Home Entertainment Bigg boss Kannada- 11: ‘ಇಂತವರನ್ನೆಲ್ಲಾ ಏಕೆ ಕಳುಹಿಸುತ್ತೀರಿ?’ ವೇದಿಕೆಯಲ್ಲೇ ಕಂಟೆಸ್ಟೆಂಟ್ ಧನರಾಜ್ ಆಚಾರ್ ವಿರುದ್ಧ...

Bigg boss Kannada- 11: ‘ಇಂತವರನ್ನೆಲ್ಲಾ ಏಕೆ ಕಳುಹಿಸುತ್ತೀರಿ?’ ವೇದಿಕೆಯಲ್ಲೇ ಕಂಟೆಸ್ಟೆಂಟ್ ಧನರಾಜ್ ಆಚಾರ್ ವಿರುದ್ಧ ಸಿಡಿದೆದ್ದ ಕಿಚ್ಚ ಸುದೀಪ್? ಅಷ್ಟಕ್ಕೂ ಆಗಿದ್ದೇನು?

Hindu neighbor gifts plot of land

Hindu neighbour gifts land to Muslim journalist

Bigg Boss Kannad-11 ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಕಿಚ್ಚನ ನೇತೃತ್ವದಲ್ಲಿ ಅಭ್ಯರ್ಥಿಗಳ ಮನೆಹೊಕ್ಕಿದ್ದಾರೆ. ಅಚ್ಚರಿ ಏನಂದ್ರೆ ಈ ಸಲ ಬಿಗ್ ಬಾಸ್(Bigg Boss), ನಾಡಿನ ಜನ ಊಹೆ ಕೂಡ ಮಾಡಿರದಂತ ಕೆಲವು ವ್ಯಕ್ತಿಗಳನ್ನು ಕಂಟೆಸ್ಟೆಂಟ್ ಆಗಿ ಸೆಲೆಕ್ಟ್ ಮಾಡಿದೆ. ಅಂತೆಯೇ ಕರಾವಳಿಯ ಯುವಕ, ಬಹುಮುಖ ಪ್ರತಿಭೆಯ ಕಲಾವಿದ, ಯುಟ್ಯೂಬರ್ 33 ವರ್ಷದ ಧನರಾಜ್ ಆಚಾರ್‌(Dhanraj Achar) ಈ ಬಾರಿ ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಬಿಗ್ ಬಾಸ್ ಆರಂಭದ ವೇದಿಕೆಯಲ್ಲಿ ಕಿಚ್ಚ ಸುದೀಪ್(Suddep), ಧನರಾಜ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದ ಧನರಾಜ್ ಆಚಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ‘ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಪ್ರಶ್ನೆ ಮಾಡಿ, ಧನರಾಜ್ ಮೇಲೆ ಸಿಟ್ಟಾಗಿದ್ದಾರೆ.

ಕಿಚ್ಚ ಸುದೀಪ್ ಸಿಟ್ಟಾಗಿದ್ದು ಯಾಕೆ?
‘ಬಿಗ್ ಬಾಸ್’ ಬಗ್ಗೆ ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್​ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋನ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು. ‘ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್​ಪಿಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಆಗ ‘ನಾನು ಮಾಡಿರೋದು ತಮಾಷೆಗೆ. ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ’ ಎಂದು ಧನರಾಜ್ ಕೇಳಿಕೊಂಡರು. ಆ ಬಳಿಕ ಸುದೀಪ್ ನಕ್ಕರು. ಆಗ ಧನರಾಜ್ ನಿಟ್ಟುಸಿರು ಬಿಟ್ಟರು.

ಅಂದಹಾಗೆ ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ. ಅಬ್ಬಬ್ಬಾ ಸಿನಿಮಾದ‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದ ಧನರಾಜ್, ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿ ಇಡೀ ವೀಕ್ಷಕರ ಮನಗೆದ್ದವರು. ಮಾಮೇಶ್ವರ ರಾಘವ ಆಚಾರ್‌ ಹಾಗೂ ಸಂಧ್ಯಾ ದಂಪತಿಯ ಪುತ್ರನಾದ ಧನರಾಜ್, ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್‌ ಜೊತೆಗೂಡಿ ಅದೆಷ್ಟೋ ವಿಡಿಯೋಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಪತ್ನಿ ಪ್ರಜ್ಞಾ ಆಚಾರ್ಯ ಗರ್ಭಿಣಿ ಯಾದಾಗ ಅಭಿಮಾನಿಗಳಿಗೆ ವಿಶೇಷ ವಿಡಿಯೋ ಮೂಲಕವೇ ಸಿಹಿಸುದ್ದಿ ನೀಡಿದ ಧನರಾಜ್ , ಕಳೆದ ಆಗಸ್ಟ್ 21 ಕ್ಕೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಇನ್ನು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಾಮಿಡಿ ಹೆಚ್ಚಿರಲಿ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದರು. ಈಗ ಧನರಾಜ್ ಆಚಾರ್ ಅವರು ದೊಡ್ಮನೆಗೆ ಬಂದಿರೋದ್ರಿಂದ ಹಾಸ್ಯವನ್ನು ನಿರೀಕ್ಷಿಸಬಹುದು.