿಕೊಂಡು ಮನೆಗೆ ಬಂದಾಗ, ಅದ್ಯಾಕ್ ಹಾಗ್ ಮಾಡ್ದೆ, ಇದ್ಯಾಕ್ ಹಾಗ್ ಮಾಡ್ದೆ, ಎಷ್ಟು ಜನ ನಟರಿಗೆ ಕಿಸ್ ಮಾಡ್ದೆ ಅಂತ ಪ್ರಶ್ನೆ ಕೇಳ್ತಿದ್ದರೆ, ಪ್ರತಿ ದಿನ ನಮ್ಮಿಬ್ಬರ ನಡುವೆ ಜಗಳ ಆಗುತ್ತೆ ಬಿಟ್ರೆ ಸಂಸಾರ ನಡೆಯಲ್ಲ. ಹಾಗಾಗಿ ಅಂತ ಗಂಡ ನನಗೆ ಬೇಡ. ನನ್ನನ್ನು ಅರ್ಥ ಮಾಡಿಕೊಳ್ಳೋ ಪತಿ ಬೇಕು ಎಂದಿದ್ದಾರೆ ಚೈತ್ರಾ ಆಚಾರ್. ಆದ್ದರಿಂದ ನಾನು ಎಲ್ಲ ಪಾತ್ರಗಳಲ್ಲಿ ನಟಿಸ್ತೇನೆ. ಅದನ್ನು ನನ್ನ ಸಂಗಾತಿಯಾಗೋರು ಒಪ್ಪಿಕೊಳ್ಳಬೇಕು. ಇದೆಲ್ಲ ಓಕೆ ಅನ್ನೋರು ನನ್ನನ್ನ ಅಪ್ರೋಚ್ ಮಾಡ್ಬಹುದು ಎನ್ನುತ್ತಾರೆ ಚೈತ್ರ ಆಚಾರ್”

ಹೌದು, ನಟಿ ಚೈತ್ರಾ ಆಚಾರ್ ಈ ಮೇಲಿನ ಎಲ್ಲ ಕಂಡಿಷನ್ ಗೆ ಓಕೆ ಎನ್ನುವವರು ಇನ್ಸ್ಟಾಗ್ರಾಮ್ ನಲ್ಲಿ ಡಿಎಂ ಮಾಡ್ಬಹುದು ಎಂದಿದ್ದಾರೆ ನೇತ್ರಾ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಕಮೆಂಟ್ ಶುರು ಮಾಡಿದ್ದಾರೆ. ಇನ್ಸ್ಟಾದಲ್ಲಿ ಡಿಎಂ ಮಾಡಿದ್ರೆ ಅವರು ಪ್ರತಿಕ್ರಿಯೆ ನೀಡ್ತಾರೆ ಅನ್ನೋದು ಯಾವ್ ಗ್ಯಾರಂಟಿ. ಚೈತ್ರಾ ಆಚಾರ್ ನಂಬರ್ ಸೆಂಡ್ ಮಾಡಿ ಅಂತ ಅಭಿಮಾನಿಯೊಬ್ಬರು ಕೇಳಿದ್ದಾರೆ. ಇನ್ನೊಬ್ಬ ನೆಟ್ಟಿಗರು, ಇಂಡೈರೆಕ್ಟಾಗಿ ಚೈತ್ರಾ ನೀವು ಆರ್ಟಿಸ್ಟ್ ಮದುವೆ ಆಗಿ ಎಂದಿದ್ದಾರೆ.