Home Entertainment Neelima Rani: ಟಾಪ್ ಲೆಸ್ ಆಗಿ ನಟಿಸುವ ಕುರಿತು ನಟಿ ಕೊಟ್ಲು ಬೋಲ್ಡ್ ಉತ್ತರ! ನಟಿ...

Neelima Rani: ಟಾಪ್ ಲೆಸ್ ಆಗಿ ನಟಿಸುವ ಕುರಿತು ನಟಿ ಕೊಟ್ಲು ಬೋಲ್ಡ್ ಉತ್ತರ! ನಟಿ ನೀಲಿಮಾ ಉತ್ತರ ಕೇಳಿ ಹುಬ್ಬೇರಿಸಿದ ನೆಟಿಜನ್ಸ್!

Hindu neighbor gifts plot of land

Hindu neighbour gifts land to Muslim journalist

Neelima Rani: ತಮಿಳು ಮನರಂಜನಾ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ನಟಿ ನೀಲಿಮಾ ರಾಣಿ(Neelima Rani) ಸಿನಿಮಾಗಳಿಗಿಂತ ಹೆಚ್ಚಾಗಿ ಧಾರಾವಾಹಿಗಳಲ್ಲಿ ನಟಿಸಿ ಜನ ಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಸಿನಿಮಾ ಹೊರತುಪಡಿಸಿ ನೀಲಿಮಾ ಅವರು ಸಾಮಾಜಿಕ ಜಾಲತಾಣದಲ್ಲಿ (Social Media)ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ನಿಲಿಮಾ ಅಭಿಮಾನಿಗಳ ಜೊತೆ ಆಗಾಗ ಸಂವಾದ ಮಾಡುವುದುಂಟು!.

ಈ ಹಿಂದೆ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ(Instagram Page)ಪ್ರಶೋತ್ತರ ಸೆಷನ್ಸ್ ನಡೆದ ಸಂದರ್ಭ ನೆಟ್ಟಿಗನೊಬ್ಬ ನೀವು ಧರಿಸುವ ಒಳಉಡುಪಿನ ಸೈಜ್ ಎಷ್ಟು? ಎಂದು ಪ್ರಶ್ನೆ ಕೇಳಿದ್ದ. ಇದಕ್ಕೆ ಖಡಕ್ ಉತ್ತರ ನೀಡಿದ್ದ ನೀಲಿಮಾ (Neelima Rani)ನಾನೇಕೆ ಅದನ್ನು ನಿನಗೆ ಹೇಳಬೇಕು? ನೀನೇನು ಮಾರಾಟ ಮಾಡುತ್ತೀದ್ದೀಯಾ? ಎಂದಿದ್ದರು. ಇದೀಗ, ಸಂದರ್ಶನವೊಂದರಲ್ಲಿ ಟಾಪ್ ಲೆಸ್(Topless)ಕುರಿತಂತೆ ನೀಲಿಮಾ ಅವರು ಕೊಟ್ಟ ಬೋಲ್ಡ್ ಉತ್ತರ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ.

ಇತ್ತೀಚೆಗೆ ರಾಘವ ಲಾರೆನ್ಸ್ ಅಭಿನಯದ ರುದ್ರನ್ ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಈ ಚಿತ್ರದ ಅನುಭವದ ಕುರಿತಂತೆ ಮಾಧ್ಯಮದಲ್ಲಿ ಸಂದರ್ಶನ ನೀಡಿದ್ದಾರೆ. ಈ ಸಂದರ್ಭ ನೀಲಿಮಾ ಅವರು ಸಾಮಾಜಿಕ ಜಾಲತಾಣದಲ್ಲಿ(Social Media)ವೈರಲ್ ಆಗಿದ್ದು, ನಟಿಯರ ಅರೆಬೆತ್ತಲೆ ನಟನೆಯ ಕುರಿತಂತೆ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ. ಸಿನಿಮಾಗಳಲ್ಲಿ ಟಾಪ್ಲೆಸ್ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ನೀಲಿಮಾ ಅವರನ್ನು ಸಂದರ್ಶನದಲ್ಲಿ ಪ್ರಶ್ನಿಸಲಾಗಿದೆ.

ನಟಿ ನೀಲಿಮಾ ಅವರು ಈ ಬಗ್ಗೆ ಉತ್ತರ ನೀಡಿದ್ದು, ನಿಜವಾಗಿ ಟಾಪ್ಲೇಸ್ ಆಗಿ ನಟಿಸುತ್ತಿರುವುದು ದೊಡ್ಡ ವಿಷಯವೆಂದು ಅನಿಸುವುದಿಲ್ಲ. ತಾನು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು, ಎಷ್ಟೋ ನಟಿಯರು ಇಂತಹ ದೃಶ್ಯಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೇನು ದೊಡ್ಡ ವಿಷಯ ಎಂದು ನನಗೆ ಅನಿಸುವುದಿಲ್ಲ ಎಂದು ಉತ್ತರ ನೀಡಿದ್ದಾರೆ. ನಟಿಯ ಈ ಉತ್ತರ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.