Home Breaking Entertainment News Kannada ನೀವು ಇಷ್ಟು ಬಿಳಿಯಾಗಿದ್ದು ಹೇಗೆ? ಎಂಬ ಪ್ರಶ್ನೆಗೆ ನಟಿಯ ಖಡಕ್ ಉತ್ತರ | ಕಾಜೊಲ್ ಕೊಟ್ಟ...

ನೀವು ಇಷ್ಟು ಬಿಳಿಯಾಗಿದ್ದು ಹೇಗೆ? ಎಂಬ ಪ್ರಶ್ನೆಗೆ ನಟಿಯ ಖಡಕ್ ಉತ್ತರ | ಕಾಜೊಲ್ ಕೊಟ್ಟ ಉತ್ತರ ವೈರಲ್ !

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ಖ್ಯಾತ ನಟಿ ಕಾಜೊಲ್ ಟ್ರೋಲಿಗರ ಪ್ರಶ್ನೆಗೆ ಖಡಕ್ ಆಗಿ ಉತ್ತರ ನೀಡಿದ್ದು, ಸದ್ಯ ಕಾಜೊಲ್ ಕೊಟ್ಟ ಉತ್ತರ ವೈರಲ್ ಆಗಿದೆ. ಹಲವಾರು ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನಮನಗೆದ್ದಿರುವ ಕಾಜೊಲ್ ಅಪರೂಪಕ್ಕೆ ಟ್ರೋಲ್ ಆಗುತ್ತಿರುತ್ತಾರೆ. ಈ ಹಿಂದೆ ನೆಟ್ಟಿಗರು ಪ್ರಶ್ನೆಯೊಂದನ್ನು ಪದೇ ಪದೇ ಟ್ರೋಲ್ ಮಾಡುತ್ತಿದ್ದು, ಇದೀಗ ಕಾಜೊಲ್ ಟ್ರೋಲ್ ಗೆ ಸರಿಯಾದ ಉತ್ತರನೇ ನೀಡಿದ್ದಾರೆ. ಏನು ಉತ್ತರ ? ನೋಡೋಣ.

ಸುಂದರ ತ್ವಚೆ ಹೊಂದಿರುವ ಕಾಜೋಲ್ ಟ್ರೋಲ್ ಆಗಿರೋದು ತನ್ನ ಮುಖದ ಸೌಂದರ್ಯದ ವಿಚಾರಕ್ಕೇ. ಹಿಂದೆ ಮತ್ತು ಇಂದಿಗೂ ಅದೇ ಚಾರ್ಮ್ ಹೊಂದಿರುವ ಕಾಜೊಲ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ನಟಿಯ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದ್ದರೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಇರುತ್ತಾರೆ. ಸದಾ ಒಂದಿಲ್ಲೊಂದು ಪೋಸ್ಟ್ ಅಪ್ಲೋಡ್ ಮಾಡುತ್ತಾರೆ.

ಕಾಜೋಲ್ ಗೆ ಹಲವರು ಪ್ರಶ್ನೆಗಳನ್ನ ಕೇಳಿದ್ದು, ಟ್ರೋಲ್ ಮಾಡಿದ್ದು ಉಂಟು, ಯಾವ ವಿಚಾರಕ್ಕೆ ಅಂದ್ರೆ ಮುಖದ ಬಣ್ಣದ ವಿಚಾರಕ್ಕೆ. ನೆಟ್ಟಿಗರು ನೀವು ಇಷ್ಟು ಬಿಳಿಯಾಗಿದ್ದು ಹೇಗೆ ? ಅಂತ ಪ್ರಶ್ನೆ ಕೇಳಿದ್ದಾರೆ. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಪ್ರಾರಂಭದ ದಿನಗಳಲ್ಲಿ ಕಾಜೊಲ್ ಗೋಧಿ ಬಣ್ಣ ಹೊಂದಿದ್ದರು. ನಂತರದ ದಿನಗಳಲ್ಲಿ ಕಾಜೊಲ್ ಪೂರ್ತಿ ಬಿಳಿಯಾದರು. ಈ ಬದಲಾವಣೆ ಕಂಡು ಅಭಿಮಾನಿಗಳು ಆಶ್ಚರ್ಯಚಕಿತರಾದರು. ಮುಖದ ಹೊಳಪು ಕಂಡು ಪ್ರಶ್ನೆಗಳ ಮಳೆ ಸುರಿದಿದ್ದಾರೆ. ಕಾಜೊಲ್ ಇಷ್ಟು ಬಿಳಿಯಾಗಿದ್ದು ಹೇಗೆ ? ಎಂಬ ಈ ಪ್ರಶ್ನೆ ನಟಿಗೆ ಯಾವಾಗಲೂ ಎದುರಾಗುತ್ತಲೇ ಇತ್ತು. ಈ ಪ್ರಶ್ನೆಗೆ ಇದೀಗ ಕಾಜೊಲ್ ಖಡಕ್ ಉತ್ತರ ಕೊಟ್ಟಿದ್ದು, ವೈರಲ್ ಆಗಿದೆ.

ನಟಿ ತಮ್ಮ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಪ್ರಶ್ನೆಗೆ ನಾಂದಿ ಹಾಡಿದ್ದಾರೆ. ‘ನಾನು ಹೇಗೆ ಬಿಳಿಯಾಗಿದ್ದೇನೆ ಎಂದು ನನ್ನನ್ನು ಕೇಳುವ ಎಲ್ಲರಿಗೂ’ ಎಂದು ಕ್ಯಾಪ್ಷನ್ ನೀಡಿ ಫೋಟೋ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಕಾಜೊಲ್ ಸಂಪೂರ್ಣವಾಗಿ ಮುಖವನ್ನು ಮುಚ್ಚಿಕೊಂಡಿದ್ದಾರೆ. ಕಪ್ಪು ಬಣ್ಣದ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಂಡಿದ್ದು, ಕಣ್ಣಿಗೆ ಸನ್‌ಗ್ಲಾಸ್ ಹಾಕಿದ್ದಾರೆ. ಈ ಪೋಟೋವನ್ನು ಶೇರ್ ಮಾಡಿ ಬಿಳಿಯಾಗಲು ಕಾರಣ ಇದೆ ಎಂದು ಹೇಳಿದ್ದಾರೆ. ಸದ್ಯ ನಟಿಯ ಉತ್ತರ ವೈರಲ್ ಆಗಿದೆ. ಹಾಗೇ ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ.