Home Entertainment Actor Darshan: ಜೈಲು ಸೇರಿರುವ ದರ್ಶನ್ ಕೈಯಲ್ಲಿ ಕಾಫಿ ಮಗ್ ಜೊತೆಗೆ ಸಿಗರೇಟ್!? ಫೋಟೋ ವೈರಲ್

Actor Darshan: ಜೈಲು ಸೇರಿರುವ ದರ್ಶನ್ ಕೈಯಲ್ಲಿ ಕಾಫಿ ಮಗ್ ಜೊತೆಗೆ ಸಿಗರೇಟ್!? ಫೋಟೋ ವೈರಲ್

Hindu neighbor gifts plot of land

Hindu neighbour gifts land to Muslim journalist

Actor Darshan: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಪರಪ್ಪನ ಅಗ್ರಹಾರ ಜೈಲು ಸೇರಿ ಎರಡು ತಿಂಗಳು ಆದರೂ ಇದುವರೆಗೆ ಎಷ್ಟೇ ಪ್ರಯತ್ನ ಪಟ್ಟರು ದರ್ಶನ್ ಬಿಡುಗಡೆ ಬಗ್ಗೆ ಯಾವುದೇ ಪಾಸಿಟಿವ್ ಮಾಹಿತಿ ಸಿಕ್ಕಿಲ್ಲ. ಆದ್ರೆ ಇದೆಲ್ಲದರ ಹೊರತು ಜೈಲಿನಲ್ಲಿ ದರ್ಶನ್ ಅವರಿಗೆ ರಾಜಭೋಗ ಸಿಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ದರ್ಶನ್​ ಅವರ ಒಂದು ಫೋಟೋ ವೈರಲ್​ ಆಗಿದೆ.

ಹೌದು, ದರ್ಶನ್ ಅವರು ಸಿಗರೇಟು ಸೇದುತ್ತಿರುವುದನ್ನು ಮತ್ತು ಕಾಫಿ ಕುಡಿಯುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ವೈರಲ್ ಆದ ಫೋಟೋದಿಂದಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ನಮಗೆಲ್ಲ ತಿಳಿದಿರುವಂತೆ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಿದ ಆರೋಪ ದರ್ಶನ್ ಮೇಲಿದೆ. ಹಾಗಾಗಿ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಆದ್ರೆ ಈ ಫೋಟೋ ನೋಡಿದಾಗ ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ.

ಇಲ್ಲಿ ದರ್ಶನ್ ವಿಶೇಷ ಬ್ಯಾರಕ್‌ನಿಂದ ಹೊರಬಂದು ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಒಂದು ಕೈಯಲ್ಲಿ ಕಾಫಿ ಲೋಟ ಹಾಗೂ ಇನ್ನೊಂದು ಕೈಯಲ್ಲಿ ಸಿಗರೇಟು ಕೂಡ ಇದೆ. ಸದ್ಯ ನಟನಿಗೆ ಬೇರೆ ಯಾವ ಸೌಕರ್ಯಗಳನ್ನು ಒದಗಿಸಲಾಗಿದೆ ಎಂಬ ಪ್ರಶ್ನೆಯನ್ನು ಈ ಫೋಟೋ ಹುಟ್ಟುಹಾಕಿದೆ. ಅಲ್ಲದೆ ಜೈಲು ಅಧಿಕಾರಿಗಳ ವರ್ತನೆ ಬಗ್ಗೆ ಅನುಮಾನ ಕೂಡ ಮೂಡಿದೆ. ಒಟ್ಟಿನಲ್ಲಿ ಈ ಫೋಟೋ ಅಸಲಿಯತ್ತು ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.