Home Entertainment Arpitha Prasad: ಆ ಒಂದು ವಿಡಿಯೋ ನೋಡಿ ನಿರಂಜನ್ ದೇಶಪಾಂಡೆ ಹಾಗೂ ಮಾಜಿ ಪತಿ ಕಿರಿಕ್...

Arpitha Prasad: ಆ ಒಂದು ವಿಡಿಯೋ ನೋಡಿ ನಿರಂಜನ್ ದೇಶಪಾಂಡೆ ಹಾಗೂ ಮಾಜಿ ಪತಿ ಕಿರಿಕ್ ಕೀರ್ತಿಗೆ ಖಡಕ್ ಎಚ್ಚರಿಕೆ ಕೊಟ್ಟ ಅರ್ಪಿತಾ !! ಅಂತದ್ದೇನಿದೆ ವಿಡಿಯೋದಲ್ಲಿ?

Hindu neighbor gifts plot of land

Hindu neighbour gifts land to Muslim journalist

Arpitha Prasad: ಕನ್ನಡದ ಖ್ಯಾತ ನಿರೂಪಕ ನಿರಂಜನ್ ಮತ್ತು ಕಿರಿಕ್ ಕೀರ್ತಿ ಇಬ್ಬರು ಬೆಸ್ಟ್ ಫ್ರೆಂಡ್ಸ್. ಇಬ್ಬರು ಸೇರಿದರೆ ಮನರಂಜನೆಗೆ ಕೊರತೆ ಇಲ್ಲ. ಇತ್ತೀಚೆಗೆ ಇಬ್ಬರೂ ಸೇರಿ ಒಂದು ಚಾನೆಲ್ ಅನ್ನು ಶುರು ಮಾಡಿದ್ದಾರೆ. ಈಗ ಅದೇ ಚಾನೆಲ್‌ ಸಂದರ್ಶನದಲ್ಲಿ ನಡೆದ ಘಟನೆಯನ್ನು ಕಂಡು ಕಿರಿಕ್ ಕೀರ್ತಿ ಮಾಜಿ ಪತ್ನಿ ಅರ್ಪಿತಾ ನಿರಂಜನ್(Niranjan) ಮತ್ತು ಕೀರ್ತಿ(Keerthi)ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಂದಹಾಗೆ ‘ರಾನಿ'(Raani) ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಸಿನಿಮಾ ರಿಲೀಸ್‌ಗೂ ಮುನ್ನ ಕೀರ್ತಿ ಮತ್ತು ನಿರಂಜನ್ ಅವರ ಚಾನೆಲ್ ಆದ ಮಿ.ನಿರಿಕ್ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದಾರೆ.. ಇಲ್ಲಿ ಆಂಕರ್‌ಗಳಿಗೆ ನಟಿ ರಾಧ್ಯಾ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆ ಹಾಗೂ ಅದಕ್ಕೆ ನಿರಂಜನ್ ಹಾಗೂ ಕೀರ್ತಿ ಕೊಟ್ಟ ಉತ್ತರವೇ ಅರ್ಪಿತಾ(Arpitha Prasad)ರನ್ನು ಕೆರಳುವಂತೆ ಮಾಡಿದೆ.

ಹೌದು, ಸಂದರ್ಶನದ ನಡುವಲ್ಲಿ ರಾಧ್ಯಾ, ನಿಮ್ಮ ಮಗನಿಗೆ ಯಾರಿಷ್ಟ. ತಂದೆ ಅಥವಾ ತಾಯಿ ಎಂದು ಕೇಳಿದ್ದಾರೆ. ಉತ್ತರಿಸಲು ಸೆಕೆಂಡ್ಸ್‌ಗಳ ಕಾಲ ಸಮಯ ತೆಗೆದುಕೊಂಡ ಕಿರಿಕ್ ಕೀರ್ತಿ, ಅವನಿಗೆ ಅವರಮ್ಮ ಇಷ್ಟ ಎಂದಿದ್ದಾರೆ. ತಕ್ಷಣ ನಿರಂಜನ್ ಅವರಿಗೂ ಅದೇ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನಿರಂಜನ್, ನನಗೂ ಅವರಮ್ಮ ಇಷ್ಟ ಎಂದಿದ್ದಾರೆ. ಅಲ್ಲಿ ಫನ್ನಿ ಮೊಮೆಂಟ್ ಸೃಷ್ಟಿಯಾಗಿದೆ. ಕಿರಿಕ್ ಕೀರ್ತಿ, ಹೇಯ್ ಎಂದಿದ್ದಾರೆ. ಆಗ ನಿರಂಜನ್ ನಾನು ಹೇಳಿದ್ದು ನಿಮ್ಮ ತಾಯಿ ಬಗ್ಗೆ ಕಣಪ್ಪ ಎಂದಿದ್ದಾರೆ. ಇದನ್ನ ರೀಲ್ಸ್ ಮಾಡಿ ಮಿ.ನಿರಿಕ್ ಚಾನೆಲ್‌ನಲ್ಲಿ ಹಾಕಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ ಅನೇಕರಿಗೆ ಇದು ಮನರಂಜನೆ ನೀಡಿದೆ.

ಇದನ್ನು ನೋಡಿ ಬೇಸರ ಮಾಡಿಕೊಂಡ ಕಿರಿಕ್ ಕೀರ್ತಿ ಮಾಜಿ ಪತ್ನಿ ಅರ್ಪಿತಾ ಈ ವಿಡಿಯೋಗೆ ಕಮೆಂಟ್ ಹಾಕಿ ‘ಒಬ್ಬ ಆಂಕರ್ ಅದರ ಸಾಧಕ ಬಾಧಕಗಳನ್ನು ತಿಳಿದುಕೊಂಡು ಮಾತನಾಡಬೇಕಿದೆ. ಯಾವುದೇ ರೀತಿಯ ಲೀಗಲ್ ಷರತ್ತುಗಳನ್ನು ತಿಳಿದುಕೊಳ್ಳದೇ ಮಾತನಾಡಬಾರದು. ಇದು ಫನ್ನಿ ವಿಚಾರ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ನಮ್ಮ ವಿಚಾರದ ತೆಗೆದು ತಮಾಷೆ ಮಾಡುವುದು ಸರಿಯಲ್ಲ. ಇದೇ ರೀತಿ ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

 

View this post on Instagram

 

A post shared by Mr. Nirik (@mrnirik4)