Home Entertainment Actor Kishore: ರಾಮಮಂದಿರ ಉದ್ಘಾಟನೆ; ಉಳ್ಳವರು ಶಿವಾಲಯ ಮಾಡುವರು ಎಂದ ನಟ ಕಿಶೋರ್‌; ಜನರು ನೀಡಿದ...

Actor Kishore: ರಾಮಮಂದಿರ ಉದ್ಘಾಟನೆ; ಉಳ್ಳವರು ಶಿವಾಲಯ ಮಾಡುವರು ಎಂದ ನಟ ಕಿಶೋರ್‌; ಜನರು ನೀಡಿದ ಉತ್ತರವೇನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

Actor Kishore: ಇಡೀ ದೇಶದ ಜನತೆ ಎದುರು ನೋಡುತ್ತಿದ್ದ ರಾಮ ಮಂದಿರದ (Ram Mandir) ಕನಸು ನನಸಾಗಿದೆ. ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ಇದರ ನಡುವೆ ಇದೀಗ ನಟ ಕಿಶೋರ್‌ (Actor Kishore)ಅವರ ಪೋಸ್ಟ್‌ ವೈರಲ್‌ ಆಗಿದೆ.

ಪ್ರಾಣ ಪ್ರತಿಷ್ಠಾಪನೆ ದಿನವೇ ಇದೀಗ ನಟ ಕಿಶೋರ್ ಅವರು ಬಸವಣ್ಣ ಅವರ ವಚನವನ್ನು ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನಟ ಕಿಶೋರ್‌ ಅವರು, ಸೋಷಿಯಲ್‌ ಮೀಡಿಯಾದಲ್ಲಿ
ʻʻಉಳ್ಳವರು ಶಿವಾಲಯವ ಮಾಡುವರು !
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!ʼʼ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಇಂಗ್ಲೀಷ್‌ನಲ್ಲಿಯೂ ಭಾಷಾಂತರ ಕೂಡ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ನಟನ ವಿರುದ್ಧ ಕಿಡಿ ಕಾರಿದ್ದಾರೆ. ʻʻನಿಮ್ಮ ನಾಸ್ತಿಕವಾದ ನಿಮ್ಮ ಇಚ್ಛೆ. ಈ ನಾಸ್ತಿಕವಾದವನ್ನು ಇತರ ಧರ್ಮದ ಪ್ರಾರ್ಥನಾ ಕೇಂದ್ರಗಳ ಉದ್ಘಾಟನೆ ದಿನ ಬಳಕೆ ಮಾಡಿ. ಈ ಮೂಲಕ ನಿಮ್ಮ ಮೆದುಳಿಗೂ ಸ್ವಲ್ಪ ವಿಶ್ರಾಂತಿ ನೀಡಿ ಬೇಗ ಹುಚ್ಚರಾಗ್ತಿರʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.