Home Entertainment BBK-12 : ಗಿಲ್ಲಿ ಮೇಲೆ ರಿಷಾ ಹಲ್ಲೆ- ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಔಟ್?

BBK-12 : ಗಿಲ್ಲಿ ಮೇಲೆ ರಿಷಾ ಹಲ್ಲೆ- ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಔಟ್?

Hindu neighbor gifts plot of land

Hindu neighbour gifts land to Muslim journalist

BBK-12 : ಕನ್ನಡ ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಒಂದು ತಿಂಗಳ ಕಳೆದು ಇದೀಗ ಎರಡನೇ ತಿಂಗಳಿನಲ್ಲಿ ಶೋ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈಗ ತಾನೆ ಮನೆಯ ಹಿರಿಯ ಸದಸ್ಯರಾಗಿದ್ದ ಮಲ್ಲಮ್ಮ ಅವರು ಎಲಿಮಿನೇಟ್ ಆಗಿದ್ದಾರೆ. ಆದರೆ ಈ ಬೆನ್ನಲ್ಲೇ ರಿಷಾ ಕೂಡ ಮನೆಯಿಂದ ಅರ್ಧಕ್ಕೆ ಔಟ್ ಆಗುವ ಸಾಧ್ಯತೆ ಇದೆ.

ಹೌದು, ‘ಯಾರ ಮೇಲೆ ಯಾರೂ ಹಲ್ಲೆ ಮಾಡಬಾರದು’ ಎಂಬುದು ಬಿಗ್ ಬಾಸ್​ನ (Bigg Boss) ಮೂಲ ನಿಯಮಗಳಲ್ಲಿ ಒಂದು. ಈ ರೀತಿ ಮಾಡಿದರೆ ಆ ಕ್ಷಣವೇ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ ಇದೆಲ್ಲವನ್ನು ಮರೆತು ಇದೀಗ ಬಿಗ್ ಬಾಸ್ ಸ್ಪರ್ದಿಯಾಗಿರುವ ರಿಷಾ ಅವರು ಮತ್ತೊಬ್ಬ ಕಂಟೆಸ್ಟೆಂಟ್ ಆಗಿರುವ ಗಿಲ್ಲಿ ನಟನ ಮೇಲೆ ಕೈ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರನ್ನು ಎಲಿಮಿನೇಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.

ರಿಷಾ ಅವರ ಬಳಿ ಬಕೆಟ್ ಕೊಡುವಂತೆ ಗಿಲ್ಲಿ ಅವರು ಬಾತ್​ರೂಂನಲ್ಲಿ ಮನವಿ ಮಾಡಿದ್ದಾರೆ. ಆದರೆ, ರಿಷಾ ಇದಕ್ಕೆ ಬಗ್ಗಲಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೊರಟ ಗಿಲ್ಲಿ ಅವರು, ರಿಷಾ ಅವರ ಬಟ್ಟೆಯನ್ನು ತಂದು ಬಾತ್​ರೂಂ ಹೊರ ಭಾಗದಲ್ಲಿರುವ ನೆಲದ ಮೇಲೆ ಹಾಕಿದ್ದಾರೆ. ಇದು ರಿಷಾ ಕೋಪಕ್ಕೆ ಕಾರಣ ಆಗಿದೆ. ‘ಗಿಲ್ಲಿ’ ಎಂದು ಕೂಗುತ್ತಾ ಬಂದ ಅವರು, ಗಿಲ್ಲಿಗೆ ಹೊಡೆದಿದ್ದಾರೆ. ಇಷ್ಟಕ್ಕೆ ರಿಷಾ ನಿಲ್ಲಲಿಲ್ಲ. ರಿಷಾ ಅವರು ಗಿಲ್ಲಿ ಮೇಲೆ ಕೂಗಾಡಿದ್ದಾರೆ. ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್​ಕೇಸ್​ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ರಿಷಾ ಅವರನ್ನು ಮನೆಯಿಂದ ಹೊರ ಹಾಕಬೇಕೆಂದು ಅನೇಕರು ಮನವಿ ಮಾಡಿದ್ದಾರೆ.