Home Entertainment Actress Prema: ಉಪೇಂದ್ರ ಜತೆಗಿನ ಲವ್ ಸ್ಟೋರಿ ಬಗ್ಗೆ ಪ್ರೇಮಾ ಏನಂದ್ರು ? – ರಕ್ಷಿತ್...

Actress Prema: ಉಪೇಂದ್ರ ಜತೆಗಿನ ಲವ್ ಸ್ಟೋರಿ ಬಗ್ಗೆ ಪ್ರೇಮಾ ಏನಂದ್ರು ? – ರಕ್ಷಿತ್ ಶೆಟ್ಟಿ – ರಶ್ಮೀಕಾ ಪ್ರೀತಿಗೂ ಇದೆ ಒಂದು ಸಾಮ್ಯತೆ

Actress Prema

Hindu neighbor gifts plot of land

Hindu neighbour gifts land to Muslim journalist

Actress Prema: ತಮ್ಮ ಅದ್ಭುತ ನಟನೆಯ ಮೂಲಕ ಜನಪ್ರಿಯತೆ ಗಳಿಸಿ ಮನೆಮಾತಾದ ನಟಿ ಪ್ರೇಮಾ (Actress Prema)ನಾನು ನನ್ನ ಹೆಂಡ್ತೀರು, ಯಜಮಾನ , ಕನಸುಗಾರ, ಆಪ್ತಮಿತ್ರ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೇರು ನಟರ ಜೊತೆಗೆ ಬಣ್ಣ ಹಚ್ಚಿದ ಖ್ಯಾತಿ ಹೊಂದಿರುವ ಕೊಡಗಿನ ಕುವರಿ ನಟಿ ಪ್ರೇಮಾ ಮತ್ತು ಉಪೇಂದ್ರ ಅವರ ಜೊತೆಗೆ ಪ್ರೇಮ್ ಕಹಾನಿ ನಡೆದಿತ್ತು ಎಂಬ ಗುಲ್ಲು ಎಲ್ಲೆಡೆ ಹಬ್ಬಿತ್ತು. ಈ ಕುರಿತಂತೆ ನಟಿ ಪ್ರೇಮಾ ಅವರು ಏನಂದ್ರು ಗೊತ್ತಾ?

ಇತ್ತೀಚಿಗೆ ನಡೆದ ಒಂದು ಸಂದರ್ಶನದ ಸಂದರ್ಭ   ಪ್ರೇಮ(Actress Prema) ಅನೇಕ ವಿಚಾರಗಳ ಬಗ್ಗೆ ಬಾಯಿಬಿಟ್ಟಿದ್ದು, ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿಬಿಟ್ಟಿದ್ದಾರೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ನಟಿ ಪ್ರೇಮಾ – ನಟ ಉಪೇಂದ್ರ ಅವರ ಪ್ರೇಮ ಪುರಾಣಕ್ಕೂ ಇಂದಿನ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಪ್ರೇಮಕತೆಗೂ ಸಾಮ್ಯತೆ ಇದೆ ಎಂದು ಹೇಳಬಹುದೇನೋ! ಯಾಕೆ ಅಂತೀರಾ?

