Home Entertainment Tanisha: ವರ್ತೂರು ಸಂತೋಷ್ ಜೊತೆ ಮದುವೆ !! ಬಿಗ್ ಅಪ್ಡೇಟ್ ನೀಡಿದ ತನಿಷಾ

Tanisha: ವರ್ತೂರು ಸಂತೋಷ್ ಜೊತೆ ಮದುವೆ !! ಬಿಗ್ ಅಪ್ಡೇಟ್ ನೀಡಿದ ತನಿಷಾ

Hindu neighbor gifts plot of land

Hindu neighbour gifts land to Muslim journalist

Tanisha : ಬಿಗ್ ಬಾಸ್ ಕನ್ನಡ ಸೀಸನ್ 10ರ ಆಟ ಮುಗಿದಿದ್ದು ಇದೀಗ ಇದರ ವಿಜೇತರು ಹಾಗೂ ಸ್ಪರ್ಧಿಗಳು ತಮ್ಮ ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದಾರೆ. ಸಂದರ್ಶನದಲ್ಲಿಯೂ ಭಾಗಿಯಾಗಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ತನಿಷ(Tanisha) ಅವರು ಸಂದರ್ಶನದಲ್ಲಿ ಭಾಗವಹಿಸಿದ್ದು, ವರ್ತೂರು ಸಂತೋಷ್ ಜೊತೆ ತಮ್ಮ ಮದುವೆ ವಿಚಾರವಾಗಿ ಮಾತನಾಡಿದ್ದಾರೆ.

ಹೌದು, ಖಾಸಗೀ ವಾಹಿನಿಯೊಂದರಲ್ಲಿ ಸಂದರ್ಶನಕ್ಕೆ ತೆರಳಿದ್ದ ಬಿಗ್ ಬಾಸ್(Bigg boss) ಸ್ಪರ್ಧಿ ತನಿಷಾ ಅವರಿಗೆ ಸಾಮಾನ್ಯ ಎಂಬಂತೆ ವರ್ತೂರು ಸಂತೋಷ್ ಜೊತೆಗಿನ ಬಾಂಧವ್ಯ, ಸ್ನೇಹ ಸಂಬಂಧದ ಕುರಿತು ಪ್ರಶ್ನೆಗಳು ಎದುರಾಗಿವೆ. ಈ ವೇಳೆ ಮಾತನಾಡುತ್ತಾ ನಿರೂಪಕರು ‘ವರ್ತೂರ್(Vartur santosh) ಹಾಗೂ ನಿಮ್ಮ ಮದುವೆ ವಿಚಾರವಾಗಿ ಫ್ಯಾನ್ಸ್ ಕೇಳುತ್ತಿದ್ದರು. ಮದುವೆ ಆಗಬೇಕೆಂದು ಮೊದಲೇ ಸ್ಟೇಟ್ಮೆಂಟ್ ಸಿಕ್ಕಿದೆ. ಇದೀಗ ನಾವೂ ಕೇಳುತ್ತೇವೆ. ನಿಮ್ಮ ಅಭಿಪ್ರಾಯವೇನು?’ ಎಂದಿದ್ದಾರೆ.

ನಿರೂಪಕರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ತನಿಷಾ ‘ವರ್ತೂರು ಅವರಿಗೆ ಅವರದ್ದೇ ಜೀವನ ಇದೆ. ಅವರು ಮದುವೆಯಾದ ಮೇಲೂ, ನಾನು ಮದುವೆ ಆದ ಮೇಲೂ ಇಬ್ಬರೂ ಹೀಗೆ ಫ್ರೆಂಡ್ ಆಗಿ ಇರುತ್ತೇವೆ. ನಮ್ಮ ಸ್ನೇಹ ಸಂಬಂಧ ಹೀಗೆ ಇರುತ್ತದೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಪಡಿ ಸಾಕು’ ಎಂದು ಮದುವೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.