Home Entertainment ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ ಕಾಂತಾರ | ವಿದೇಶದಲ್ಲೂ ಮೊಳಗಲಿದೆ ಗಗ್ಗರದ ಸದ್ದು, ಗುಳಿಗನ ಆರ್ಭಟ...

ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ ಕಾಂತಾರ | ವಿದೇಶದಲ್ಲೂ ಮೊಳಗಲಿದೆ ಗಗ್ಗರದ ಸದ್ದು, ಗುಳಿಗನ ಆರ್ಭಟ !

Hindu neighbor gifts plot of land

Hindu neighbour gifts land to Muslim journalist

ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ನಟನೆ ಮತ್ತು ನಿರ್ದೇಶನದ ಕನ್ನಡದ `ಕಾಂತಾರ’ (Kantara) ಹಲವು ಭಾಷೆಯಲ್ಲೂ ರಿಲೀಸ್ ಆಗಿ ಎಲ್ಲಾ ಕಡೆ ಕಮಾಲ್ ಮಾಡುತ್ತಿದೆ. ಮೊನ್ನೆ ಒಟಿಟಿಯಲ್ಲಿ ಬಿಡುಗಡೆ ಆಗಿ ಅಲ್ಲೂ ಕಾಂತಾರ ಹವಾ ಮೇಂಟೇನ್ ಮಾಡಿಕೊಂಡು ಬರುತ್ತಿದೆ. ಕಾಂತಾರದ ಯಶಸ್ಸಿನ ಸಂಪೂರ್ಣ ಲಾಭವನ್ನು ಹಿರಿ ಹಾಕಲು ಚಿತ್ರತಂಡ ಮತ್ತೆ ಸಜ್ಜಾಗಿದೆ. ಅಂತರಾಷ್ಷ್ರೀಯ ಪ್ರೇಕ್ಷಕರನ್ನು ಸೆಳೆಯಲು ವಿದೇಶಿ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.

ಈಗಾಗಲೇ ಕನ್ನಡದಿಂದ ತೆಲುಗು, ತಮಿಳು, ಮಲಯಾಳಂ, ಹಿಂದಿ ಡಬ್ ಆಗಿದೆ. ಇದೀಗ ಕಾಂತಾರದ ಮಾತೃ ಸಂಸ್ಕೃತಿಯ ಮಾತೃ ಭಾಷೆ ತುಳುವಿನಲ್ಲಿ ಕೂಡಾ ಡಬ್ ಆಗಿ ರಿಲೀಸ್ ಆಗಿದೆ. ಇದೀಗ ‌ಕಾಂತಾರದ ಇಂಗ್ಲೀಷ್ ವರ್ಷನ್ ಸರದಿ. ವಿದೇಶಿ ಭಾಷೆಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಅದು ಜಗತ್ತಿನ ಬಹುದೊಡ್ಡ   ಪ್ರೇಕ್ಷಕ ವೃಂದಕ್ಕೆ ತೆರೆದುಕೊಳ್ಳಲಿದೆ.

ಎಲ್ಲಾ ಭಾಷೆಯ ಪ್ರೇಕ್ಷಕರನ್ನ ಸೆಳೆಯುತ್ತಿರುವ ಕಾಂತಾರವು ಇದೀಗ ಪ್ರಪಂಚದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಇಂಗ್ಲಿಷ್ ಬಲ್ಲ ವಿದೇಶಿಗರನ್ನು ಸೆಳೆಯಲು ಚಿತ್ರತಂಡ ರೆಡಿಯಾಗಿದೆ. ಕಾಂತಾರ ಇಂಗ್ಲೀಷ್ ವರ್ಷನ್ ( kantara English Version) ಜನವರಿಯಿಂದ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ಅಪ್ಪಟ ಮಣ್ಣ ವಾಸನೆಯ ತುಳುನಾಡಿನ ಸಂಸ್ಕೃತಿಯನ್ನು ಅದು ಹೇಗೆ ಪರಕೀಯ ಭಾಷೆ ಇಂಗ್ಲೀಷ್ ಗೆ ಬಗ್ಗಿಸಬಹುದು ಮತ್ತು ಚಿತ್ರ ಡಬ್ ಮಾಡಿದರೆ ಅದು ಹೇಗೆ ಕಾಣಿಸಬಹುದು ಎಂಬ ಕುತೂಹಲ ಈಗ ಸಹಜವಾಗಿ ಎಲ್ಲರಲ್ಲೂ ಮೂಡಿದೆ.

ತುಳುವರ ಆಟ, ನಂಬಿಕೆಯ ಕಾರ್ಣೀಕ, ನೇಮ-ಕೋಲದ ನಿಯತ್ತು, ಗಗ್ಗರದ ಆರ್ಭಟ, ಕಂಬಳದ ಗಮ್ಮತ್ತು ಮುಂತಾದ ತುಳು ಸಂಸ್ಕೃತಿಯ ಹತ್ತಾರು ವರ್ಣಮಯ ಸಂಸ್ಕೃತಿಯನ್ನು ಇಂಗ್ಲೀಷಿನಲ್ಲಿ ಹೇಗೆ ಕಟ್ಟಿಕೊಡಬಹುದು ಎನ್ನುವ ಬಗ್ಗೆ ಕುತೂಹಲದ ಜತೆ ಆಸಕ್ತಿ ಕೂಡಾ ಜನರಲ್ಲಿ ಇದೆ.

ಭಾರತದ ಎಲ್ಲ ಭಾಷೆಯಲ್ಲೂ ಕಾಂತಾರ (Kantara in English) ಕಲರವ ಎಬ್ಬಿಸಿದಂತೆ ಒಂದೊಮ್ಮೆ ಅದು ಇಂಗ್ಲೀಷ್ ನಲ್ಲಿ ಕೂಡಾ.ಆಸಕ್ತಿ ಮೂಡಿಸಿದರೆ, ಮುಂದೆ ಹೊಸ ಊಹಿಸಿಕೊಳ್ಳಲೂ ಆಗದ ದೊಡ್ಡ ಇತಿಹಾಸ ಸೃಷ್ಟಿಯಾಗಲಿದೆ. ಕಾರಣ, ವಿಶ್ವದಾದ್ಯಂತ ಇರುವ ಇಂಗ್ಲೀಷ್ ಬಲ್ಲ ಜನರು ಮತ್ತು ಇಂಗ್ಲೀಷ್ ಚಿತ್ರಕ್ಕೆ ಇರುವ ಮಾರ್ಕೆಟ್.