ಒಂದೆಡೆ ನಟಿ ಪ್ರೇಮಾ, ಮತ್ತೊಂದೆಡೆ ರಶ್ಮಿಕಾ ಇಬ್ಬರು ಕೊಡಗಿನ ಕುವರಿಯರು ಇನ್ನೊಂದೆಡೆ ನಟ ಉಪೇಂದ್ರ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕರಾವಳಿ ಭಾಗದವರು. ‘ಶ್’ ಚಿತ್ರದಲ್ಲಿ ರೌಡಿ ಒಬ್ಬನನ್ನು ಪ್ರೇಮಿಸುವ ನಾಟಕವಾಡಿದ ಬಳಿಕ ಆತನನ್ನು ಕೇಸ್ ಒಂದರಲ್ಲಿ ಸಿಲುಕಿಸಿ ಡಿಚ್ ಮಾಡುವ ಪಾತ್ರದಲ್ಲಿ ಪ್ರೇಮಾ ಹೈಲೈಟ್ ಆಗಿದ್ದರು. ಶಿವರಾಜ್ ಕುಮಾರ್ ನಟನೆಯ ಈ ಚಿತ್ರ ಸೂಪರ್ ಹಿಟ್ ಆಗಿ ಉಪೇಂದ್ರ ಅವರ ಖ್ಯಾತಿ ಮುಗಿಲು ಮುಟ್ಟಿತ್ತು.ಈ ಸಂದರ್ಭ ಉಪೇಂದ್ರ ಮತ್ತು ಪ್ರೇಮ ಅವರ ನಡುವೆ ಸ್ನೇಹ ಆಕರ್ಷಣೆ ಮತ್ತು ಪ್ರೀತಿ ಮೊಳೆತು ಪ್ರೇಮ್ ಕಹಾನಿ ಶುರುವಾಗಿತ್ತು. ಕೊನೆಗೆ ಜನಪ್ರಿಯತೆಯ ಉತ್ತುಂಗ ತಲುಪಿದ ಪ್ರೇಮ ಅವರು ಉಪೇಂದ್ರ ಅವರಿಗೆ ಕೈಕೊಟ್ಟು ಬಿಟ್ರು. ಆಗ ಉಪೇಂದ್ರ ಅವರು ತುಂಬಾ ನೊಂದು ಕೊಂಡಿದ್ದರಂತೆ. ಹೀಗಾಗಿ, ತಮ್ಮ ಪ್ರೀತಿಗೆ ಮೋಸ ಮಾಡಿದ್ದ ತಾವು ನಟಿಸಿ ನಿರ್ದೇಶಿಸಿದ ‘ ಉಪೇಂದ್ರ ‘ ಚಿತ್ರದಲ್ಲಿ ನಟಿ ಪ್ರೇಮಾಗೆ ವೇಶ್ಯೆಯ ಪಾತ್ರ ನೀಡಿ ಸೇಡು ತೀರಿಸಿಕೊಂಡರು ಎಂದು ಅಂದಿನ ಮಾಧ್ಯಮಗಳು ವರದಿ ಮಾಡಿದ್ದವು.ಈ ಅಂತೆ ಕಂತೆಗಳ ಸಂತೆಯಲ್ಲಿ ಎಷ್ಟು ಹುರುಳಿದೆ ಎಂಬುದು ಬಲ್ಲವರಿಗಷ್ಟೇ ಗೊತ್ತು. ಇನ್ನೂ ರಕ್ಷಿತ್ ಶೆಟ್ಟಿ ಮತ್ತು ನ್ಯಾಶನಲ್ ಕ್ರಷ್ ನಡುವೆ ಪ್ರೇಮ್ ಕಹಾನಿ ನಡೆದು, ಎಂಗೇಜ್ ಮೆಂಟ್ ನಡೆದು ಇದ್ದಕ್ಕಿದ್ದಂತೆ ಬ್ರೇಕಪ್ ಆಗಿದ್ದು ಗೊತ್ತೇ ಇದೆ. ಆದರೆ, ಇದಕ್ಕೆ ಕಾರಣ ಏನು ಅನ್ನೋದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

 

ಚಿತ್ರ ರಂಗದ ಖ್ಯಾತ ನಟ ನಿರ್ದೇಶಕ ಆಗಿರುವ ಉಪೇಂದ್ರ(Upendra) ಅವರ ಜೊತೆಗೆ ಆ ಕಾಲದಲ್ಲಿ ಪ್ರೇಮ ಅವರು ಪ್ರೇಮ ಸಂಬಂಧವನ್ನು ಹೊಂದಿದ್ದರು ಎಂಬ ಸುದ್ದಿ ಒಂದಾನೊಂದು ಕಾಲದಲ್ಲಿ ಸಂಚಲನ ಮಾಡಿತ್ತು. ಈ ಬಗ್ಗೆ ನಟಿ ಪ್ರೇಮ(Prema) ಪ್ರತಿಕ್ರಿಯೆ ನೀಡಿದ್ದು, ಆ ಕಾಲದಲ್ಲಿ ಒಬ್ಬ ನಟ ಹಾಗೂ ನಟಿ ಕೆಲವು ಸಿನಿಮಾಗಳಲ್ಲಿ ಸತತವಾಗಿ ನಟಿಸುತ್ತಾ ಹೋದಾಗಲೆಲ್ಲ ಇಂತಹ ಊಹಾಪೋಹ ಜೊತೆಗೆ ಸುಳ್ಳು ಸುದ್ದಿ ಹಬ್ಬುವುದು ಸಾಮಾನ್ಯವಾಗಿತ್ತು. ಆದರೆ ಇದಕ್ಕೆಲ್ಲ ನಾನು ಚಿಂತಿಸುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳುವ ಮೂಲಕ ಈ ಆರೋಪಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ ನಟಿ ಪ್ರೇಮ ಅವರು ಉಪೇಂದ್ರ ಅವರ ನಿರ್ದೇಶನ ಶೈಲಿಯ ಕುರಿತಂತೆ ಮಾತನಾಡುತ್ತಾ ಅವರೊಬ್ಬ ವಿಭಿನ್ನ ನಿರ್ದೇಶಕ ನಟನೆ ಇರಲಿ ಇಲ್ಲವೇ ನಟಿಯೇ ಇರಲಿ ಅವರಿಗೆ ಸರಿಯೇನಿಸುವ ನಟನೆ ಸಿಗೋವರೆಗೂ ಕೂಡ ಯಾರನ್ನು ಕೂಡ ಬಿಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದು, ಅಷ್ಟರಮಟ್ಟಿಗೆ ಪರ್ಫೆಕ್ಟ್ ನಿರ್ದೇಶಕ ಎನ್ನುವ ಮೂಲಕ ಉಪ್ಪಿ ಅವರ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ : ಜುಜುಬಿ 2500 ರೂಪಾಯಿಗೆ ಫ್ರಿಡ್ಜ್ ಮಾರಾಟ, ಕೊಳ್ಳಲು ಜನರ ನೂಕುನುಗ್ಗಲು!