Home Entertainment BBK 12: ಎಂತ ಗೊತ್ತುಂಟಾ ಗಾಯ್ಸ್‌ ಎಂದು ಹೇಳುತ್ತಾ ಮತ್ತೆ ರಕ್ಷಿತಾ ವಿರುದ್ಧ ವಿಷಕಾರಿದ ಧ್ರುವಂತ್‌

BBK 12: ಎಂತ ಗೊತ್ತುಂಟಾ ಗಾಯ್ಸ್‌ ಎಂದು ಹೇಳುತ್ತಾ ಮತ್ತೆ ರಕ್ಷಿತಾ ವಿರುದ್ಧ ವಿಷಕಾರಿದ ಧ್ರುವಂತ್‌

ಫೋಟೋ ಕೃಪೆ: ಕಲರ್ಸ್‌ ಕನ್ನಡ

Hindu neighbor gifts plot of land

Hindu neighbour gifts land to Muslim journalist

BBK12: ಬಿಗ್‌ಬಾಸ್‌ ಸೀಸನ್‌ 12 ಒಂದಲ್ಲ ಒಂದು ವಿಷಯಕ್ಕೆ ಭಾರೀ ಚರ್ಚೆಯಾಗುತ್ತಿದೆ. ಇದರಲ್ಲಿ ಅಣ್ಣ ತಂಗಿ ತರಹ ಇದ್ದ ರಕ್ಷಿತಾ, ಧ್ರುವಂತ್‌ ಯಾಕೋ ಬೇರೆ ಬೇರೆಯಾಗಿದ್ದಾರೆ. ಒಬ್ಬರನ್ನೊಬ್ಬರು ಮಾತನಾಡುತ್ತಿಲ್ಲ. ಧ್ರುವಂತ್‌ಗೆ ರಕ್ಷಿತಾ ಶೆಟ್ಟಿ ಮೇಲೆ ಯಾಕೆ ಇಷ್ಟೊಂದು ಕೋಪ ಬಂದಿದೆ ಎನ್ನುವುದಕ್ಕೆ ಧ್ರುವಂತ್‌ ಬಳಿಯೇ ನಿಖರ ಕಾರಣ ಇಲ್ಲ ಅನ್ಸುತ್ತೆ.

ರಕ್ಷಿತಾ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡುವ ಕನ್ನಡದ ರೀತಿಯನ್ನೇ ತೆಗೆದುಕೊಂಡು, ಭಾಷೆಯನ್ನೇ ಆಧಾರವಾಗಿಟ್ಟುಕೊಂಡು ಹಗೆ ಸಾಧಿಸಲು ಹೊರಟಿರುವ ಧ್ರುವಂತ್‌ಗೆ ಕೆಲವೊಂದು ಸೂಕ್ಷ್ಮತೆಗಳು ಅರ್ಥ ಆಗುವುದಿಲ್ಲವೇನೋ. ಬಿಗ್‌ಬಾಸ್‌ ಒಂದು ಕನ್ನಡ ಶೋ ಆಗಿರುವುದರಿಂದ ಎಲ್ಲರೂ ಅಲ್ಲಿ ಕನ್ನಡ ಮಾತನಾಡುತ್ತಿದ್ದಾರೆ. ಕನ್ನಡದವರ ಮಧ್ಯೆ ಇದ್ದು ದಿನದ 24 ಗಂಟೆಯೂ ಕನ್ನಡ ಕೇಳಿ ಕೇಳಿ ರಕ್ಷಿತಾ ಇದೀಗ ಕನ್ನಡ ಮಾತನಾಡುವ ರೀತಿ ಬದಲಾಗಿದೆ. ಇದು ಯಾಕೆ ಧ್ರುವಂತ್‌ಗೆ ಅರ್ಥವಾಗುತ್ತಿಲ್ಲ ಎನ್ನುವುದು ನಿಜಕ್ಕೂ ಆಶ್ಚರ್ಯ.

ಕೇವಲ ಭಾಷೆಯ ಆಧಾರದಲ್ಲಿ ರಕ್ಷಿತಾ ಶೆಟ್ಟಿಯ ಆಟವನ್ನು ಕಡೆಗಣಿಸುವುದು, ಆಕೆಯನ್ನು ಫೇಕ್‌ ಎನ್ನುವುದನ್ನು ಧ್ರುವಂತ್‌ ಮಾಡುತ್ತಿದ್ದಾರೆ. ಇಂದಿನ ಪ್ರೊಮೋದಲ್ಲಿ ಕೂಡಾ ಧ್ರುವಂತ್‌ ಇದೇ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

https://www.instagram.com/reel/DQ2_lEMk8YZ/?utm_source=ig_web_copy_link&igsh=MzRlODBiNWFlZA==