Home Entertainment Narayana Gowda : ‘ಅಶ್ವಿನಿ ಗೌಡ ಇಲ್ಲದಿದ್ರೆ 4 ವಾರದಲ್ಲೇ ಬಿಗ್‌ಬಾಸ್‌ ಮುಚ್ಚಬೇಕಾಗಿತ್ತು’- ಕರವೇ ನಾರಾಯಣಗೌಡ...

Narayana Gowda : ‘ಅಶ್ವಿನಿ ಗೌಡ ಇಲ್ಲದಿದ್ರೆ 4 ವಾರದಲ್ಲೇ ಬಿಗ್‌ಬಾಸ್‌ ಮುಚ್ಚಬೇಕಾಗಿತ್ತು’- ಕರವೇ ನಾರಾಯಣಗೌಡ ಹೇಳಿಕೆ!!

Hindu neighbor gifts plot of land

Hindu neighbour gifts land to Muslim journalist

Narayana Gowda : ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಶೋವನ್ನು ಮುಚ್ಚಬೇಕಾಗಿತ್ತು ಎಂದು ವಾಹಿನಿಯ ಮುಖ್ಯಸ್ಥರೇ ಹೇಳಿದ್ದರು ಎಂದು ನಾರಾಯಣಗೌಡ್ರು ಹೇಳಿದ್ದಾರೆ. ಫಿನಾಲೆ ಹೊತ್ತಲ್ಲಿ ನಾರಾಯಣ ಗೌಡ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

ಕನ್ನಡಪರ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೋರಾಟಗಾರ್ತಿ ಎನ್ನುತ್ತಲೇ ಬಿಗ್‌ ಬಾಸ್‌ ಮನೆಯಲ್ಲಿ ಸದ್ದು ಮಾಡಿರುವ ಅಶ್ವಿನಿ ಅವರು ಫಿನಾಲೆಗೆ ತಲುಪಿದ್ದಾರೆ. ಇದೀಗ ಅಶ್ವಿನಿ ಅವರ ಆಟವನ್ನು ಹಾಡಿ ಹೊಗಳಿರುವ ನಾರಾಯಣ ಗೌಡರು “ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಶೋವನ್ನು ನಾಲ್ಕು ವಾರದಲ್ಲೇ ಮುಚ್ಚಬೇಕಾಗಿತ್ತು ಎಂದು ವಾಹಿನಿಯ ಮುಖ್ಯಸ್ಥರೇ ಹೇಳಿದ್ದರು” ಎಂದು ಹೇಳಿದ್ದಾರೆ.

ನಾರಾಯಣಗೌಡರ ಈ ಮಾತನ್ನು ಕೇಳಿ ಅನೇಕರು ನಾನಾ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಾಹಿನಿಯಾಗಲೀ, ವಾಹಿನಿಯ ಸಿಬ್ಬಂದಿಯಾಗಲೀ ಈ ಬಗ್ಗೆ ಮಾತನಾಡಿಲ್ಲ.