Home Entertainment Divorce: ಹಾರ್ದಿಕ್​-ನತಾಶಾ ಡಿವೋರ್ಸ್ ಬಳಿಕ, ಈ ಸ್ಟಾರ್ ಜೋಡಿ ಡಿವೋರ್ಸ್?

Divorce: ಹಾರ್ದಿಕ್​-ನತಾಶಾ ಡಿವೋರ್ಸ್ ಬಳಿಕ, ಈ ಸ್ಟಾರ್ ಜೋಡಿ ಡಿವೋರ್ಸ್?

Divorce

Hindu neighbor gifts plot of land

Hindu neighbour gifts land to Muslim journalist

Divorce: ಸಂಸಾರ ಎಂಬ ದೋಣಿಯಲ್ಲಿ ಬಡವ ಶ್ರೀಮಂತ ಎಂಬ ಬೇಧ ಭಾವ ಇಲ್ಲ. ಹೊಂದಾಣಿಕೆ ಇಲ್ಲದೆ ಇದ್ದರೆ ಸಂಸಾರ ನಡೆಯಲು ಅಸಾಧ್ಯ. ಅಂತೆಯೇ ಸ್ಟಾರ್ ಜೋಡಿಗಳು ಎಷ್ಟೇ ಹೆಸರು ಮಾಡಿದ್ದರು, ಹಣ ಆಸ್ತಿ ಇದ್ದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಸೋತಿರುವ ನಿದರ್ಶನಗಳು ಎಷ್ಟೋ ಇವೆ. ಅದೇ ರೀತಿ ಈಗಾಗಲೇ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ವಿಚ್ಛೇದನ (Divorce) ವಿಚಾರ ಘೋಷಣೆ ಮಾಡಿದ್ದಾರೆ. ಹೌದು, ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್  ನಾಲ್ಕು ವರ್ಷಗಳ ಬಳಿಕ ಇಬ್ಬರೂ ವಿಚ್ಛೇದನ ಪಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಇನ್ನೂ ರಿವೀಲ್ ಆಗಿಲ್ಲ. ಹೀಗಿರುವಾಗಲೇ ಮತ್ತೊಂದು ಸ್ಟಾರ್ ಜೋಡಿ ವಿಚ್ಛೇದನ ಪಡೆದುಕೊಳ್ಳಲು ರೆಡಿ ಆಗಿದ್ದಾರೆ ಎಂದು ಸುದ್ದಿ ಆಗಿದೆ.ಅವರು ಬೇರಾರೂ ಅಲ್ಲ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ.

ಹೌದು, ಮದುವೆ ಆಗಿ ಹಲವು ವರ್ಷಗಳ ಕಾಲ ಸಂಸಾರ ನಡೆಸಿರುವ ಅಭಿಷೇಕ್ ಹಾಗೂ ಐಶ್ವರ್ಯಾ ಈಗ ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಈ ಪ್ರಶ್ನೆ ಕಾಡಲು ಮುಖ್ಯ ಕಾರಣ, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಪ್ರತ್ಯೇಕವಾಗಿ ಅನಂತ್​ ಅಂಬಾನಿ ಮದುವೆಗೆ ಬಂದಿದ್ದಾರೆ. ಹಾಗಾಗಿ ಬಚ್ಚನ್ ಅವರ ಕುಟುಂಬದಲ್ಲಿ ಐಶ್ವರ್ಯಾ ರೈಗೆ ಸ್ಥಾನ ಇದ್ದಂತಿಲ್ಲ ಅನಿಸುತ್ತದೆ. ಯಾಕೆಂದರೆ ಅಂಬಾನಿ ಮದುವೆಗೆ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಇತರೆ ಕುಟುಂಬ ಸದಸ್ಯರು ಒಟ್ಟಿಗೆ ಆಗಮಿಸಿದ್ದರು. ಆದರೆ ಐಶ್ವರ್ಯಾ ಹಾಗೂ ಅವರ ಪುತ್ರಿ ಆರಾಧ್ಯ ಮಾತ್ರ ಪ್ರತ್ಯೇಕವಾಗಿ ಮದುವೆಗೆ ಬಂದಿದ್ದರು.

ಸೆಲೆಬ್ರಿಟಿ ಜೋಡಿ ಎಂದಾಗ ಸಾಮಾನ್ಯವಾಗಿ ಒಟ್ಟಾಗಿ ಬರುತ್ತಾರೆ. ಕುಟುಂಬದ ಜೊತೆ ಒಟ್ಟಾಗಿ ಬಂದು ಪೋಸ್ ಕೊಡುತ್ತಾರೆ. ಅದರಲ್ಲೂ ಅಂಬಾನಿ ಮನೆಯ ಮದುವೆ ಎಂದಾಗ ಎಲ್ಲರೂ ಒಟ್ಟಾಗಿ ಬರೋಕೆ ಇಷ್ಟಪಡುತ್ತಾರೆ. ಆದರೆ, ಇಲ್ಲಿ ಆ ರೀತಿ ಆಗಿಲ್ಲ. ಇನ್ನು ಕೆಲವು ಸಮಯದಿಂದ ಅಭಿಷೇಕ್ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಿಯೇ ಉಳಿದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಅನಂತ್ ಅಂಬಾನಿ ಮದುವೆ ಬಳಿಕ ಐಶ್ವರ್ಯಾ ಅವರು ಮಗಳು ಆರಾಧ್ಯಾ ಜೊತೆ ವಿದೇಶಕ್ಕೆ ಹಾರಿದ್ದಾರೆ. ಇನ್ನು ಇತ್ತ ಅಭಿಷೇಕ್ ಅವರು ‘ವಿಚ್ಛೇದನ ಯಾರಿಗೂ ಸುಲಭ ಅಲ್ಲ’ ಎಂಬ ಪೋಸ್ಟ್​ನ ಲೈಕ್ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ವಿಚ್ಛೇದನ ವಿಚಾರ ಬಹುತೇಕ ಖಚಿತವಾಗಿದೆ ಎಂದೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಬಚ್ಚನ್ ಕುಟುಂಬ ಯಾವುದೇ ಸ್ಪಷ್ಟನೆ ನೀಡಿಲ್ಲ.

Actor Ramkrishna: ಮನೆ ಕೆಲಸದವಳನ್ನೇ ಪ್ರೀತಿಸಿ ಮದುವೆಯಾದ ಹಿರಿಯ ನಟ ಇವರೇ ನೋಡಿ! ಇವರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