Home Entertainment ಅಜ್ಜಿ ಸತ್ತಾಗಲೂ ನಗ್ತಿದ್ದನಂತೆ, ಎಂಥ ಮನುಷ್ಯ ಈತ? ಈ ಮಟ್ಟಕ್ಕೆ ಕಾಮಿಡಿಯ?

ಅಜ್ಜಿ ಸತ್ತಾಗಲೂ ನಗ್ತಿದ್ದನಂತೆ, ಎಂಥ ಮನುಷ್ಯ ಈತ? ಈ ಮಟ್ಟಕ್ಕೆ ಕಾಮಿಡಿಯ?

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನದ್ದೇ ಸೌಂಡು. ಒಂದಲ್ಲ ಒಂದು ವಿಚಾರಕ್ಕೆ ಗಿಲ್ಲಿ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಅಶ್ವಿನಿ ಗೌಡ, ಜಾಹ್ನವಿಯಿಂದ ಹಿಡಿದು ಎಲ್ಲರೂ ಇವರ ಹೆಸರೇ ಹೇಳುತ್ತಿದ್ದಾರೆ. ಈಗ ಗಿಲ್ಲಿ ನಟನಿಗೆ ಮಾನವೀಯತೆ ಇಲ್ಲ, ಅಜ್ಜಿ ಸತ್ತರೂ ನಗುತ್ತಿದ್ದರಂತೆ. ಆ ಮಟ್ಟಿಗೆ ಆತನದ್ದು ಕಾಮಿಡಿಯ ಅಥವಾ ಆ ಮಟ್ಟಿಗೆ ಬೇಜವಾಬ್ದಾರಿ ಮಾತಾ? ಗೊತ್ತಿಲ್ಲ. ಒಟ್ಟಾರೆ ಕಾಮಿಡಿ ಗಿಲ್ಲಿ ಪಾಲಿಗೆ ಕಾಸ್ಟ್ಕಿ ಆಗಿದೆ.
ಆಟದ ವಿಚಾರಕ್ಕೆ, ಕಾಮಿಡಿ ವಿಚಾರಕ್ಕೆ ಗಿಲ್ಲಿ ನಟನನ್ನು ಧನುಷ್‌, ಧ್ರುವಂತ್‌, ಅಶ್ವಿನಿ ಗೌಡ, ಜಾಹ್ನವಿ, ರಾಶಿಕಾ ಶೆಟ್ಟಿ, ರಿಷಾ ಗೌಡ, ಅಭಿಷೇಕ್‌ ಶ್ರೀಕಾಂತ್ ಅವರು ಕೂಡ ವಿರೋಧಿಸಿದ್ದರು. ಗಿಲ್ಲಿಯ ಗಿಲ್ಲೊ ಕಾಮಿಡಿ ಕಾವ್ಯ ಶೈವಗೂ ಬೇಸರ ತಂದಿತ್ತು. ಬೇರೆಯವರನ್ನು ತೇಜೊವಧೆ ಮಾಡಿ ಮಾಡ್ತಾರೆ ಎಂಬ ಆರೋಪ ಇತ್ತು.

ಸಾಯುತ್ತಿದ್ದರೂ ನೀರು ಕೊಡಲ್ಲ
“ಯಾರಾದರೂ ಪಕ್ಕದಲ್ಲಿ ಸಾಯುತ್ತಿದ್ದರೆ, ಗಿಲ್ಲಿ ನಟ ಒಂದು ಗ್ಲಾಸ್‌ ನೀರು ಕೊಡಲ್ಲ. ಸಾವಿನ ಮನೆಯಲ್ಲಿಯೂ ತಮಾಷೆ ಮಾಡುತ್ತಾನೆ” ಎಂದು ಧ್ರುವಂತ್‌ ಹೇಳಿದ್ದಾರೆ. “ಅಜ್ಜಿ ತೀರಿಕೊಂಡಾಗ ನಗುತ್ತಿದ್ದೆ ಎಂದು ಗಿಲ್ಲಿಯೇ ಹೇಳಿದ್ದಾನೆ. ಅವನಿಗೆ ಮಾನವೀಯತೆ ಇಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.