Home Entertainment ಮತ್ತೆ ಒಂದಾಗಲಿದೆ ಅದೇ ತುಂಟ ಖುಷ್ಬು- ರವಿಚಂದ್ರನ್ ಜೊಡಿ | ಯಾವ ಸಿನಿಮಾದಲ್ಲಿ ಮತ್ತೆ ಕೆಮಿಸ್ಟ್ರಿ,...

ಮತ್ತೆ ಒಂದಾಗಲಿದೆ ಅದೇ ತುಂಟ ಖುಷ್ಬು- ರವಿಚಂದ್ರನ್ ಜೊಡಿ | ಯಾವ ಸಿನಿಮಾದಲ್ಲಿ ಮತ್ತೆ ಕೆಮಿಸ್ಟ್ರಿ, ಬಯಾಲಜಿಯ ಬುಗುರಿ ಆಡಲಿದೆ ಗೊತ್ತೇ ?!

Hindu neighbor gifts plot of land

Hindu neighbour gifts land to Muslim journalist

ಖುಷ್ಬು ಕನ್ನಡದಲ್ಲಿ ಮೊದಲಿಗೆ ರಣಧೀರ ದಲ್ಲಿ ನಟಿಸಿದ್ದರು. ಸೂಪರ್ ಡೂಪರ್ ಹಿಟ್ ಆಯಿತು ಅದು. ನಂತರ ಅಂಜದ ಗಂಡು, ಶಾಂತಿ ಕ್ರಾಂತಿ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಾಭಿಮಾನಿಗಳ ಮನ ಗೆದ್ದಿದ್ದಾರೆ. ತೆಲುಗು ತಮಿಳಿನಲ್ಲಿ ಖುಷ್ಬು ಜನಪ್ರಿಯತೆ ಗಳಿಸಿದ್ದಾರೆ. ತಮಿಳುನಾಡಿನಲ್ಲಿ ಆಕೆಯ ಸೌಂದರ್ಯದ ಹುಚ್ಚು ಅಭಿಮಾನಿಗಳು ಆಕೆಗೊಂದು ದೇವಸ್ಥಾನವನ್ನು ಕೂಡ ಕಟ್ಟಿಕೊಟ್ಟಿದ್ದರು. ಆದ್ರೆ ಖುಷ್ಬೂ ಬರೋಬ್ಬರಿ 12 ವರ್ಷಗಳ ಕಾಲ ಕನ್ನಡ ಸಿನಿಮಾರಂಗದಿಂದ ದೂರವಿದ್ದರು.

ಕನ್ನಡ ಚಿತ್ರರಂಗದಲ್ಲಂತೂ ರಣಧೀರ ಜೊಡಿ ಎಂದೆ ಖುಷ್ಬು ಮತ್ತು ರವಿಚಂದ್ರನ್ ಹೆಸರು ಮಾಡಿದ್ದರು. ರಸಿಕರ ರಾಜ ರವಿಚಂದ್ರನ್ ಜೊತೆ ಖುಷ್ಬು ಜೋಡಿಯಾದರೆ ನೋಡುಗರ ಎದೆಯಲ್ಲಿ ಪ್ರೀತಿಯ ಬುಗುರಿ ಕಚಗುಳಿ ಇಡುತ್ತಿತ್ತು. ತೆರೆಯ ಮೇಲೆ ಇವರಿಬ್ಬರ ಕೆಮಿಸ್ಟ್ರಿ ನೋಡಲು ಜನ ಮುಂದಿನ ಸಾಲಿನಲ್ಲಿ ಕೂತು ಚಿತ್ರ ವೀಕ್ಷಿಸುತ್ತಿದ್ದರು !

ಈಗ 12 ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಮರಳಿ ಬರಲಿದ್ದಾರೆ ಖುಷ್ಮೂ.‌ವಿಶೇಷವೆಂದರೆ ರವಿಚಂದ್ರನ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ ! ಹೊಸ ಸಿನಿಮಾದಲ್ಲಿ ನಾಯಕನ ತಂದೆ ರವಿಚಂದ್ರನ್ ಆದ್ರೆ , ನಾಯಕನ ತಾಯಿಯಾಗಿ ಖುಷ್ಬು ಬಣ್ಣ ಹಚ್ಚಲಿದ್ದು, ಖುಷ್ಬೂ ರವಿಚಂದ್ರನ್ ಜೊಡಿ ಮತ್ತೆ ಮರುಕಳಿಸಲಿರುವುದು ಸಿನಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಆದರೆ ಕಾಲ ಈಗ ಬದಲಾಗಿದೆ. ಉಕ್ಕುವ ಯವ್ವನದ ಹುಡುಗಿಯ ಬದಲು ಈಗ ಆಂಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಖುಷ್ಬೂ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯ ಮೊದಲ ಸಿನಿಮಾದ ಇದಾಗಿದ್ದು , ಇದೇ ಸಿನಿಮಾದಲ್ಲಿ ಕಿರೀಟಿಗೆ ತಂದೆ ತಾಯಿಯಾಗಿ ಈ ಜೊಡಿ ಕಾಣಿಸಿಕೊಳ್ಳಲಿದೆ. ಮತ್ತೆ ತೆರೆಯ ಮೇಲೆ ಈ ಜೋಡಿಯನ್ನು ಒಟ್ಟಿಗೆ ನೋಡುವ ಅವಕಾಶ ಮೂಡಿದೆ. ಆ ಮೂಲಕ ಹಳೆಯ ಕ್ರೇಜೀ ನೆನಪುಗಳ ಮೆಲುಕು ಶುರುವಾಗಿದೆ.