

Anchor Anushree: ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನಲ್ಲಿ ಸಂದರ್ಶನ ನೀಡಿದ್ದು, ಅಚ್ಚರಿಯ ವಿಷಯ ಒಂದನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.
ಹೌದು, ತುಳುವಿನ ಪಾಡ್ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮಕ್ಕೆ ಬಂದಿದ್ದು, ನೀವು ಮಾತು ಜಾಸ್ತಿ ಮಾತನಾಡುವುದು ಹೇಗೆ? ಎಲ್ಲಿ ನಿರೂಪಣೆ ಕಲಿತಿರಿ ಎಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅನುಶ್ರೀ (Anchor Anushree) ನಾನು ಮಾತು ಜಾಸ್ತಿ ಆಡುವುದೆಂದರೆ ಅದು ನನ್ನ ಅಪ್ಪನಿಂದ ಬಂದ ಒಂದೇ ಒಂದೇ ಬಳುವಳಿ. ಮಾತು ನನಗೆ ನನ್ನ ತಂದೆಯಿಂದಲೇ ಬಂದಿದ್ದು. ಅವರು ತುಂಬಾ ಮಾತನಾಡುತ್ತಿದ್ದರು. ಅವರು ಕೆಲಸ ಮಾಡಿಕೊಂಡಿದ್ದ ಕಂಪೆನಿಯಲ್ಲಿ ಮಾರ್ಕೆಟಿಂಗ್ ನಲ್ಲಿ ಅವರು ಗೋಲ್ಡ್ ಮೆಡಲಿಸ್ಟ್ ಎಂದಿದ್ದಾರೆ.
ಒಬ್ಬ ತಂದೆಯಾದವನು ಹಿರೋ ತರ ಇರಬೇಕು. ನಮ್ಮ ತಂದೆ ನಮಗೆ ಹಿರೋ ತರ ಇರಲಿಲ್ಲ. ನನ್ನ ಅಮ್ಮನ ಜೊತೆಗೆ ಒಳ್ಳೆಯ ಗಂಡನಂತೆ ಇದ್ರಾ ನನಗದು ಗೊತ್ತಿಲ್ಲ. ಅವರ ಬ್ಯುಸಿನೆಸ್ , ಅವರ ಫ್ರೆಂಡ್ಸ್, ಅವರ ಸ್ಟಾಂಡರ್ಡ್ ಅದೇ ಜೀವನ ಆಗಿತ್ತು. ಕೊನೆಗೆ ಅವರೇ ತೀರ್ಮಾನಿಸಿ 25 ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದರು ಎಂದಿದ್ದಾರೆ.
ಅಪ್ಪ ಇಲ್ಲದೆ ಬದುಕೋದು ಮೊದಲಿಗೆ ನಮಗೆ ಕಷ್ಟವಾಯ್ತು. ಸಮಾಜ ನೋಡುವ ರೀತಿ ಬದಲಾಯ್ತು. ಅಪ್ಪ ಇಲ್ಲದ ಹೆಣ್ಣು ಮಗುವನ್ನು ಸಮಾಜ ನೋಡವ ರೀತಿಯೇ ಬೇರೆ. ಅಪ್ಪ ಇಲ್ಲದ ಹೆಣ್ಣು ಮಗು ಸಂಜೆ 7 ಗಂಟೆ ಮೇಲೆ ಮನೆಗೆ ಬಂದರೆ ನೋಡುವ ರೀತಿಯೇ ಬೇರೆ. ಇನ್ನು ಟಿಲಿವಿಷನ್ ಇಂಡಸ್ಟ್ರಿಗೆ ಹೋದರೆ ನೋಡುವ ರೀತಿಯೇ ಬೇರೆ. ಒಟ್ಟಿನಲ್ಲಿ ಜೀವನದಲ್ಲಿ ಸಾಧಿಸಿದರೆ ನೋಡುವ ರೀತಿಯೇ ಬೇರೆ ಆಗಿತ್ತು ಎಂದು ಮಾತನಾಡಿದ್ದಾರೆ.
ಆದ್ರೆ ನನಗೆ ಮಾತಿನ ಮಹತ್ವ ತುಂಬಾ ಲೇಟ್ ಆಗಿ ತಿಳಿದಿದ್ದು, ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಬೆಂಗಳೂರಿಗೆ ಹೋದೆ. ಬೆಂಗಳೂರಿಗೆ ಹೋದ ಮೊದಲಿಗೆ ನನಗೆ ಒಂದು ದಿನಕ್ಕೆ 250 ರೂ ವೇತನ ಇತ್ತು. ತಿಂಗಳ ಕೊನೆಗೆ 1500 ರೂ ಉಳಿದರೆ ಅದೇ ದೊಡ್ಡ ವಿಷಯವೇ ಆಗಿತ್ತು. ಅದಲ್ಲದೆ ನನ್ನ ಹಾಸ್ಟೆಲ್ ಫೀಸ್ 2000 ರೂ ಆಗಿತ್ತು. ಹೀಗಾಗಿ ಅಲ್ಲಿನ ದಿನಗಳು ಕಷ್ಟಕರ ಆಗಿದ್ದವು. ಬೆಂಗಳೂರಲ್ಲಿ ಆಗ ಎಂಸಿ ರೀನಾ ತುಂಬಾ ಫೇಮಸ್ ಆಗಿದ್ದರು ಅವರ ಜೊತೆಗೆ ನಾನು ಸಹಾಯಕಿ ಆಗಿ ಹೊಗುತ್ತಿದ್ದೆ. ಬಳಿಕ ಅವರು ನನಗೆ ನೀನೆ ಎಂಸಿ ಮಾಡು ಎಂದು ಹೇಳುತ್ತಿದ್ದರು.
ಸದ್ಯ ತುಳುವಿನ ಪಾಡ್ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಅನುಶ್ರೀ ಮಾತನಾಡಿರುವ ಈ ವಿಡಿಯೋ ದಿ ಪವರ್ ಹೌಸ್ ವೈನ್ಸ್ ಯೂಟ್ಯೂಬ್ ನಲ್ಲಿ ಲಭ್ಯವಿದೆ.













