Home Entertainment Entertainment Sandalwood: ‘ಚೈತ್ರದ ಪ್ರೇಮಾಂಜಲಿ’ ನಟಿ ಶ್ವೇತಾ ಜೀವನ ದುರಂತಮಯವಾಗಲು ಇದೇ ಕಾರಣ!

Entertainment Sandalwood: ‘ಚೈತ್ರದ ಪ್ರೇಮಾಂಜಲಿ’ ನಟಿ ಶ್ವೇತಾ ಜೀವನ ದುರಂತಮಯವಾಗಲು ಇದೇ ಕಾರಣ!

Entertainment Sandalwood

Hindu neighbor gifts plot of land

Hindu neighbour gifts land to Muslim journalist

Entertainment Sandalwood: ಚೆಂದುಳ್ಳಿ ಚೆಲುವೆಯಾಗಿರುವ ಶ್ವೇತಾ ಕನ್ನಡದ ಹಲವಾರು ಸಿನಿಮಾಗಳಲ್ಲಿ (Entertainment Sandalwood) ನಟಿಸಿದ್ದಾರೆ. 1992ರಲ್ಲಿ ತೆರೆಗೆ ಬಂದ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ನಟ ರಘುವೀರ್ ಜೋಡಿಯಾಗಿ ನಟಿಸಿದ್ದ ನಟಿ ಶ್ವೇತಾ ಎಂದರೆ ಸಾಕು, ಚೈತ್ರದ ಪ್ರೇಮಾಂಜಲಿಯ ಮಧುರವಾದ ಹಾಡುಗಳು ನೆನಪಿಗೆ ಬರುತ್ತವೆ. ಬಳಿಕ ಶ್ವೇತಾ ಕರ್ಪೂರದ ಗೊಂಬೆ, ಮಿನುಗು ತಾರೆ, ನಮ್ಮ ಸಂಸಾರ ಆನಂದ ಸಾಗರ ಮುಂತಾದ ಸಿನಿಮಾಗಳಲ್ಲಿ ನಟಿ ಶ್ವೇತಾ ನಟಿಸಿದ್ದಾರೆ. ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಕೂಡ ನಟಿ ಶ್ವೇತಾ ನಟಿಸಿ ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ: Pune Porsche Accident Case: ಪುಣೆ ಅಪಘಾತ ಪ್ರಕರಣ; ಇಬ್ಬರ ಕೊಂದ ಅಪ್ರಾಪ್ತ ಆರೋಪಿಯ ರಕ್ತದ ಮಾದರಿಯನ್ನು ಬದಲಾಯಿಸಿ, ತನ್ನ ರಕ್ತದ ಮಾದರಿ ನೀಡಿದ ತಾಯಿ ಅರೆಸ್ಟ್‌

ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ಸಮಯದಲ್ಲೇ ಶ್ರೀಧರ್ ಹೆಸರಿನ ಖ್ಯಾತ ವ್ಯಕ್ತಿಯೊಂದಿಗೆ ಲವ್‌ನಲ್ಲಿ ಬಿದ್ದು ಮದುವೆ ಕೂಡ ಮಾಡಿಕೊಂಡಿದ್ದಾರೆ. ಬಳಿಕ, ಶ್ರೀಧರ್-ಶ್ವೇತಾ ದಾಂಪತ್ಯದ ಕೊಡುಗೆಯಾಗಿ ಪುಟ್ಟದೊಂದು ಮಗು. ಹೀಗಾಗಿ ನಟಿ ಶ್ವೇತಾ ಸಿನಿಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಖುಷಿಯಾಗಿ ಇದ್ದ ಶ್ವೇತಾ ಇದೀಗ ತಮ್ಮ ಸಂಸಾರದ ನಿರ್ವಹಣೆಯ ಜವಾಬ್ದಾರಿ ಹೊತ್ತು ಜೀವನ ನಡೆಸುತ್ತಿದ್ದಾರೆ. ಹೌದು, ಇಂದು ಜೀವನ ಹಳೆಯ ಒಳ್ಳೆಯ ಜೀವನವಾಗಿ ಉಳಿದಿಲ್ಲ, ಬದಲಿಗೆ ದುರಂತಮಯವಾಗಿದೆ. ಅಂತಹ ಘೋರ ಘಟನೆ ಒಂದು ಶ್ರೀಧರ್ ಹಾಗು ಶ್ವೇತಾ ಜೀವನದಲ್ಲಿ ನಡೆದುಹೋಗಿದೆ.

ಇದನ್ನೂ ಓದಿ: Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಮತ್ತೊಂದು ಸಂಚು ಬಯಲು; ನಾಲ್ವರ ಬಂಧನ

ಹೆಲ್ಮೆಟ್ ಹಾಕಿಕೊಳ್ಳದೇ ಗಾಡಿ ಓಡಿಸುತ್ತಿದ್ದ ಶ್ರೀಧರ್ ಅವರಿಗೆ ಅಪಘಾತವಾಗಿ ಬಲವಾದ ಪೆಟ್ಟು ಬಿದ್ದು, ಎರಡೂ ಕಾಲುಗಳ ಸ್ವಾಧಿನ ಕಳೆದುಕೊಂಡಿದ್ದಾರೆ. ಇವತ್ತಿಗೂ ಶ್ವೇತಾ ಪತಿ ಶ್ರೀಧರ್ ವೀಲ್‌ ಚೇರ್‌ನಲ್ಲಿಯೇ ಓಡಾಡಬೇಕಿದೆ. ಸಂಸಾರದ ಸಮಸ್ಯೆ ಶ್ವೇತಾ ಹೆಗಲೇರಿದೆ. ಹೀಗಾಗಿ ತಮಿಳಿನ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಶ್ವೇತಾ.