Home Breaking Entertainment News Kannada BBK season 10: ಬಿಗ್ ಬಾಸ್ ಒಳಗಿರೋ ಡ್ರೋನ್ ಪ್ರತಾಪ್ ಗೆ ಬಂದೇ ಬಿಡ್ತು ಲೀಗಲ್...

BBK season 10: ಬಿಗ್ ಬಾಸ್ ಒಳಗಿರೋ ಡ್ರೋನ್ ಪ್ರತಾಪ್ ಗೆ ಬಂದೇ ಬಿಡ್ತು ಲೀಗಲ್ ನೋಟಿಸ್- ಇದೇ ಕಾರಣಕ್ಕಾ? ಕೊಟ್ಟಿದ್ಯಾರು ?!

BBK season 10
image source: ವಿಜಯ ಕರ್ನಾಟಕ

Hindu neighbor gifts plot of land

Hindu neighbour gifts land to Muslim journalist

BBK Season 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK Season 10)ಸೆಟ್‌ಗೆ ಎರಡು ಬಾರಿ ಪೊಲೀಸರ ಎಂಟ್ರಿಯಾಗಿದೆ. ಮೊದಲ ಬಾರಿ ವರ್ತೂರು ಸಂತೋಷ್‌ ಅವರ ಹುಲಿಉಗುರ ಪ್ರಕರಣ ಕುರಿತು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಇದರ ನಂತರ ತನಿಷಾ ಕುಪ್ಪಂಡ (Tanisha Kuppanda) ಅವರು ಅವಹೇಳನಕಾರಿ ಪದ ಹೇಳಿದ್ದಾರೆ ಎಂಬ ಆರೋಪದಡಿ ಪೊಲೀಸರು ಬಿಗ್‌ಬಾಸ್‌ ಮನೆಗೆ ಬಂದಿದ್ದರು. ಇದೀಗ, ಡ್ರೋನ್‌ ಪ್ರತಾಪ್‌ (Drone Pratap) ಅವರಿಗೆ ಕೂಡ ಸಂಕಷ್ಟ ಎದುರಾಗಿದೆ.

ದೊಡ್ಮನೆಯಲ್ಲಿ ಎಲ್ಲ ಟಾಸ್ಕ್ ನಲ್ಲಿಯು ಉತ್ತಮವಾಗಿ ಆಡುತ್ತಿರುವ ಸ್ಪರ್ಧಿ ಡೋನ್ ಪ್ರತಾಪ್ ವಿರುದ್ಧ BBMP ಅಧಿಕಾರಿ ಡಾ.ಪ್ರಯಾಗ್ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಕ್ವಾರಂಟೈನ್ ಸಂದರ್ಭ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದರು ಎಂದು ಹೇಳಿಕೊಂಡಿದ್ದರು. ಈ ವೇಳೆ ಡ್ರೋನ್ ಪ್ರತಾಪ್ ಅವರು ಮಾತನಾಡಿದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಪ್ರತಾಪ್ ಅವರು ಅಧಿಕಾರಿಗಳು ಅಲ್ಲಿ ಕೂಡ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಹೀಗೆ ತಮ್ಮ ಬಗ್ಗೆ ನಾನಾ ರೀತಿ ಸುಳ್ಳು ಆರೋಪ ಮಾಡಿರುವ ಪ್ರತಾಪ್‌ ಅವರು ನೋಟಿಸ್‌ ತಲುಪಿದ 1 ತಿಂಗಳೊಳಗೆ ಬಹಿರಂಗ ಇಲ್ಲವೇ ಲಿಖಿತ ರೂಪದಲ್ಲಿ ಕ್ಷಮೆ ಕೇಳದೇ ಹೋದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವಕೀಲರ ಮುಖಾಂತರ BBMP ಅಧಿಕಾರಿ ಡಾ.ಪ್ರಯಾಗ್ ನೋಟಿಸ್ ರವಾನಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: Googel Map: ಗೂಗಲ್ ಮ್ಯಾಪ್ ಮೂಲಕ ರೂಟ್ ಹುಡುಕುವರಿಗೆ ಮಹತ್ವದ ಸುದ್ದಿ !!