Home Entertainment Darshan: ಎರಡೆರಡು ಜೈಲಲ್ಲಿ ಮುದ್ದೆ ಮುರುದ್ರೂ ಕರಗದ ಸೊಕ್ಕು – ಮೀಡಿಯಾದವರು ಕಂಡ ಕೂಡಲೇ ಮಿಡಲ್...

Darshan: ಎರಡೆರಡು ಜೈಲಲ್ಲಿ ಮುದ್ದೆ ಮುರುದ್ರೂ ಕರಗದ ಸೊಕ್ಕು – ಮೀಡಿಯಾದವರು ಕಂಡ ಕೂಡಲೇ ಮಿಡಲ್ ಫಿಂಗರ್ ತೋರಿಸಿ ದರ್ಶನ್ ಗಾಂಚಲಿ !!

Hindu neighbor gifts plot of land

Hindu neighbour gifts land to Muslim journalist

Darshan: ಕಟ್ಟಿಕೊಂಡ ಹೆಂಡತಿಯೊಂದಿಗೆ ಸುಖವಾಗಿರುವುದು ಬಿಟ್ಟು, ಬೇರಾವಳಿಗಾಗಿ ಒಬ್ಬ ವ್ಯಕ್ತಿಯನ್ನು ಭೀಕರ ವ್ಯಕ್ತಿಯನ್ನು ಕೊಂದು ಕೊಲೆ ಆರೋಪದ ಮೇಲೆ ಜೈಲು ಸೇರಿರೋ ನಟ ದರ್ಶನ್‌ ಸೊಕ್ಕು ಇನ್ನೂ ಇಳಿದಿಲ್ಲ, ಈಗ ಮತ್ತೆ ಗಾಂಚಾಲಿ ತೋರಿರೋ ಈ ಕಿಲ್ಲಿಂಗ್ ಸ್ಟಾರ್ ಮಿಡಲ್‌ ಫಿಂಗರ್‌ ತೋರಿಸಿ ಮತ್ತೆ ದರ್ಪ ತೋರಿದ್ದಾರೆ.

ಹೌದು, ಆರಂಭದಲ್ಲಿ ಪೊಲೀಸರ ಭಯಕ್ಕೆ ಬಳಲಿ ಬೆಂಡಾಗಿದ್ದ ದರ್ಶನ್ ಈಗ ತಿಂಗಳುಗಳು ಕಳೆಯುತ್ತಾ ಜೈಲಿನ ಪರಿಸ್ಥಿತಿಗೆ ಒಗ್ಗಿಕೊಂಡಂತಿದೆ. ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದಾಗ, ಅಲ್ಲಿ ನಿಯಮ ಮುರಿದು ಜೈಲನ್ನು ರೆಸಾರ್ಟ್ ಮಾಡಿಕೊಂಡಿದ್ದ ದರ್ಶನ್, 9 ಅಧಿಕಾರಿಗಳ ಅಮಾನತ್ತಿಗೆ ಕಾರಣವಾಗಿ ಈಗ ಬಳ್ಳಾರಿ ಜೈಲಿಗೆ ಬಂದಿದ್ದಾರೆ. ಇಲ್ಲಿಯೂ ಸಹ ಆರಂಭದ ಕೆಲ ದಿನ ಹುಳ್ಳಗೆ ಇದ್ದ ದರ್ಶನ್ ಈಗ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಮತ್ತೆ ಚಿಗುರಿದಂತೆ ಕಾಣುತ್ತಿದ್ದಾರೆ. ಯಾಕೆಂದರೆ ಪೊಲೀಸರ ಜೊತೆಗೆ ಬರುತ್ತಿದ್ದರು ಎರಡು ಕೈಗಳಲ್ಲೂ ಮಿಡಲ್‌ ಫಿಂಗರ್ ತೋರುತ್ತಾ ಬಂದಿದ್ದಾರೆ. ಇದೀಗ ಈ ಫೋಟೋ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ದರ್ಶನ್‌ ಸೊಕ್ಕು ಕಡಿಮೆಯಾಗಿಲ್ಲ ಅನ್ನೋದು ಇದ್ರಲ್ಲೇ ಗೊತ್ತಾಗ್ತಿದೆ.

ಇಂದು, ದರ್ಶನ್ ಪರ ವಕೀಲರು ಹಾಗೂ ವಿಜಯಲಕ್ಷ್ಮಿ, ದಿನಕರ್ ತೂಗುದೀಪ ಅವರುಗಳು ದರ್ಶನ್ ಅನ್ನು ನೋಡಲು ಬಳ್ಳಾರಿಗೆ ಆಗಮಿಸಿದ್ದರು. ಆರೋಪ ಪಟ್ಟಿ ಸಲ್ಲಿಕ ಆಗಿದ್ದು, ಜಾಮೀನು ಅರ್ಜಿ ಸಲ್ಲಿಕೆ ಬಗ್ಗೆ ಇಂದು ಚರ್ಚಿಸಲಾಗಿದೆ. ಈ ವೇಳೆ ಸೆಲ್‌ನಿಂದ ಸಂದರ್ಶಕರ ಕೊಠಡಿಗೆ ಹೋಗಿ ವಕೀಲರನ್ನು ಭೇಟಿ ಮಾಡುವಾಗ ಈ ರೀತಿ ಕೈ ಬೆರಳು ಸನ್ನೆ ಮಾಡಿದ್ದಾರೆ. ಇನ್ನೂ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ ಹೆಚ್ಚು ಟೆನ್ಷನ್‌ ಕೊಟ್ಟಿದೆ ಅಂತ ಅವರನ್ನು ನೋಡಿದ್ರೇನೆ ಅನ್ನಿಸುತ್ತೆ.