Home Entertainment RCB ಖರೀದಿಗೆ ಹೊಂಬಾಳೆ ಫಿಲಂಸ್ ಸಜ್ಜು?

RCB ಖರೀದಿಗೆ ಹೊಂಬಾಳೆ ಫಿಲಂಸ್ ಸಜ್ಜು?

Hindu neighbor gifts plot of land

Hindu neighbour gifts land to Muslim journalist

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ತಮ್ಮ ಕ್ರಿಕೆಟ್ ತಂಡದ ಮೇಲೆ ದೊಡ್ಡ ನಿರ್ಧಾರ ಕೈಗೊಂಡಿದೆ. ಅಂದರೆ ಆರ್‌ಸಿಬಿಯನ್ನು ಅಧಿಕೃತವಾಗಿ ಮಾರಾಟಮಾಡಲು ಸಿದ್ದ ಮಾಡಿದೆ. ಇದರ ಬೆನ್ನಲ್ಲೇ ತಂಡವನ್ನು ಖರೀದಿಸಲು ಆಸಕ್ತಿದಾರರ ಪಟ್ಟಿ ಉದ್ದವಾಗುತ್ತಿದ್ದು, ಬಿಲಿಯನೇರ್‌ಗಳ ನಡುವೆ ಭರ್ಜರಿ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ. ಇದರ ನಡುವೆ ಆರ್‌ಸಿಬಿಯು ಕರ್ನಾಟಕದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ತೆಕ್ಕೆಗೆ ಸೇರಲಿದೆ ಎಂಬ ಸುದ್ದಿಯು ಕೂಡ ಕೇಳಿ ಬರುತ್ತಿದೆ.

ಹೌದು, ಜಿಎಫ್, ಕಾಂತಾರ ಚಿತ್ರಗಳ ಗ್ಲೋಬಲ್ ಹಿಟ್ ಬಳಿಕ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ ಮತ್ತೊಂದು ಮಹತ್ವದ ಸಾಹಸಕ್ಕೆ ಕೈ ಹಾಕ್ತಿದೆ ಎನ್ನಲಾಗಿದೆ. IPL ಇತಿಹಾಸದಲ್ಲೇ ಕ್ರೇಜಿಯೆಸ್ಟ್ ಹಾಗೂ ಹೈಯೆಸ್ಟ್ ಫ್ಯಾನ್ ಫಾಲೋಯಿಂಗ್ ಇರೋ RCB ಫ್ರಾಂಚೈಸ್‌ನ ಖರೀದಿಸೋಕೆ ಮುಂದಾಗಿದೆಯಂತೆ.

ಅಂದಹಾಗೆ ಹೊಂಬಾಳೆಗೆ ಆರ್‌ಸಿಬಿ ಟೀಂ ಹೊಸತೇನಲ್ಲ. ಈಗಾಗ್ಲೇ ಕೆಜಿಎಫ್, ಕಾಂತಾರ ಚಿತ್ರಗಳ ಸಮಯದಲ್ಲಿ ಅಫಿಶಿಯಲ್ ಆಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಟೀಂ ಜೊತೆ ಹೊಂಬಾಳೆ ಟೈಯಪ್ ಆಗಿತ್ತು. ಜೊತೆಗೆ ಇಡೀ ಆರ್‌ಸಿಬಿ ಟೀಂಗೆ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳನ್ನ ತೋರಿಸಿದ್ರು ವಿಜಯ್ ಕಿರಗಂದೂರು.

ಇನ್ನೂ ಹೊಂಬಾಳೆ ಫಿಲಂಸ್ ಆರ್‌ಸಿಬಿ ಫ್ರಾಂಚೈಸ್‌ನ ಖರೀದಿ ಮಾಡೋದ್ರಿಂದ ಒಂದಲ್ಲ ಎರಡೆರಡು ಬಿಗ್ ಬ್ರೇಕಿಂಗ್ ನ್ಯೂಸ್‌ಗಳು ಕೊಡೋ ಸಾಧ್ಯತೆಯಿದೆ. ಇತ್ತೀಚೆಗೆ ಆರ್‌ಸಿಬಿ ಕಪ್ ಗೆದ್ದು, ಫ್ಯಾನ್ಸ್ ಮೀಟ್ ಮಾಡುವಾಗ ಆದಂತಹ ದುರಂತದಿಂದ ಕಿಂಗ್ ಕೊಹ್ಲಿ ಬೇಜಾರಾಗಿದ್ದಾರೆ. ಹಾಗಾಗಿ ಕೊಹ್ಲಿ ಟೀಂ ತೊರೆಯುತ್ತಾರೆ ಅನ್ನೋ ಮಾತುಗಳು ಕೇಳಿಬವರ್ತಿವೆ. ಆದ್ರೆ ಹೊಂಬಾಳೆ ಫಿಲಂಸ್ ರನ್ ಮಷಿನ್ ಕೊಹ್ಲಿಯನ್ನ ಟೀಂನಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಒಟ್ನಲ್ಲಿ ಆರ್‌ಸಿಬಿ ಮಾಲೀಕತ್ವ ಹೊಂಬಾಳೆ ಪಾಲಾಗುತ್ತಾ ಅಥ್ವಾ ಇಲ್ಲವಾ ಅನ್ನೋದನ್ನ ಇನ್ನಷ್ಟೇ ಕಾದುನೋಡಬೇಕಿದೆ.