

Chaitra Kundapura: ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯ್ತಿ ಶುರುವಾಗಿದೆಎಂ ಬಿಗ್‌ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್ (Kiccha Sudeep) ವಾರವಿಡೀ ನಡೆದ ಅನೇಕ ವಿಚಾರಗಳ ಬಗ್ಗೆ ಮಾತನಾಡಲು ಶುರುಮಾಡಿದ್ದಾರೆ. ಈ ವೇಳೆ ಚೈತ್ರ ಕುಂದಾಪುರ ಅವರಿಗೆ ಕಿಚ್ಚ ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಚೈತ್ರಾ ಕುಂದಾಪುರ(Chaitra Kundapura) ತಾನು ಮನೆಯಿಂದ ಹೊರಬರುವುದಾಗಿ ಹೇಳಿದ್ದಾರೆ. ಈ ಕುರಿತಾದ ಪ್ರೊಮೊ ಸಕತ್ ವೈರಲ್ ಆಗಿದೆ.
ಯಸ್, ಚೈತ್ರಾ ಕುಂದಾಪುರ ಅವರು ಈ ವಾರ ಅತೀ ಹೆಚ್ಚು ಸುದ್ದಿಯಲ್ಲಿದ್ದರು. ಜೋಡಿ ಟಾಸ್ಕ್‌ನಲ್ಲಿ ಚೈತ್ರಾ ಅವರು ಶಿಶಿರ್ ಅವರ ಜತೆ ಬಿಟ್ಟು ತ್ರಿವಿಕ್ರಮ್ ಜತೆ ಆಡುತ್ತೇನೆ ಎಂದಿದ್ದರು. ಇದು ಚೈತ್ರಾ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವೆಂದು ಅನೇಕರು ವಾದಿಸಿದ್ದರು. ಇದಲ್ಲದೆ ಅವರು ತಲೆ ತಿರುಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಯಲ್ಲೊ ಚಿಕಿತ್ಸೆ ಪಡೆಯುವ ವೇಳೆ ಅವರು ಅಲ್ಲಿನ ಸಿಬ್ಬಂದಿಗಳ ಬಗ್ಗೆ ಬಿಗ್ ಬಾಸ್ ಆಟದ ಬಗ್ಗೆ ಕೇಳಿದ್ದಾರೆ. ಇದು ಕಿಚ್ಚ ಅವರನ್ನು ಗರಂ ಆಗುವಂತೆ ಮಾಡಿದೆ.
ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ(Kiccha Sudeep) ಅವರು ಚೈತ್ರಾ ಬಗ್ಗೆ ಮಾತನಾಡುತ್ತಾ, ನೀವು ಅನಾರೋಗ್ಯದ ಕಾರಣ ಮನೆ ಬಿಟ್ಟು ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ. ಬೆಳಗ್ಗೆ ವಾಪಸ್ ಬಿಗ್ ಬಾಸ್ ಮನೆಗೆ ಬಂದು ಯಾರಾರ ಬಗ್ಗೆ ಏನೇನು ಒಪೀನಿಯನ್ ಇದೆ ಎಂದು ಸ್ಪರ್ಧಿಗಳಿಗೆ ಹೇಳುವುದರ ಉದ್ದೇಶ ಏನು? ಎಂದು ಕೇಳಿದ್ದಾರೆ.
ಆಗ ಇದಕ್ಕೆ ತಪ್ಪೊಪ್ಪಿಕೊಳ್ಳದೇ ಪುನಃ ವಾದವನ್ನು ಮಾಡಿದ ಚೈತ್ರಾ ಕುಂದಾಪುರ, ನಾನೇ ಡಾಕ್ಟರ್ ಹತ್ತಿರ ಸ್ವಲ್ಪ ಕೇಳಿದ್ದೆ. ಅಲ್ಲಿದ್ದ ನರ್ಸ್ ಹೀಗೆ ವಿಚಾರಿಸಿದಾಗ ಅಲ್ಲಿ ಹೊರಗಿರುವವರ ಅಭಿಪ್ರಾಯ ಏನಿದೆ ಎಂದು ಹೇಳಿದ್ದಾರೆ. ಅದನ್ನೇ ಮನೆಯಲ್ಲಿ ಹೇಳಿದ್ದು, ಇದರಲ್ಲಿ ಯಾವುದೇ ನನ್ನ ಒಪೀನಿಯನ್ ಮಿಶ್ರಣ ಮಾಡಿ ಹೇಳಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ ಇದರಿಂದ ತೀವ್ರ ಕೋಪಗೊಂಡ ಕಿಚ್ಚ ಸುದೀಪ್ ಅವರು ಅಲ್ಲಿ ನಿಮಗೆ ಕಥೆ ಹೇಳಿದ್ರಾ ಡಾಕ್ಟರ್ ಎಂದು ಸಿನಿಮಾ ಸ್ಟೈಲ್‌ನಲ್ಲಿ ಶ್…., ಎಂದು ಕಣ್ಣು ಬಿಟ್ಟು ನೋಡುತ್ತಾರೆ.
ಇದಕ್ಕೆ ಬೆಚ್ಚಿದ ಚೈತ್ರಾ ಅವರು ಬಿಗ್ ಬಾಸ್ ಮನೆಯ ಕ್ಯಾಮರಾದ ಮುಂದೆ ಹೋಗಿ ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣ ಇಲ್ಲಿ ಇರುವುದರಿಂದ ಮನೆಗೆ ಹೋಗಬೇಕಂತ ನಾನು ನಿರ್ಧಾರ ಮಾಡಿದ್ದೀನಿ ಬಿಗ್ ಬಾಸ್ ಎಂದು ಕಣ್ಣೀರು ಹಾಕಿದ್ದಾರೆ. ಆದರೆ ಚೈತ್ರಾ ಕುಂದಾಪುರ ಮನೆಯಿಂದ ಹೊರಬರುತ್ತಾರಾ? ಇಲ್ಲಾ ಅಲ್ಲೇ ಉಳಿಯುತ್ತಾರ? ಎಂಬುದು ಕಿಚ್ಚನ ಪಂಚಾಯ್ತಿ ಮುಗಿದ ಬಳಿಕ ತಿಳಿಯಲಿದೆ.
https://x.com/ColorsKannada/status/1857763549616967945?t=zFaLGQRe_Y0eoXvmgP6Asg&s=19













