Home Entertainment Bigg Boss Kannada OTT ಯ ಕೊನೆಯ ಕ್ಯಾಪ್ಟನ್ ಆಗಿ ಮಿಂಚಿ, ರಾರಾಜಿಸಿದ ಕುಡ್ಲದ ನಟ...

Bigg Boss Kannada OTT ಯ ಕೊನೆಯ ಕ್ಯಾಪ್ಟನ್ ಆಗಿ ಮಿಂಚಿ, ರಾರಾಜಿಸಿದ ಕುಡ್ಲದ ನಟ ರೂಪೇಶ್ ಶೆಟ್ಟಿ

Hindu neighbor gifts plot of land

Hindu neighbour gifts land to Muslim journalist

‘ಬಿಗ್ ಬಾಸ್ ಒಟಿಟಿ’ (Bigg Boss OTT) ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಹಾಗಾಗಿ ಮುಂದಿನ ವಾರದ ನಾಮಿನೇಷನ್ ನಿಂದ ಬಚಾವ್ ಆಗಿದ್ದಾರೆ. ಈ ಮೂಲಕ ‘ಬಿಗ್ ಬಾಸ್ ಒಟಿಟಿ’ಯ ಕೊನೆಯ ವಾರದವರೆಗೆ ಅವರು ಇರೋದು ಖಚಿತವಾಗಿದೆ. ಇನ್ನು ಎರಡು ವಾರ ಮಾತ್ರ ಬಿಗ್ ಬಾಸ್ ಇದೆ. ಕೊನೆಯ ವಾರ ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಇರುವುದಿಲ್ಲ. ಆಗ ಯಾವುದೇ ಟಾಸ್ಕ್‌ ಇರುವುದಿಲ್ಲ. ಹಾಗಾಗಿ ರೂಪೇಶ್ ಒಟಿಟಿ ಮೊದಲ ಸೀಸನ್‌ನ ಕೊನೆಯ ಕ್ಯಾಪ್ಟನ್ ಆಗಿದ್ದಾರೆ.

ಒಟಿಟಿಯಲ್ಲಿ ‘ಕನ್ನಡ ಬಿಗ್ ಬಾಸ್’ ಪ್ರಸಾರ ಕಂಡಿದ್ದು ಇದೇ ಮೊದಲಾದರೂ, ಜನಮನ ಸೂರೆಗೊಂಡಿದೆ‌ ಒಟಿಟಿ ವ್ಯಾಪ್ತಿ ಹೆಚ್ಚುತ್ತಿರುವ ಕಾರಣ, ಬಿಗ್ ಬಾಸನ್ನು ಕೂಡಾ ತರಲಾಗಿದೆ. ಈಗಾಗಲೇ ಒಂದು ತಿಂಗಳ ಕಾಲ ‘ಬಿಗ್ ಬಾಸ್’ ಒಟಿಟಿ ಪ್ರಸಾರ ಕಂಡಿದೆ. ಇನ್ನು ಎರಡು ವಾರಗಳ ಕಾಲ ಬಿಗ್ ಬಾಸ್ ನಡೆಯಲಿದೆ. ಈಗ ಬಿಗ್ ಬಾಸ್ ಒಟಿಟಿಯ ಕೊನೆಯ ಕ್ಯಾಪ್ಟನ್ ಆಯ್ಕೆ ನಡೆದಿದ್ದು, ರೂಪೇಶ್ (Roopesh Shetty) ನಾಯಕನಾಗಿ ಆಯ್ಕೆಯಾಗಿದ್ದಾರೆ.

‘ಬಿಗ್ ಬಾಸ್’ನಲ್ಲಿ ಕ್ಯಾಪ್ಟನ್ ಪಟ್ಟ ಸಿಗೋಕೆ ನಿಜಕ್ಕೂ ತುಂಬಾ ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಯಾರೆಲ್ಲ ಕ್ಯಾಪ್ಟನ್ ಆಟಕ್ಕೆ ಸೆಲೆಕ್ಟ್ ಆಗುತ್ತಾರೋ ಅವರೆಲ್ಲ ಕಷ್ಟಪಟ್ಟು ಆಡ್ತಾರೆ. ಹಾಗೂ ಇದು ತುಂಬಾನೇ ಪ್ರಮುಖ ಕೂಡಾ. ಇದಕ್ಕೆ ಕಾರಣ ಇಮ್ಯುನಿಟಿ. ಕ್ಯಾಪ್ಟನ್ ಆದವರನ್ನು ನಾಮಿನೇಷನ್ ಮಾಡುವಂತಿಲ್ಲ. ಹೀಗಾಗಿ, ಒಂದು ವಾರಗಳ ಕಾಲ ಅವರು ಮನೆಯಲ್ಲಿ ಸೇಫ್ ಆಗಿ ಉಳಿಯಬಹುದು. ಈಗ ರೂಪೇಶ್ ಅವರು ಕ್ಯಾಪ್ಟನ್ ಆಗುವ ಮೂಲಕ ಮುಂದಿನ ವಾರದ ನಾಮಿನೇಷ್‌ನಿಂದ ಬಚಾವ್ ಆಗಿದ್ದಾರೆ. ಈ ಮೂಲಕ ‘ಬಿಗ್ ಬಾಸ್ ಒಟಿಟಿ’ಯ ಕೊನೆಯ ವಾರದವರೆಗೆ ಅವರು ಇರೋದು ಖಚಿತವಾಗಿದೆ.

ಇನ್ನು, ಬಿಗ್ ಬಾಸ್ ಒಟಿಟಿ ಯಲ್ಲಿ ಮಹಿಳಾ ಸ್ಪರ್ಧಿಗಳು ಕ್ಯಾಪ್ಟನ್ ಆಗಲು ಶತಪ್ರಯತ್ನ ಪಟ್ಟಿದ್ದರೂ, ಕ್ಯಾಪ್ಟನ್ ಆಗಲೇ ಇಲ್ಲ. ಮೊದಲ ವಾರ ಅರ್ಜುನ್ ರಮೇಶ್ , ಎರಡನೇ ವಾರ ಜಶ್ವಂತ್ , ಮೂರನೇ ವಾರಕ್ಕೆ ಸೋಮಣ್ಣ, ನಾಲ್ಕನೇ ವಾರದ ಮಧ್ಯದಲ್ಲಿ ರೂಪೇಶ್ ಕ್ಯಾಪ್ಟನ್ ಆಗಿದ್ದಾರೆ. ಇದು ಒಟಿಟಿಯ ಕೊನೆಯ ಕ್ಯಾಪ್ಟನ್ ಆದ್ದರಿಂದ ಮಹಿಳಾ ಸ್ಪರ್ಧಿಗಳಿಗೆ ಈ ಸೀಸನ್‌ನಲ್ಲಿ ಕ್ಯಾಪ್ಟನ್ ಆಗುವ ಅವಕಾಶವೇ ಸಿಗಲಿಲ್ಲ.