Home Entertainment ವಾರಾಂತ್ಯ ದಲ್ಲಿ  ಎಂಟ್ರಿ ಕೊಟ್ಟ ಕಿಚ್ಚ, ಮನೆಮಂದಿಗೆ ಫುಲ್ ಕ್ಲಾಸ್

ವಾರಾಂತ್ಯ ದಲ್ಲಿ  ಎಂಟ್ರಿ ಕೊಟ್ಟ ಕಿಚ್ಚ, ಮನೆಮಂದಿಗೆ ಫುಲ್ ಕ್ಲಾಸ್

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಪ್ರತಿದಿನ ಕಲರ್ಸ್ ಕನ್ನಡದಲ್ಲಿ 9.30 ಕ್ಕೆ ಆರಂಭವಾಗುತ್ತದೆ. ಆದರೆ ವಾರಾಂತ್ಯದಲ್ಲಿ ಕಿಚ್ಚನ ಆಗಮನದ ದಿನ 9.00 ಗೆ ಆರಂಭವಾಗುತ್ತದೆ. ಇದಕ್ಕಾಗಿ ಮನೆಮಂದಿಯೆಲ್ಲ ಸಜ್ಜಾಗಿ ಕೂತಿರುತ್ತಾರೆ. ವೀಕ್ಷಕರೆಂದು ಕಿಚ್ಚನ ಮಾತುಗಳಿಗೆ ಕಾಯುತ್ತಾ ಇರುತ್ತಾರೆ. ಬಿಗ್ ಬಾಸ್ ಮನೆಯಿಂದ ನಾಲ್ಕು ಜನನ ನವೀನಾರು ಈಗಾಗಲೇ ಔಟ್ ಆಗಿದ್ದಾರೆ.

ಸುದೀಪ್ ಈ ಬಾರಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆಗೆ ವಿದೇಶಕ್ಕೆ ತೆರಳಿದ್ರು ಎಂದು ಹೇಳಲಾಗುತ್ತಿದೆ. ಅದರ ಜೊತೆಗೆ ಸುದೀಪ್ ಮತ್ತು ಪ್ರಿಯ ಭಾರತ ಹಾಗೂ ಪಾಕ್ ನಡುವಿನ ಟಿ – 20 ಪಂದ್ಯ ವೀಕ್ಷಿಸಿದ್ದ ಫೋಟೋ ವೈರಲ್ ಕೂಡ ಆಗಿತ್ತು. ಎಲ್ಲ ಕಾರಣದಿಂದ ಹಿಂದಿನ ವಾರ ಸುದೀಪ್ ಬಂದಿರಲಿಲ್ಲ. ವಿಭಿನ್ನ ಶೈಲಿಯಲ್ಲಿ ಎಲಿಮಿನೇಷನ್ ಕೂಡ ಮಾಡಿ ಮಯೂರಿ ಮನೆಯಿಂದ ಹೊರ ಬಂದಿದ್ದರು.

ಕ್ಯಾಪ್ಟನ್ ಆಗಿದ ದೀಪಿಕಾಳಿಗೆ ಕಿಚ್ಚ ಕ್ಲಾಸ್
ದೀಪಿಕಾ ಕ್ಯಾಪ್ಟನ್ ಆಗಿದ್ದಾಗ ಒಂದು ತಂಡಕ್ಕೆ ಮೋಸ ಆಗಿದೆ ಎಂದು ಸುದೀಪ್ ಹೇಳುತ್ತಾರೆ. ರೂಪೇಶ್ ರಾಜಣ್ಣ ಮತ್ತು ದಿವ್ಯ  ಸಹ ಅದನ್ನೇ ಹೇಳುತ್ತಾರೆ. ಅವರು ನಮ್ಮ ಮಾತನ್ನು ಸಹ ಕೇಳಿಸಿಕೊಳ್ಳುತ್ತಿಲ್ಲ ಇಂದು ಸುದೀಪ್ ಬಳಿ ಹೇಳ್ತಾರೆ. ಆಗ ನೀಹ ಗೌಡ ಮತ್ತು ದೀಪಿಕಾ ಅವರು ನಡೆದುಕೊಂಡ ರೀತಿ ಇಷ್ಟ ಆಗಲಿಲ್ಲ ಎಂದು ಹೇಳುತ್ತಾರೆ. ದೀಪಿಕಾ ಅವರಿಗೆ ಗೇಮ್ ಬೇಳೆ ಫೇವರಿಸಂ ಆಗಿದೆ ಎಂದು ಕಿಚ್ಚ ತಪ್ಪನ್ನು ತಿದ್ದಿದ್ದಾರೆ. ದೀಪಿಕಾ ಅದಕ್ಕೆ ಕ್ಷಮೆಯನ್ನು ಕೂಡ ಕೇಳಿದ್ದಾರೆ.

ಸಾನ್ಯಾ ಅಯ್ಯರ್ ಕ್ಯಾಪ್ಟನ್ ಆಗಿದ್ದಾಗ ಮಾಡಿದ ತಪ್ಪು

ಸಾನ್ಯ ಕ್ಯಾಪ್ಟನ್ ಆಗಿದ್ದಾಗ ಹಲವು ಕಂಡಿಶನ್ ಗಳು ಮತ್ತು ತೆಗೆದುಕೊಂಡಂತಹ ನಿರ್ಧಾರಗಳು ತಪ್ಪು ಇತ್ತು. ಇದರಿಂದ ಮನೆಯವರಿಗೆ ಕ್ಯಾಪ್ಟನ್ ಇಷ್ಟ ಆಗದೆ ಕಳಪೆ ಕೊಟ್ಟಿದ್ರು. ಸಾನ್ಯಾ ಮಾತಿನಿಂದ ಮನೆಯವರಿಗೆ ಮನಸ್ಸಿಗೆ ತುಂಬಾ ನೋವಾಗಿದೆ ಮತ್ತು ಸರಪಟಾಕಿಯಂತೆ ಜಗಳ ಬೆಳಗಿನ ಜಾವತನಕ ಹತ್ತಿ ಬಿಟ್ಟಿತ್ತು ಇದು ನಿಮ್ಮ ತಪ್ಪು ಎಂದು ಸುದೀಪ್ ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಎಲ್ಲಾ ಖಡಕ್  ಎಚ್ಚರಿಕೆ ನೀಡಿದ್ದು ಮನೆ ಮಂದಿಗೆ ಮತ್ತೊಮ್ಮೆ ರೀಚಾರ್ಚ್ ಮಾಡಿದಂತೆ ಆಗಿದೆ.