Home Entertainment Aiyyo Shraddha: ಬಿ ಟೌನ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಬಹುಮುಖ ಪ್ರತಿಭೆ | ಸ್ಟಾರ್...

Aiyyo Shraddha: ಬಿ ಟೌನ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಬಹುಮುಖ ಪ್ರತಿಭೆ | ಸ್ಟಾರ್ ನಟನ ಜೊತೆ ಅಯ್ಯೋ ಶ್ರದ್ಧಾ!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು ಮೂಲದ ಬಹುಮುಖ ಪ್ರತಿಭೆ, ತನ್ನ ಮಾತಿನ ಮೂಲಕವೇ ಜನರ ಮನಸ್ಸನ್ನು ಗೆದ್ದ ಅಯ್ಯೋ ಶ್ರದ್ಧಾ ( Aiyyo Shraddha) ಬಿ ಟೌನ್ ಗೆ ಎಂಟ್ರಿ ನೀಡಿದ್ದಾರೆ. ಮೀಡಿಯಾ ಸ್ಟಾರ್, ಆರ್‌ಜೆ ಅಯ್ಯೋ ಶ್ರದ್ಧಾ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ. ಮುಂಬರುವ ಡಾಕ್ಟರ್ ಜಿ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಎಲ್ಲರಿಗೂ ತಿಳಿದೇ ಇರುತ್ತದೆ ಅಯ್ಯೋ ಶ್ರದ್ಧಾ ಎನ್ನುವ ಹೆಸರು. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಚಿರಪರಿಚಿತ. ಸೋಷಿಯಲ್ ಮೀಡಿಯಾ ಬಳಸುವವರೆಲ್ಲ ಈ ಕುಡ್ಲದ ಚೆಲುವೆಯ ಕುರಿತು ತಿಳಿಯದೇ ಇರದು.
ದಿನನಿತ್ಯ ನೋಡುವ ಸಣ್ಣ ಪುಟ್ಟ ವಿಚಾರಗಳನ್ನು ನಮ್ಮ ಮನಸ್ಸಿಗೆ ಮುಟ್ಟುವ ಹಾಗೇ ವೀಡಿಯೋ ಮಾಡಿ ತೋರಿಸಿ ಮನೆಮಾತಾಗಿದ್ದ ಶ್ರದ್ಧಾ ಟ್ಯಾಲೆಂಟ್‌ಗೆ ಕನ್ನಡಿಗರು ಮಾತ್ರವಲ್ಲ ಹೊರ ರಾಜ್ಯದ ಮಂದಿಯೂ ಫಿದಾ ಆಗಿದ್ದಾರೆ.

ಶ್ರದ್ಧಾ ಅವರು ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೂ ಆಯುಷ್ಮಾನ್ ಖುರಾನ ಜೊತೆ. ಶ್ರದ್ಧಾ ಅವರು ಇನ್‌ಸ್ಟಗ್ರಾಮ್ ಪೋಸ್ಟ್ ಮೂಲಕ ಈ ಸುದ್ದಿಯನ್ನು ಸ್ವತಃ ತಾವೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು ತಾವು ಡಾಕ್ಟರ್ ಜಿ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.

ಬಾಲಿವುಡ್ ನ ಹ್ಯಾಡ್ಸಂ ಹೀರೋ, ತನ್ನ ನಟನೆಯ ಮೂಲಕ ಸರ್ವಜನರ ಪ್ರೀತಿ ಗಳಿಸಿ, ಡಿಫರೆಂಟ್ ಸಿನಿಮಾಗಳನ್ನು ಮಾಡಿ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದಂತಹ ನಟ ಆಯುಷ್ಮಾನ್ ಖುರಾನಾ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರು ಡಾಕ್ಟರ್ ಜಿ ನಲ್ಲಿ ವೈದ್ಯರಾಗಿ ಅಂದರೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಅನುಭೂತಿ ಕಶ್ಯಪ್ ನಿರ್ದೇಶನದ ಈ ಚಿತ್ರದಲ್ಲಿ ಶೀಬಾ ಚಡ್ಡಾ ಮತ್ತು ಶಿಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ಚೆಲುವೆ, ಕನ್ನಡತಿ ಬಿ ಟೌನ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿದದ್ದು, ಹಾಗೂ ಬಾಲಿವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದು, ಶ್ರದ್ಧಾ ಫ್ಯಾನ್ಸ್ ಗೆ ಖುಷಿ ನೀಡಿದೆ.