Home Entertainment Shraddha Srinath : ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ʼಯೂ ಟರ್ನ್‌ʼ ಬೆಡಗಿ ! ಬಾಲಿವುಡ್‌ ನಟ...

Shraddha Srinath : ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ʼಯೂ ಟರ್ನ್‌ʼ ಬೆಡಗಿ ! ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಸೌತ್‌ ಸಿನಿರಂಗಕ್ಕೆ ಗ್ರ್ಯಾಂಡ್‌ ಎಂಟ್ರಿ!!!

Shraddha Srinath

Hindu neighbor gifts plot of land

Hindu neighbour gifts land to Muslim journalist

Shraddha Srinath : ಯೂಟರ್ನ್ (u turn) ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ನಟಿ  ಶ್ರದ್ಧಾ ಶ್ರೀನಾಥ್ . ಹಾಗೆಯೇ ಮೂಗುತಿ (nose pin)ಸುಂದರಿ ಎಂದೇ ಶ್ರದ್ದಾ ಶ್ರೀನಾಥ್ ಅಭಿಮಾನಿಗಳ ಮನಸ್ಸಲ್ಲಿ ಕೂತುಬಿಟ್ಟಿದ್ದರು. ಹಾಗೇ ಆಪರೇಷನ್ ಅಲಮೇಲಮ್ಮ (operation alamelamma) ಸಿನಿಮಾದ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಂತಹ ನಟಿ ಎನ್ನಬಹುದು.

ಸದ್ಯ ಇದೀಗ ಬಹುಭಾಷಾ ನಟಿಯಾಗಿ ಶ್ರದ್ಧ ಶ್ರೀನಾಥ್ (Shraddha Srinath) ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು(Tamil), ತೆಲುಗು(Telugu), ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಶ್ರದ್ಧಾ ಶ್ರೀನಾಥ್ ಗೆ ಬಹಳಷ್ಟು ಅವಕಾಶಗಳಿವೆ. ಇದೀಗ ಶ್ರದ್ಧ ಶ್ರೀನಾಥ್(shraddha Srinath) ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟು ಅಭಿಮಾನಿಗಳ ಮನಸನ್ನು ಇನ್ನಷ್ಟು ಸಂತಸ ಪಡಿಸಿದ್ದಾರೆ.

ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ (victory Venkatesh) ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಎಲ್ಲರಿಗೂ ಗೊತ್ತಿರುವ ವಿಷಯಾನೇ ಹೌದು. ಇದೀಗ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ ಎಲ್ಲರನ್ನೂ ಭಾರೀ ನಿರೀಕ್ಷೆ ಮೂಡಿಸಿದೆ. ಶೈಲೇಶ್ ಕೋಲನು(Shailesh kolaanu) ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಸದ್ಯ ವಿಶಾಖಪಟ್ಟಣದಲ್ಲಿ(Visakhapatnam) ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ಈ ವಿಷಯ ತಿಳಿದ ಬಳಿಕ ಎಲ್ಲರೂ ಸಿನಿಮಾವನ್ನು ನೋಡಲು ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ.

ನಿಹಾರಿಕಾ ಎಂಟರ್ಟೈನ್ಮೆಂಟ್ (Niharika entertainment)ಅಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್‌ ಚಿತ್ರಕ್ಕೆ ಇದೀಗ ಕನ್ನಡತಿ ಶ್ರದ್ದಾ ಶ್ರೀನಾಥ್ ಎಂಟ್ರಿ ಕೊಟ್ಟು ಎಲ್ಲರ ಮನಸ್ಸಲ್ಲೂ ಸಕ್ಕತ್ತಾಗೆ ಸದ್ದು ಮಾಡಿದ್ದಾರೆ. ವಿಕ್ಟರಿಗೆ ವೆಂಕಟೇಶ್‌ಗೆ(victory Venkatesh) ಜೋಡಿಯಾಗಿ ನಟಿಸುತ್ತಿರುವ ಮೂಗುತಿ ಸುಂದರಿ ಶ್ರದ್ಧ ಶ್ರೀನಾಥ್(Shraddha Srinath) ಅವರ ಫಸ್ಟ್ ಲುಕ್ ಪೋಸ್ಟ್ ಮಾಡಲಾಗಿದೆ. ಈ ಲುಕ್ ನೋಡುಗರ ಮನಸ್ಸನ್ನು ಸಿಕ್ಕಾಪಟ್ಟೆ ಟಚ್ ಮಾಡಿದೆ.

‘ಸೈಂಧವ್’ (saindhav) ಸಿನಿಮಾದಲ್ಲಿ ಶ್ರದ್ದಾ ಶ್ರೀನಾಥ್ ಇವರು ನಟಿಸಿದ್ದು ಆ ಚಲನಚಿತ್ರದಲ್ಲಿ ಇವರು ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನಾಜೂಕಾದ ಮೈ ಗೆ ಸೀರೆಯುಟ್ಟು ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಶ್ರದ್ದಾ, ಕೈಯಲ್ಲಿ ಟಿಫನ್(tiffen) ಬಾಕ್ಸ್ ಹಿಡಿದು ಏನೋ ಬಹಳಷ್ಟು ಗಂಭೀರವಾದ ಆಲೋಚನೆಯಲ್ಲಿ ತೊಡಗಿದ್ದಾರೆ. ಜೆರ್ಸಿ ಸಿನಿಮಾದಲ್ಲಿ ಅದ್ಭುತ ಅಭಿಯನಯದ ಮೂಲಕ ತನ್ನನ್ನು ತಾನು ಅಭಿಮಾನಿಗಳಲ್ಲಿ ಗುರುತಿಸಿಕೊಂಡಿರುವ ಶ್ರದ್ದಾ ಶ್ರೀನಾಥ್(shraddha shreenath) ಇದೀಗ ಸೈಂಧವ್ ಸಿನಿಮಾದಲ್ಲಿ ಮತ್ತೊಮ್ಮೆ ಎಲ್ಲರ ಮನಸ್ಸನ್ನು ಗೆಲ್ಲಲಿದ್ದಾರೆ ಮತ್ತು ಪ್ರೇಕ್ಷಕರ (audience)ಗಮನ ಸೆಳೆಯಲಿದ್ದಾರೆ.

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಚಿತ್ರರಂಗದಲ್ಲಿ ಎಲ್ಲರೂ ಕೇಳಿರುವಂತಹ ವ್ಯಕ್ತಿ. ಇದೀಗ ನವಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ(South industry) ಪ್ರವೇಶಿಸಿದ್ದಾರೆ. ಬಹಳಷ್ಟು ಶ್ರೀಮಂತಿಕೆಯಿಂದ ಕೂಡಿರುವ ‘ಸೈಂಧವ್’ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್(S Manikandan) ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ (kishor thallooru)ಸಹ ನಿರ್ಮಾಪಣದಲ್ಲಿ ಈ ಚಲನಚಿತ್ರ ತಮ್ಮದೇ ಎನ್ನುವ ರೀತಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

ಶೀಘ್ರದಲ್ಲೇ ಇತರ ಪಾತ್ರವರ್ಗ ರಿವೀಲ್ ಮಾಡಲಿರುವ ಚಿತ್ರತಂಡ, ‘ಸೈಂಧವ್’ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಸಮದಯಲ್ಲಿ ಬಹಳ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಸೈಂಧವ್ (saindhav) ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.