Home Entertainment Allu Arjun: ಅಲ್ಲು ಅರ್ಜುನ್‌ ಜೈಲಿಂದ ಮನೆಗೆ ಬರ್ತಿದ್ದಂತೆ ಓಡಿ ಬಂದು ತಬ್ಬಿಕೊಂಡ ಪತ್ನಿ

Allu Arjun: ಅಲ್ಲು ಅರ್ಜುನ್‌ ಜೈಲಿಂದ ಮನೆಗೆ ಬರ್ತಿದ್ದಂತೆ ಓಡಿ ಬಂದು ತಬ್ಬಿಕೊಂಡ ಪತ್ನಿ

Hindu neighbor gifts plot of land

Hindu neighbour gifts land to Muslim journalist

Allu Arjun: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣದಲ್ಲಿ ಜೈಲು ಸೇರಿದ್ದ ಅಲ್ಲು ಅರ್ಜುನ್‌ ಅವರು ಇಂದು ಬೆಳಗ್ಗೆ ಚಂಚಲಗೂಡ ಸೆಂಟ್ರಲ್‌ ಜೈಲಿನಿಂದ ರಿಲೀಸ್‌ ಆಗಿದ್ದು, ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಚಿಂತೆ ಮಾಡಲು ಏನೂ ಇಲ್ಲ. ಕಾನೂನು ವ್ಯವಸ್ಥೆ ಮೇಲೆ ನನಗೆ ತುಂಬಾ ನಂಬಿಕೆ ಇದೆ. ನಾನು ಕಾನೂನನ್ನು ಗೌರವಿಸುತ್ತೇನೆ. ಮೃತ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಇದು ದುರದೃಷ್ಟಕರ ಘಟನೆಯಾಗಿದೆ. ಸಂತ್ರಸ್ತ ಕುಟುಂಬಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಅಲ್ಲು ಅರ್ಜುನ್‌ ಮನೆಗೆ ಹೋಗುವ ಸಂದರ್ಭದಲ್ಲಿ ಮಗ ಓಡಿ ಬಂದು ಅಪ್ಪನನ್ನು ತಬ್ಬಿಕೊಂಡು ತನ್ನ ಸಂತಸ ವ್ಯಕ್ತಪಡಿಸಿದ್ದು, ಪತ್ನಿ ಕೂಡಾ ಅಲ್ಲು ಅರ್ಜುನ್‌ನ ಗಟ್ಟಿಯಾಗಿ ತಬ್ಬಿಕೊಂಡು ಭಾವುಕರಾದರು. ನಂತರ ಕುಂಬಳಕಾಯಿ ಒಡೆದು ದೃಷ್ಟಿ ತೆಗೆಯಲಾಗಿದೆ. ಅಲ್ಲು ಅರ್ಜುನ್‌ ಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ದೊರಕಿದೆ.