Home Entertainment Umashree : ಮೊದಲ ಬಾರಿಗೆ ಯಕ್ಷಗಾನ ಪಾತ್ರ ಮಾಡಿ ಸೈ ಎನಿಸಿಕೊಂಡ ಖ್ಯಾತ ನಟಿ ಉಮಾಶ್ರೀ...

Umashree : ಮೊದಲ ಬಾರಿಗೆ ಯಕ್ಷಗಾನ ಪಾತ್ರ ಮಾಡಿ ಸೈ ಎನಿಸಿಕೊಂಡ ಖ್ಯಾತ ನಟಿ ಉಮಾಶ್ರೀ !! ವೇಷ ಧರಿಸಲು ಇದೆ ಆ ಒಂದು ಪ್ರಬಲ ಕಾರಣ!!

Hindu neighbor gifts plot of land

Hindu neighbour gifts land to Muslim journalist

Umashree: ಕನ್ನಡದ ಖ್ಯಾತ ನಟಿ, ಮಾಜಿ ಸಚಿವೆ, ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಅವರು ಮೊದಲ ಬಾರಿಗೆ ಯಕ್ಷಗಾನ ವೇಷದಲ್ಲಿ ಮಿಂಚಿ ಪ್ರೇಕ್ಷಕರ ಹಾಗೂ ಯಕ್ಷಗಾನ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಹೌದು, 480ಕ್ಕೂ ಹೆಚ್ಚು ಚಲನಚಿತ್ರ, ನೂರಾರು ನಾಟಕಗಳಲ್ಲಿ ನಟಿಸಿ ಹೆಸರು ಮಾಡಿರುವ ಉಮಾಶ್ರೀ(Umashree) ಮೊದಲ ಬಾರಿಗೆ ಯಕ್ಷಗಾನ ವೇಷದಲ್ಲಿ ಮಿಂಚಿದ್ದಾರೆ. ಹೊನ್ನಾವರದ ಸೆಂಟ್ ಆಂಥೋನಿ ಮೈದಾನದಲ್ಲಿ ಶುಕ್ರವಾರ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯು ಪ್ರದರ್ಶಿಸಿದ ‘ಶ್ರೀ ರಾಮ ಪಟ್ಟಾಭಿಷೇಕ’ ಪ್ರಸಂಗದಲ್ಲಿ ‘ಮಂಥರೆ’ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಮೂಲಕ ಯಕ್ಷಗಾನ ರಂಗದಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ತಮ್ಮೊಳಗಿನ ಮತ್ತೊಂದು ಪ್ರತಿಭೆಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

 

ಅಂದಹಾಗೆ ಇದೇ ಮೊದಲ ಬಾರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಅಭಿನಯಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ. ಅದೇನೆಂದರೆ ಯಕ್ಷಗಾನದಲ್ಲಿ ದಿಗ್ಗಜ ಕಲಾವಿದರ ಸಾಲಿನಲ್ಲಿ ರಾಮಚಂದ್ರ ಚಿಟ್ಟಾಣಿಯವರೂ ಒಬ್ಬರು. ದಿವಂಗತ ರಾಮಚಂದ್ರ ಚಿಟ್ಟಾಣಿಯವರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಪಾತ್ರ ಮಾಡಬೇಕೆಂದಿತ್ತಂತೆ. ಇದನ್ನು ಅವರು ತಾವು ಬದುಕಿದ್ದಾಗಲೇ ಕೇಳಿದ್ದರಂತೆ.

 

ಅಲ್ಲದೆ ಮಂಥರೆ ಪಾತ್ರ ಮಾಡುವಂತೆ ಕೇಳಿದಾಗ ಉಮಾಶ್ರೀ ನನಗೆ ಯಕ್ಷಗಾನ ಅನುಭವವಿಲ್ಲ. ಹೀಗಾಗಿ ಹೇಗೆ ಮಾಡಲಿ ಎಂದು ಹಿಂದೇಟು ಹಾಕಿದ್ದರಂತೆ. ಇತ್ತೀಚೆಗೆ ಅವರ ಮಗ ಸುಬ್ರಹ್ಮಣ್ಯ ಚಿಟ್ಟಾಣಿಯವರು ಮಂಥರೆಯ ಪಾತ್ರ ಮಾಡಲು ಕೋರಿಕೊಂಡಾಗ ರಾಮಚಂದ್ರ ಚಿಟ್ಟಾಣಿಯವರ ಮೇಲಿನ ಗೌರವದಿಂದ ಪಾತ್ರ ಮಾಡಲು ಒಪ್ಪಿಕೊಂಡರಂತೆ. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಪಾತ್ರ ಮಾಡಲು ಒಪ್ಪಿಕೊಂಡೆ ಎಂದಿದ್ದಾರೆ.