Home Entertainment Kota Srinivasa Rao Death: ದಕ್ಷಿಣದ ಪ್ರಸಿದ್ಧ ನಟ, 4 ದಶಕಗಳ ಕಾಲ ಚಿತ್ರರಂಗವನ್ನು ಆಳಿದ...

Kota Srinivasa Rao Death: ದಕ್ಷಿಣದ ಪ್ರಸಿದ್ಧ ನಟ, 4 ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಕೋಟಾ ಶ್ರೀನಿವಾಸ್‌ ರಾವ್‌ ನಿಧನ

Hindu neighbor gifts plot of land

Hindu neighbour gifts land to Muslim journalist

Kota Srinivasa Rao Death: ತೆಲುಗು ಚಲನಚಿತ್ರೋದ್ಯಮದ ಹಿರಿಯ ನಟ ಕೋಟಾ ಶ್ರೀನಿವಾಸ್ ರಾವ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಜುಲೈ 13 ರ ಭಾನುವಾರ ಬೆಳಿಗ್ಗೆ 4 ಗಂಟೆಗೆ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರಿಗೆ 83 ವರ್ಷ ವಯಸ್ಸಾಗಿತ್ತು. ರಂಗಭೂಮಿಯಲ್ಲಿ, ತೆಲುಗು ಚಿತ್ರಗಳಲ್ಲಿಯೂ ಸಾಕಷ್ಟು ಹೆಸರು ಗಳಿಸಿದ ಇವರ ನಿಧನಕ್ಕೆ ದಕ್ಷಿಣ ಚಿತ್ರರಂಗದ ಜನರನ್ನು ಮಾತ್ರವಲ್ಲದೆ ಇಡೀ ಭಾರತೀಯ ಚಲನಚಿತ್ರೋದ್ಯಮವನ್ನೇ ಆಘಾತಗೊಳಿಸಿದೆ.

ಆಂಧ್ರಪ್ರದೇಶದ ಕಂಕಿಪಡುವಿನಲ್ಲಿ ಜುಲೈ 10, 1942 ರಂದು ಜನಿಸಿದ ಕೋಟ ಶ್ರೀನಿವಾಸ್, 83 ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

ಅವರ ತಂದೆ ಸೀತಾ ರಾಮ್ ಆಂಜನೇಯುಲು ವೈದ್ಯರಾಗಿದ್ದರು. ಕೋಟ ಶ್ರೀನಿವಾಸ ರಾವ್ ಬಾಲ್ಯದಲ್ಲಿ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಲು ಬಯಸಿದ್ದರು. ಆದರೆ, ನಂತರ ಅವರು ನಟನಾಗಲು ನಿರ್ಧರಿಸಿದರು ಮತ್ತು ನಟನೆಯ ಮೇಲಿನ ಉತ್ಸಾಹವನ್ನು ಪೂರೈಸಲು ತಮ್ಮ ಕಾಲೇಜು ದಿನಗಳಲ್ಲಿ ರಂಗಭೂಮಿಯನ್ನು ಸೇರಿದರು. ಅವರು ಸ್ಟೇಟ್ ಬ್ಯಾಂಕಿನಲ್ಲಿಯೂ ಕೆಲಸ ಮಾಡಿದರು. 1978 ರಲ್ಲಿ ‘ಪ್ರಾಣಮ್ ಖರಿದು’ ಚಿತ್ರದ ಮೂಲಕ ಅವರು ತಮ್ಮ ಚೊಚ್ಚಲ ಪ್ರವೇಶ ಮಾಡಿದ ಇವರು, ನಂತರ, 1990 ರ ದಶಕದಲ್ಲಿ ಅವರು ಬಿಜೆಪಿ ಸೇರಿದರು ಮತ್ತು 1999 ರಲ್ಲಿ ವಿಜಯವಾಡ ಸ್ಥಾನದಿಂದ ಆಂಧ್ರಪ್ರದೇಶ ವಿಧಾನಸಭೆಗೆ ಸದಸ್ಯರಾಗಿ ಆಯ್ಕೆಯೂ ಆಗಿದ್ದರು.