Home Entertainment Khushbu: ನನ್ನ ಸೈಜ್ ’41’ ಇಲ್ಲೇ ಕೊಡಬೇಕಾ, ಎಲ್ಲರ ಮುಂದೆ ಓಕೆನಾ: ನಿರ್ಮಾಪಕರಿಗೆ ಖುಷ್ಬು ವಾರ್ನಿಂಗ್!

Khushbu: ನನ್ನ ಸೈಜ್ ’41’ ಇಲ್ಲೇ ಕೊಡಬೇಕಾ, ಎಲ್ಲರ ಮುಂದೆ ಓಕೆನಾ: ನಿರ್ಮಾಪಕರಿಗೆ ಖುಷ್ಬು ವಾರ್ನಿಂಗ್!

Khushbu

Hindu neighbor gifts plot of land

Hindu neighbour gifts land to Muslim journalist

Khushbu: ದಕ್ಷಿಣ ಭಾರತದ ಸಿನಿರಂಗದ ಆರಂಭದಲ್ಲಿ ನಾನು ನಿರ್ಮಾಪಕರೊಬ್ಬರಿಂದ ಕಿರುಕುಳ ಅನುಭವಿಸಿದ್ದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಹಾಗೂ ನಟಿ ಖುಷ್ಬು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹೌದು, ನಟಿ ಖುಷ್ಬು (Khushbu)  ತಮಗಾದ ಕಹಿ ಅನುಭವವನ್ನು ಬಹಿರಂಗಪಡಿಸಿದ್ದು, ನಿರ್ಮಾಪಕರುಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

” ಆಗ ನನಗೆ ಗಾಡ್ ಫಾದ‌ರ್ ಅಂತ ಚಿತ್ರ ರಂಗದಲ್ಲಿ ಯಾರೂ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ  ನಿರ್ಮಾಪಕರೊಬ್ಬರು ತೆಲುಗು ಸಿನಿಮಾವೊಂದರ ಶೂಟಿಂಗ್ ನಡೆಯುತ್ತಿದ್ದ ವೇಳೆ ನಿರ್ಮಾಪಕ ನನ್ನ ಮೇಕಪ್ ರೂಮ್‌ಗೆ ಪ್ರವೇಶಿಸಿ, ಪರೋಕ್ಷವಾಗಿ ತನ್ನ ಬಯಕೆ ಈಡೇರಿಸುವ ಮಾತಗಳನ್ನಾಡಿದರು. ಅದನ್ನು ನಾನು ಅರ್ಥ ಮಾಡಿಕೊಂಡೆ ಮತ್ತು ನನ್ನ ಚಪ್ಪಲಿಗಳನ್ನು ತೆಗೆದು ಚಪ್ಪಲಿ ಗಾತ್ರ 41 ಆಗಿದೆ, ನಿಮಗೆ ಇಲ್ಲಿಯೇ ಕಪಾಳಮೋಕ್ಷ ಮಾಡಬೇಕೇ ಅಥವಾ ಎಲ್ಲರ ಮುಂದೆ ಹೊಡೆಯಬೇಕೇ ಎಂದು ಕೇಳಿದೆ. ಆ ಬಳಿಕ ನಿರ್ಮಾಪಕ ಅಲ್ಲಿಂದ ಹೊರಟು ಹೋದರು ಎಂದು ಖುಷ್ಬು ಹೇಳಿದರು.

ಅಲ್ಲದೆ ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬಳಿಕ ಮಹಿಳೆಯರೇ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಪುರುಷರು ಕೂಡ ಮುಂದೆ ಬಂದು ಮಹಿಳೆಯರ ಪರವಾಗಿ ಧ್ವನಿ ಎತ್ತಬೇಕು ಎಂದು ಖುಷ್ಬು ಕೇಳಿಕೊಂಡರು.

ಇದಕ್ಕೂ ಮುಂಚೆ ಹೇಮಾ ಸಮಿತಿ ವರದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅವರು, ನಿಮ್ಮ ಬಹಿರಂಗ ಇಂದು ಅಥವಾ ನಾಳೆ ಎಂಬುದು ಮುಖ್ಯವಲ್ಲ. ನೀವು ಎಷ್ಟು ಬೇಗ ಹೇಳುತ್ತೀರೋ ಅಷ್ಟು ಬೇಗ ನಿಮ್ಮ ಗಾಯಗಳು ಗುಣವಾಗುತ್ತವೆ ಮತ್ತು ತನಿಖೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.ಒಟ್ಟಿನಲ್ಲಿ ಈ ಶೋಷಣೆ ನಿಲ್ಲಬೇಕು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬೇಡಿ ಎಂದು ಕರೆ ನೀಡಿದರು.