Home Entertainment BBK-10: ಇವರೇ ನೋಡಿ ಬಿಗ್ ಬಾಸ್ ವಿನ್ನರ್ !!

BBK-10: ಇವರೇ ನೋಡಿ ಬಿಗ್ ಬಾಸ್ ವಿನ್ನರ್ !!

Hindu neighbor gifts plot of land

Hindu neighbour gifts land to Muslim journalist

BBK-10: ಬಿಗ್​ಬಾಸ್​ ವಿಜೇತರ ಘೋಷಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ಆದರೆ ಈ ನಡುವೆ ಇವರೇ ಬಿಗ್ ಬಾಸ್-10(BBK-10) ವಿನ್ನರ್ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

ನಿನ್ನೆ ಜನವರಿ 27ರಿಂದ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ (Grand finale)ಶುರುವಾಗಿದೆ. ಇಂದು ಒಬ್ಬರ ಕೈಯನ್ನು ಕಿಚ್ಚ ಸುದೀಪ್​ ಎತ್ತುವ ಮೂಲಕ ಬಿಗ್​ಬಾಸ್​ ವಿಜೇತರನ್ನು ಘೋಷಿಸಲಿದ್ದಾರೆ. ಈ ಮೂಲಕ ಬಿಗ್​ಬಾಸ್​ ಕನ್ನಡದ ಸೀಸನ್​ 10ರ ಗ್ರ್ಯಾಂಡ್​ ಫಿನಾಲೆಗೆ ತೆರೆ ಬೀಳಲಿದೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್ ನೀಡಿರುವ ಒಂದು ಹೇಳಿಕೆ ಬಿಗ್ ಬಾಸ್ ವಿನ್ನರ್ ಯಾರೆಂಬುದನ್ನು ಸೂಚಿಸಿದಂತಿದೆ.

ಹೌದು, ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳ ಜೊತೆ ಮಾತನಾಡಿದ ಕಿಚ್ಚ, ಕಾರ್ತಿಕ್(Karthik) ಬಳಿಯೂ ಕೂಡ ತಮಗೆ ಮನೆ ಹೊರಗಡೆ ಇರುವ ಫ್ಯಾನ್ ಫಾಲೋವರ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಕಾರ್ತಿಕ್ ಕಣ್ಣೀರು ಹಾಕುತ್ತಾ ಇಡೀ ಅಭಿಮಾನಿ ಬಳಗಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗ ಸುದೀಪ್, “ಕಾರ್ತಿಕ್ ಅವರೇ ಅಳಬೇಡಿ… ಇಷ್ಟೊಂದು ಜನ ತೋರಿದ ಪ್ರೀತಿಯನ್ನು ಹೊರಗಡೆ ಬಂದ ಮೇಲೆ ಎಂಜಾಯ್ ಮಾಡಿ, ಪಾರ್ಟಿ ಮಾಡಿ.. ಕೂಲ್ ಆಗಿ ಇದ್ದು ಬಿಡಿ” ಎಂದು ಹೇಳಿದ್ದಾರೆ.

ಈ ಮಾತುಗಳನ್ನು ಕೇಳಿಸಿಕೊಂಡ ಬಿಗ್ ಬಾಸ್ ಫ್ಯಾನ್ಸ್ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಎಂದೇ ಹೇಳುತ್ತಿದ್ದು, ಸುದೀಪ್ ಅವರು ಹೀಗೆ ಹೇಳಲು ಕಾರಣ ಕಾರ್ತಿಕ್ ವಿನ್ ಆಗುತ್ತಾರೆ. ಹಾಗಾಗಿ ಕಿಚ್ಚ ಈ ಸುಳಿವು ನೀಡಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಮೂಲಗಳು ಕೂಡ ಕಾರ್ತಿಕ್ ಅವರೇ ಈ ಬಾರಿಯ ವಿಜೇತ ಎಂದು ಹೇಳಲಾಗುತ್ತಿದೆ.