Home Entertainment Bigg Boss: ಅಂತೂ ಇಂತೂ ಕಿಚ್ಚನ ಆಕ್ರೋಶಕ್ಕೆ ಮಣಿದ ಬಿಗ್ ಬಾಸ್- ನಿರ್ಧಾರ ಬದಲಿಸ್ತಾರಾ ಸುದೀಪ್?!...

Bigg Boss: ಅಂತೂ ಇಂತೂ ಕಿಚ್ಚನ ಆಕ್ರೋಶಕ್ಕೆ ಮಣಿದ ಬಿಗ್ ಬಾಸ್- ನಿರ್ಧಾರ ಬದಲಿಸ್ತಾರಾ ಸುದೀಪ್?! ರೂಪೇಶ್ ರಾಜಣ್ಣ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Bigg Boss: ಸುಮಾರು 10 ವರ್ಷಗಳ ಕಾಲ ಬಿಗ್ ಬಾಸ್(Bigg Boss) ಶೋನ ನಿರೂಪಕರಾಗಿ ಅಭಿಮಾನಿಗಳ, ವೀಕ್ಷಕರ ಮನ ಗೆದ್ದಿರುವ ಕಿಚ್ಚ ಸುದೀಪ್(Kiccha Sudeep) ಇದೀಗ ಮುಂದಿನ ಸೀಸನ್ ಮೂಲಕ ಬಿಗ್ ಬಾಸ್ ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಬಲವಾದ ಕಾರಣವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಿಚ್ಚನಿಗೆ ತುಂಬಾ ಅವಮಾನ ಆದ ಕಾರಣದಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಬೆನ್ನಲ್ಲೇ ಬಿಗ್ ಬಾಸ್(Bigg Boss) ಕಿಚ್ಚ ಆಕ್ರೋಶಕ್ಕೆ ಮಣಿದು ತಪ್ಪುಗಳ ತಿದ್ದುಪಡಿಗೆ ಮುಂದಾಗಿದೆ ಎನ್ನಲಾಗಿದೆ.

ಹೌದು, ಆಪ್ತ ಮೂಲಗಳ ಪ್ರಕಾರ, ಬಿಗ್ ಬಾಸ್ ಶೋನಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳ ಬಗ್ಗೆ ಸುದೀಪ್ ಗೆ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾಡಿದ ಟ್ವೀಟ್ ಕೂಡ ಇಂಬು ನೀಡಿತ್ತು. ಆದರೀಗ ಅದೇ ರೂಪೇಶ್ ರಾಜಣ್ಣನ ಮತ್ತೊಂದು ಟ್ವೀಟ್ ಬಿಗ್ ಬಾಸ್ ಕಿಚ್ಚನ ಆಕ್ರೋಶಕ್ಕೆ ಮಣಿದಿದೆ ಎಂದು ಹೇಳಿದೆ.

ಯಸ್, ನಿನ್ನೆ ದಿನ ರೂಪೇಶ್​ ರಾಜಣ್ಣ ಬಿಗ್​ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೇ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್​ ಬಿಗ್​ಬಾಸ್ ನಿರೂಪಣೆ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಏ ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್​ಬಾಸ್ ಬಿಡಿ ಇಲ್ಲ ಬಿಗ್​ಬಾಸ್ ನಿಲ್ಲಿಸಬೇಕಾಗುತ್ತದೆ. ಅಸಲಿ ವಿಷಯವನ್ನು ನಾಳೆ ಮಾತಾಡ್ತೀನಿ ಎಂದು ರೂಪೇಶ್​ ರಾಜಣ್ಣ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು.

ಆದರೆ ಇಂದು ಇದೀಗ ಮತ್ತೊಂದು ಟ್ವೀಟ್​ ಮಾಡಿರುವ ರೂಪೇಶ್​ ರಾಜಣ್ಣ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಗ್​ಬಾಸ್ ಆಯೋಜಕರು ಒಪ್ಪಿದ್ದಾರೆ. ಅವರಿಗೆ ಧನ್ಯವಾದಗಳು. ಕನ್ನಡದ ಪರವಾಗಿ ನಿಂತ ಸುದೀಪ್​ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ. ಬದಲಾವಣೆ ನೀವೇ ನೋಡುವಿರಿ. ಜೈ ಕರ್ನಾಟಕ ಎಂದು ರೂಪೇಶ್ ರಾಜಣ್ಣ ಟ್ವೀಟ್​ ಮಾಡಿದ್ದಾರೆ. ಕಿಚ್ಚ ಸುದೀಪ್​ ಆಕ್ರೋಶಕ್ಕೆ ಮಣಿದು ಆಯೋಜಕರು ತಪ್ಪು ಸರಿ ಮಾಡಿಕೊಳ್ಳಲು ಒಪ್ಪಿದಂತೆ ಕಾಣುತ್ತಿದೆ.